ಯಳವತ್ತಿ ಕವನ ಶೀರ್ಷಿಕೆ:- "ಮೂರು ಮುತ್ತುಗಳು"

ಯಳವತ್ತಿ ಕವನ ಶೀರ್ಷಿಕೆ:- "ಮೂರು ಮುತ್ತುಗಳು"

ಕವನ

 

ನಾ 
ನನ್ನವಳ
ಅಮ್ಮನಾಗಿದ್ದರೆ 
ಎಷ್ಟು ಚಂದವಿತ್ತು,
ಅವಳ ಮುಖವನ್ನು ನಾನೇ
ಮೊದಲನೇ ಬಾರಿಗೆ ನೋಡಬಹುದಿತ್ತು..


ನಾ 
ಕನ್ನಡದ ಸ್ವರವಾಗಿದ್ದರೆ
ಎಷ್ಟು ಅಂದವಿತ್ತು,
ನನ್ನವಳಾಡಿದ ತೊದಲ್ನುಡಿಯ
ಅಕ್ಷರವಾದರೂ 
ನಾನಾಗಬಹುದಿತ್ತು..


ನಾ
ನನ್ನವಳು ಆಡಿದ
ಕುಂಟೆಬಿಲ್ಲೆಯಾಗಿದ್ದರೆ 
ಎಷ್ಟು ಅಂದವಿತ್ತು,
ಅವಳ ಮೃದುವಾದ
ಪಾದಗಳನ್ನು 
ಸ್ಪರ್ಷಿಸಬಹುದಿತ್ತು..


ನಾ
ನನ್ನವಳ ಪುಸ್ತಕದೊಳಗೆ 
ಬಚ್ಚಿಟ್ಟ ನವಿಲುಗರಿಯಾದರೆ 
ಎಷ್ಟು ಅಂದವಿತ್ತು,
ಮರಿ ಹಾಕುವೆನೆಂದು
ಅವಳನ್ನು ಕಾಯಿಸಬಹುದಿತ್ತು..


ನಾ 
ಸಮಯವಾಗಿದ್ದರೆ
ಎಷ್ಟು ಚಂದವಿತ್ತು,
ನನ್ನವಳ ನೋಡುತ್ತಾ
ನಿಂತುಬಿಡಬಹುದಿತ್ತು..




ನಾ
ನನ್ನವಳ ನೆನಪುಗಳಾಗಿದ್ದರೆ
ಎಷ್ಟು ಚಂದವಿತ್ತು,
ಅವಳ ನೆನಪುಗಳಲ್ಲಾದರೂ
ಜೀವಂತವಾಗಿರಬಹುದಿತ್ತು..


ನಾ
ನನ್ನವಳು ಮುಡಿಯೋ
ಸಂಪಿಗೆಯಾಗಿದ್ದರೆ
ಎಷ್ಟು ಅಂದವಿತ್ತು,
ನನ್ನವಳ ಹೆರಳುಗಳನ್ನು
ಎಣಿಕೆ ಮಾಡಲು
ಪ್ರಯತ್ನಿಸಬಹುದಿತ್ತು...


ನಾ
ನನ್ನವಳ ಕನ್ನಡಿಯಾಗಿದ್ದರೆ
ಎಷ್ಟು ಚಂದವಿತ್ತು,
ದಿನಂಪ್ರತಿ ನನ್ನವಳ
ಸೌಂದರ್ಯವನ್ನು 
ಆಸ್ವಾದಿಸಬಹುದಿತ್ತು..


ನಾ 
ನನ್ನವಳ ಪುಸ್ತಕವಾಗಿದ್ದರೆ
ಎಷ್ಟು ಚಂದವಿತ್ತು,
ಅವಳನ್ನು ಬಾಚಿ ತಬ್ಬಿಕೊಳ್ಳುವ
ಅವಕಾಶವಾದರೂ
ಸಿಗುತ್ತಿತ್ತು..



ನಾ
ನನ್ನವಳ ಹೃದಯವಾಗಿದ್ದರೆ
ಎಷ್ಟು ಚಂದವಿತ್ತು,
ನನ್ನನ್ನೇ ಪ್ರೀತಿ ಮಾಡುವಂತೆ
ಶಿಫಾರಸು ಮಾಡಬಹುದಿತ್ತು,..

ನಾ 
ನನ್ನವಳ ಮೊಬೈಲ್
ನೆಟ್ ವರ್ಕ್ ಆಗಿದ್ದರೆ 
ಎಷ್ಟು ಅಂದವಿತ್ತು,
ಸದಾ ಅವಳನ್ನೇ
ಹಿಂಬಾಲಿಸಬಹುದಿತ್ತು,




ನಾ
ಕನ್ನಡ ಪದಗಳಾಗಿದ್ದರೆ 
ಎಷ್ಟು ಅಂದವಿತ್ತು,
ನನ್ನವಳ ಬಾಯಲ್ಲಿ
ನಲಿದಾಡಬಹುದಿತ್ತು..

ನಾ
ನನ್ನವಳು ಮಲಗೋ
ಮಂಚವಾಗಿದ್ದರೆ 
ಎಷ್ಟು ಚಂದವಿತ್ತು,
ನನ್ನವಳ ಸಿಹಿ ಕನಸುಗಳನ್ನಾದರೂ
ಹಂಚಿಕೊಳ್ಳಬಹುದಿತ್ತು...

ನಾ 
ನನ್ನವಳ ಮಗುವಾಗಿದ್ದರೆ
ಎಷ್ಟು ಚಂದವಿತ್ತು,
ಅವಳ ಪ್ರೀತಿಯನ್ನು
ಕದಿಯಬಹುದಿತ್ತು..

ನಾ
ನನ್ನವಳ ಉಸಿರಾಗಿದ್ದರೆ
ಎಷ್ಟು ಚಂದವಿತ್ತು,
ಕೊನೆಯವರೆಗೂ 
ಅವಳ ಜೊತೆಗಿರಬಹುದಿತ್ತು..

ನಾ
ನನ್ನವಳ ಬಳಿಯಿದ್ದಿದ್ದರೆ
ಎಷ್ಟು ಅಂದವಿತ್ತು,
ಈ ಕವನವನ್ನು ಹೇಳಿ
ಖುಷಿಪಡಿಸಿ,
ಮೂರು ಮುತ್ತುಗಳನ್ನಾದರೂ
ಪಡೆಯಬಹುದಿತ್ತು..


-
ಯಳವತ್ತಿ

Comments