ಮೌನಿ

ಮೌನಿ

ಕವನ

ಮಾತು ಮಾತು ಮಾತು

ಬರೀಯ ಮಾತು!

ಸಂತೆ ಬೀದಿಯಲಿ ಮಾತು

ಅಡುಗೆ ಕೋಣೆಯಲ್ಲಿ ಮಾತು

ನೆರೆಮನೆಯವರ ಕಂಡರೆ ಮಾತು

ಸಿಕ್ಕ ಸಿಕ್ಕವರೊಂದಿಗೆಲ್ಲಾ ಮಾತು

ಅಮ್ಮಾ ಅದೆಷ್ಟು ಮತನಾಡುತ್ತೀಯಾ?

 

ಮಾತಿಗೂ ಕಡಿವಾಣವಿರಬೇಕು

ಬಾಯಿ ಇದೆಯೆಂದು ಮಾತಾಡಬಾರದು

ಹೇಳಬೇಕಾದುದೇನು?

ಹೇಳಬಾರದ್ದೇನು?

ತಿಳಿದು ಮತಾಡಬೇಕು

ಮಾತು ಕಲಿಸಿದ ಅಮ್ಮನಿಗೇ

ಮಗನ ಉಪದೇಶ!

 

ಎಲ್ಲರೊಂದಿಗೂ ಎಲ್ಲವನ್ನೂ ಮಾತನಾಡುವ ಅವಳು

ಎಲ್ಲವನ್ನೂ ಹೇಳಿಕೊಂಡಳೆಂದುಕೊಂಡೆಯಾ!

ಅವಳು ಬಚ್ಚಿಟ್ಟ ನೋವ ತಿಳಿಯಲು

ಅವಳು ಬಚ್ಚಿಟ್ಟ ಕನಸ ಕಾಣಲು

ಮತ್ತೆ ಅವಳದೇ ಗರ್ಭದಲಿ

ಹುಟ್ಟಿ ಬರಬೇಕಷ್ಟೇ...

ನಿಜಕ್ಕೂ ಮೌನಿ ಅವಳು...

 

-ನಿಶ್ಮಿತಾ ಪಳ್ಳಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್