ಮ್ಯೂಸಿಕ್ ಹುಚ್ಚಿ

ಮ್ಯೂಸಿಕ್ ಹುಚ್ಚಿ

ಕವನ

ಕೈಯಲಿ ಸೆಲ್ಲ್ ಫೋನು
ಕಿವಿಯಲಿ ಹೆಡ್ ಫೋನು
ಇದ್ದರೆ ಸಾಕೀ ಹುಡುಗೀಗೆ
ಎದುರಲಿ ಬಸ್ಸಿಗೆ ಬಸ್ಸೇ ಹೊಡೆದರೂ
ಎಚ್ಚರವಾಗದಿ ಮರುಳೀಗೆ

ಅದರ ಟ್ಯೂನಂತೂ ಸೂಪರ್ರು
ಇದರ ಬೀಟ್ಸಂತೂ ಮಾರ್ವಲಸ್
ಅದರ ಪಿಚ್ಚಂತೂ ಆವ್ಸಮ್ಮು
ಇವೇ ಇವಳ ಸ್ವರ ಸಂಪತ್ತು

ಸರಿಗಮ ನುಡಿಯಲು ಬರದಿದ್ರೂ
ಬೇಕು ಕ್ಲಾಸಿಕಲ್ ಸಾಂಗ್ಸು
ರಿದಮಿನ ಗಂಧವೆ ಇರದಿದ್ರೂ
ಬೇಕು ರಾಕಂಡ್ರೋಲ್ ಮ್ಯೂಸಿಕ್ಕು

ಎ ಬಿ ಸಿ ಕಲಿಯದೆ ಇದ್ರೂ
ಬೇಕೀ ಹುಡುಗಿಗೆ ವೆಸ್ಟರ್ನು
ಕ್ಲಾಪು ಹಾಕಲೂ ಬಾರದು ಕೈ
ಸ್ಟೆಪ್ಪು ಹಾಕುವಳು ತೈ ತೈ ತೈ

ತೈ ತಕ ತೈ..

Comments