ಮೋಹಕ ಗಝಲ್
ಕವನ
ಮಂದಗಮನೆ ಚೆಂದದಿಂದಲಿ ಬಂದಳೇ ನನ್ನ ಮನ ಮಂದಿರಕೆ ಇಂದು
ಸುಂದರಾಂಗಿಯೆ ಚೆಲುವಂದದಲಿ ನಿಂದಳೇ ಎನ್ನ ತನು ಮಧುರಕೆ ಇಂದು
ಏತರದ ಕಾತರವ ಹೇಳಿಕೊಳ್ಳಲು ಸಖಿ ನಿನಗೇತರ ಭಯ
ಮಾತಿರದ ಮೌನವು ಹೇಳ ಬಯಸಿದೆ ಮನ ಆತುರಕೆ ಇಂದು
ಬಾನೊಳಗಿನ ಮುತ್ತು ಜಾರಿ ಬುವಿಗೆ ಬಂದಿದೆ ಸವಿದೊಮ್ಮೆ ನೋಡು
ಕನಸೊಳಗಿನ ಸೌಂದರ್ಯ ಹರಿದು ಬಂದಿದೆ ಸುಮ ಚೆಲುವಿಕೆ ಇಂದು
ಮಣ್ಣಿನೊಳಗಿನ ಗುಣವೇ ಬತ್ತಿರದ ಕಡಲಿಗೆ ಋಣವಾಗಿದೆ ಈಗ ತಿಳಿಯಿತೇನು
ಜಾಣರೊಳಗಿನ ಸಂತಸವು ಬಹುಬೇಗ ಚಿಂತನೆಗೆ ಮತ್ತೆ ಸಾಗುವಿಕೆ ಇಂದು
ಈಶನಾಡಿದ ಬದುಕ ಮಜಲುಗಳಲ್ಲಿ ಪ್ರತಿಬಿಂಬವು ನಿನಗೆ ಕಂಡಿದೆ ಸಖಿಯೆ
ಅತಿಯಿರದ ಸಪ್ನಗಳ ಮುದದಿಂದ ಕೈಹಿಡಿದು ಹೀಗೇ ಕಾಯುವಿಕೆ ಇಂದು
-ಹಾ ಮ ಸತೀಶ, ಬೆಂಗಳೂರು
ಚಿತ್ರ್
