ಮೊಗ್ಗು ಅರಳಿ

ಮೊಗ್ಗು ಅರಳಿ

ಕವನ

ಮೊಗ್ಗು ಬಿರಿಯುತಲಿ ಚೆಲುವು ತುಂಬುವುದು

ಹಿಗ್ಗು ತುಂಬುತಲಿ ಜೀವ ಚಿಗುರುವುದು

ತಗ್ಗಿ ಬಗ್ಗಿರದೆ ಮುಂದೆ ಸಾಗುವುದು

ನುಗ್ಗಿ ನಡೆಯುತಿರೆ ಛಲವು ಮೂಡುವುದು

 

ಮನದಲಿ ಮೂಡಿದ ಚೆಲುವದು ಬಿರಿದಿದೆ

ತನುವದು ಸುಂದರ ಕೊಡುಗೆಯ ನೀಡಿದೆ

ಜನವದು ಚೆಲುವಲಿ ಹಿತವನು ಕಂಡಿದೆ

ಮಿನುಗುವ ಬೆಳಕಲಿ ಸುತ್ತಲು ಕುಣಿದಿದೆ

 

ಮನುಜ ರೂಪ ಸಿಕ್ಕ ಮೇಲೆ

ಕನಸು ಬೇಕು ತನುವಿನೊಳಗೆ

ಧನವು ಸಿಗುವ ಬಗೆಯು ಸಾಕು

ನನಸುಯಿರುತ ಬಾಳ ಬೇಕು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್