ಮೋ.....ಹಿತ
ಕವನ
ಕಾಂಚಾಣಕೆ ಮೋಹಿತನಾಗಿ
ಬಂದೆ ನಾನಿಲ್ಲಿ,
ಸಾಕಾಯ್ತೀ....ಗಲ್ಫ್ ಜೀವನ,
ಸುಡುವುದು ಮೈ ಮನ.
"ನೀ ನನ್ನಗಲಬೇಡ"
ಪ್ರತಿರೋಧ ಇತ್ತು - ಕರುನಾಡ ತಾಯಿಯ,
"ನೀ ಹೋಗಲೇ....ಬೇಡಾ"
ಕರುಳಿನ ಕೂಗು - ಹೆತ್ತ ತಾಯಿಯ.
ಹಚ್ಚ ಹಸಿರು ನೆಲ, ಜಲಧಾರೆಗಳ
ಸೊಬಗಿನ ನೆನಪು ಕಾಡದೇ ಇರದು,
ಕಣ್ಣು ಹಾಯಿಸಿದಷ್ಟು ಕಲ್ಲು,ಬಂಡೆ,
ಮರುಭೂಮಿಗಳ ಕಾಣೋ ಸ್ಥಿತಿ ಇಂದು.
ಯಂತ್ರ, ಮೂರ ಹೊತ್ತು, ತಾನತ್ತು
ತಂಪಿರಿಸೋ ಕೋಣೆ ಬೇಡವಾಗಿದೆ,
ಪ್ರಕೃತಿ ಗೆಳಯ ನಾನು,
ಪೂರ್ಣಿಮೆಯ ತಂಗಾಳಿ ಬೇಕಾಗಿದೆ.
"ಪಾಶ್ಚಾತ್ಯ ಪಂಚತಾರೆಯ ಕಾಫಿ" ಬೇಸರಿಸಿದೆ,
"ಮುರುಕು ತೊಟ್ಟಿಲಂಗಡಿಯ ಚಹಾ" ಬಯಸಿದೆ.
ಮರಳಿ ಬರಲೆನೆಂದೇ ಮನಸಾದರೂ,
ಬಚ್ಚಿಟ್ಟ ಕನಸು ಚೀರುವುದು "ಹೋಗದಿರು"
ಕಾಂಚಾಣಾ....ನೀನ್ ಹೀಗೇನಾ ?
ಅಥವ
ನಾನ್ ಹಿಂಗೇನಾ ??
Comments
ಉ: ಮೋ.....ಹಿತ
In reply to ಉ: ಮೋ.....ಹಿತ by RENUKA BIRADAR
ಉ: ಮೋ.....ಹಿತ