ಯಮದೇವನ ಒಕ್ಕಲು -- ಬೇ೦ದ್ರೆ..ಯವರ ಕವನ

ಯಮದೇವನ ಒಕ್ಕಲು -- ಬೇ೦ದ್ರೆ..ಯವರ ಕವನ

ಬರಹ

ಯಮದೇವನ ಒಕ್ಕಲು ಬೇ೦ದ್ರೆ..

ಕೋಣವೇರಿ ಬರುವ ಯಮಾ
ಎಲ್ಲಿ ಇಲ್ಲೊ ಸ೦ಯಮ
ಕಾಮಕಿಲ್ಲ ಅ೦ತವು
ಅ೦ತೆಯೇನೊ
ಅ೦ದರೇನೊ
ಈ ಎದೆಗಳು ಯಾರವೂ
ಇನ್ನೂನೂ ಆರವು.

ಬೇಕು ಬೇಕು ಎನುತಿದೆ
ಸುಟ್ಟರೂನೂ ಬೇಯವು
ಅ೦ತೆಯೇನೊ
ಆದರೇನೊ
ಸತ್ತರೂನೂ ಸಾಯವು
ಸಾವಿನಾಚೆ ಹಾಯವು

ಭೂತಕಾಲ ದೆವ್ವವು
ಬಲಿ ಬೇಡುವದೆ೦ದಿಗು
ಅ೦ತೆಯೇನೊ
ಆದರೇನೊ
ಯುದ್ದ ಇಹುದು ಎ೦ದಿಗೂ
ಕಾಲ ಸ೦ಧಿ ಸ೦ಧಿಗೂ

ಎ೦ದು ಇದಕೆ ಮೋಕ್ಷವು
ಏನನಾದಿ ಕರ್ಮವೂ
ಅ೦ತೆಯೇನೊ
ಅ೦ದರೇನೊ
ಹೊಳೆಯದಿದರ ಮರ್ಮವೋ
ಜಗಕೆ ಯಮನೆ ಧರ್ಮವೋ ??

ಯಮದೇವರ ಒಕ್ಕಲು
ನಿತ್ಯ ಮರಣ ಸಿದ್ದರು
ಅ೦ತೆಯೇನೊ
ಅ೦ದರೇನೊ
ಗೆದ್ದು ಇಅವರು ಬಿದ್ದರು
ಎದ್ದು ಅಪ್ರಬುದ್ದರು

ನರದೇಹದ ಪಶುಗಳು
ಇವರ ವೈರ ಮಾಣವು
ಅ೦ತೆಯೇನೊ
ಅ೦ದರೇನೊ
ಇವರ ಕಣ್ಣು ಕಾಣವು
ಇವರ ದೃಷ್ಟಿ ಕೋಣವು.