ಮೂಲಂಗಿ ಪರೋಟ
ತುರಿದ ಮೂಲಂಗಿ ೨ ಕಪ್, ಈರುಳ್ಳಿ ೧, ಬೆಳ್ಳುಳ್ಳಿ ಪೇಸ್ಟ್ ೩ ಚಮಚ, ಗರಂ ಮಸಾಲಾ - ೧ ಚಮಚ, ಕಾಳು ಮೆಣಸು ಹುಡಿ - ೧ ಚಮಚ, ಕೊತ್ತಂಬರಿ ಹುಡಿ ೩ ಚಮಚ, ಗೋಧಿ ಹಿಟ್ಟು ೧ ಕಪ್, ಅಡುಗೆ ಎಣ್ಣೆ ಅಥವಾ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು.
ಮೊದಲಿಗೆ ತುರಿದ ಮೂಲಂಗಿಯನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿರಿ. ಈರುಳ್ಳಿ, ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಹುಡಿ, ಗರಂ ಮಸಾಲಾ, ಕಾಳುಮೆಣಸು ಹುಡಿ, ಕೊತ್ತಂಬರಿ ಹುಡಿ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಬೇಯಿಸಿದ ಮೂಲಂಗಿಗೆ ಒಗ್ಗರಣೆ ಮಾಡಿ ಬೇಯಿಸಿ.
ಗೋಧಿ ಹಿಟ್ಟನ್ನು ಸಾಕಷ್ಟು ನೀರು, ರುಚಿಗೆ ಬೇಕಾದಷ್ಟು ಉಪ್ಪು ಹಾಕಿ ಕಲಸಿ. ಅಗಲವಾಗಿ ಇದನ್ನು ಲಟ್ಟಿಸಿ. ಮಧ್ಯಕ್ಕೆ ಬೇಯಿಸಿದ ಮೂಲಂಗಿಯ ಮಿಶ್ರಣವನ್ನು ಇಡಿ. ತದನಂತರ ಇದನ್ನು ಅರ್ಧಕ್ಕೆ ಮಡಚಿ. ಇದನ್ನು ತ್ರಿಭುಜಾಕಾರದಲ್ಲಿ ಮಡಚಿ ಚಪಾತಿಯನ್ನು ಪುನಃ ಲಟ್ಟಿಸಿ. ಒಂದು ಪ್ಯಾನ್ ಗೆ ಒಂದು ಚಮಚದಷ್ಟು ಎಣ್ಣೆ ಅಥವಾ ತುಪ್ಪವನ್ನು ಹಾಕಿ ಲಟ್ಟಿಸಿದ ಪರೋಟಾವನ್ನು ಹಾಕಿ ಬೇಯಿಸಿ. ಬೇಕಾದಲ್ಲಿ ಪರೋಟಾದ ಸುತ್ತಲೂ ಎಣ್ಣೆಯನ್ನು ಹಾಕಿ ಚೆನ್ನಾಗಿ ಬೇಯುವವರೆಗೆ ಎರಡೂ ಬದಿ ಬಿಸಿಮಾಡಿ.