ಮೆಂತ್ಯ ಸೊಪ್ಪಿನ ಪಲಾವ್

ಮೆಂತ್ಯ ಸೊಪ್ಪಿನ ಪಲಾವ್

ತಯಾರಿಸುವ ವಿಧಾನ

1. ಹಸಿಮೆಣಸಿನಕಾಯಿ - 6-8, ಕೊತ್ತಂಬರಿ ಸೊಪ್ಪು, ಪುದೀನ ರುಬ್ಬಿಕೊಳ್ಳಿ.

2. ಚಕ್ಕೆ, ಲವಂಗ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ(1) ಪ್ರತ್ಯೇಕವಾಗಿ ರುಬ್ಬಿಕೊಳ್ಳಿ.

3. ತೆಂಗಿನಕಾಯಿ ರುಬ್ಬಿ ಹಾಲು ತೆಗೆಯಿರಿ.

4. ಬಾಣಲೆಯಲ್ಲಿ ಎಣ್ಣೆ, ಒಂದು ಈರುಳ್ಳಿ, ಎರಡು ಟೊಮಾಟೊ ಮತ್ತು ರುಬ್ಬಿದ ಎರಡೂ ಮಸಾಲೆಗಳನ್ನೂ ಹಾಕಿ
ಫ್ರೈ ಮಾಡಿ. ಬಟಾಣಿ ಹಾಕಿ, ನಂತರ ಮೆಂತ್ಯ ಸೊಪ್ಪನ್ನು ಹಾಕಿ ಫ್ರೈ ಮಾಡಿ. ನೆನೆದ ಅಕ್ಕಿಯನ್ನು ಹಾಕಿ
ತೆಂಗಿನ ಹಾಲು ಮತ್ತು ನೀರು, ಉಪ್ಪು ಹಾಕಿ ಕುಕ್ಕರ್ ಮುಚ್ಚಿ ಎರಡು ಸೀಟಿ ಹೊಡೆಸಿ.

ಮೆಂತ್ಯ ಸೊಪ್ಪಿನ ಪಲಾವ್ ರೆಡಿ!!

ಯಶೋದ (ನಮ್ಮಮ್ಮ)

೩-೪

30

ಮೆಂತ್ಯ ಸೊಪ್ಪು ಸಿಗದಿದ್ದಲ್ಲಿ ಪಾಲಕ್ ಸೊಪ್ಪು ಬಳಸಬಹುದು. ಇದೇ ಮಸಾಲೆಗೆ ಮೆಂತ್ಯ ಸೊಪ್ಪಿನ
ಬದಲಾಗಿ ತರಕಾರಿ ಹಾಕಿ ತರಕಾರಿ ಪಲಾವ್ ಕೂಡ ಮಾಡಬಹುದು.

1/2 kg ಅಕ್ಕಿ, ಹಸಿಮೆಣಸಿನಕಾಯಿ - 6-8, ಕೊತ್ತಂಬರಿ ಸೊಪ್ಪು, ಪುದೀನ

ಚಕ್ಕೆ-6inch, ಲವಂಗ-8, ಶುಂಠಿ-2inch, ಬೆಳ್ಳುಳ್ಳಿ-2ಗೆಡ್ಡೆ, ಈರುಳ್ಳಿ-2, ಹಸಿ ಅಥವಾ ಬೇಯಿಸಿದ ಬಟಾಣಿ,

ಮೆಂತ್ಯ ಸೊಪ್ಪು- ಎರಡು ಸಣ್ಣ ಕಟ್ಟು, ತೆಂಗಿನ ಕಾಯಿ -ಅರ್ಧ ಹೋಳು.