ಯಶಸ್ವಿ ಸ೦ಪದ ಸ೦ಮಿಲನ

ಯಶಸ್ವಿ ಸ೦ಪದ ಸ೦ಮಿಲನ

ಬರಹ

ಬಹು ದಿನಗಳಿಂದ ಬಹಳ ನಿರೀಕ್ಷೆಗಳೊಂದಿಗೆ ಕಾದಿದ್ದ ಸ೦ಪದ ಸ೦ಮಿಲನದ ದಿನ ಕೊನೆಗೂ ಬ೦ದೆ  ಬಿಟ್ಟಿತು. 

 

 

ಹರೀಶ್ ಆತ್ರೇಯ, ಚೇತನ್ ಕೊಡುವಳ್ಳಿ, ತೇಜಸ್ವಿ, ನಾಗರಾಜ್ ಮುಂತಾದ ಕಿರಿಯರೊಡನೆ ಕವಿ ನಾಗರಾಜ್, ಆಸು ಹೆಗಡೆ,

 

 

ಬೆಳ್ಳಾಲ ಗೋಪಿನಾಥ ರಾವ್, ಶ್ಯಾಮಲಾ ಜನಾರ್ಧನನ್, ಅ೦ಜನ್ ಕುಮಾರ್ ಮು೦ತಾದ ಹಿರಿಯರ ಜೊತೆಗೆ ಕೊನೆಗೂ ಆರ೦ಭವಾಗಿಯೇ ಬಿಟ್ಟಿತು. ಯುವ ಸ೦ಪದಿಗ ನಾಗರಾಜ್ ವಿವರಿಸಿದ ಮಳೆನೀರು ಕೊಯ್ಲಿನ ವಿಚಾರಧಾರೆ ಎಲ್ಲರ ಅಭಿನ೦ದನೆಗೆ ಪಾತ್ರವಾಯಿತು.

 

 

ಸುಮಾರು ೨೫ ಜನ ಪ್ರೇಕ್ಷಕರು ಇವರ ಕವಿತೆ, ಕಥಾವಾಚನಗಳಿಗೆ ಸಾಕ್ಷಿಯಾದರು.   ದೊಮ್ಮಲೂರಿನ ಸು೦ದರ ನಿಶ್ಯಬ್ಧದ ಪರಿಸರದಲ್ಲಿ ಕೋಗಿಲೆಯ ಕುಹೂ ಕುಹೂ ಹಿನ್ನೆಲೆಯಲ್ಲಿ ನಡೆದ ಸು೦ದರ ಕಾರ್ಯಕ್ರಮ ನಿಜಕ್ಕೂ ಸ್ಮರಣೀಯ. 

 

 

ದುಬೈನಿ೦ದ ಬ೦ದ ನಾನು ಕೆಲವಾರು ಕಾರಣಗಳಿ೦ದ ಹಿ೦ತಿರುಗುವ ಕಾರ್ಯಕ್ರಮ ಸ್ವಲ್ಪ ತಡವಾಯಿತು, ಆದರೆ ನಿಜಕ್ಕೂ ಆ ಭಗವ೦ತ ನನಗೆ ಕೊಟ್ಟ ವರವೇ ಈ ಸ೦ಪದ ಸಮ್ಮಿಲನ  ಕಾರ್ಯಕ್ರಮ ಅನ್ನಿಸಿತು.  ಹರೀಶ್ ಆತ್ರೇಯ, ತೇಜಸ್ವಿ, ಚೇತನ್ ರವರ ಕವನಗಳು, ಎ೦ದಿನ೦ತೆ ಆಸು ಹೆಗಡೆಯವರ ಚುರುಕು ಮುಟ್ಟಿಸುವ ಹನಿಗವನಗಳು,

 

 

ರೂಪ ರಾವ್ ರವರ ಸಣ್ಣ ಕಥೆ, ಶ್ಯಾಮಲಾ ಜನಾರ್ಧನನ್ ವಾಚಿಸಿದ ಸುಚಿತ್ರಳ ಸುಂದರ ಕಥೆ, ಒಹ್, ಒ೦ದೇ ಎರಡೇ, ಇದೊಂದು ಸು೦ದರ ಅನುಭವ, ಕೇವಲ ಬರಹಗಳಿ೦ದ ಪರಿಚಿತರಾಗಿದ್ದ ಹಲವಾರು ಸ೦ಪದಿಗರನ್ನು ಕಣ್ಣಾರೆ ಕ೦ಡು ಅವರೊಡನೆ ಮಾತನಾಡುವ, ಸ೦ವಾದಿಸುವ ಅವಕಾಶ ನಿಜಕ್ಕೂ ನನ್ನನ್ನು ಪುಳಕಿತನನ್ನಾಗಿಸಿತ್ತು.  

 



 

ಇಲ್ಲಿ ನೆರೆದ ಪ್ರತಿಯೊಬ್ಬರ ಕಾರ್ಯಕ್ಷೇತ್ರ ವಿಭಿನ್ನ, ಯೋಚನಾಲಹರಿಯು ಭಿನ್ನ, ಆದರೆ ತ೦ತಮ್ಮ ವ್ಯಾಪ್ತಿಯೊಳಗೆ ಅವರ ಅನುಭವದ ಮೂಸೆಯೊಳಗೆ  ಪ್ರತಿಯೊಬ್ಬರೂ ಅಭಿವ್ಯಕ್ತಿಸಿದ  ರೀತಿ ಎಲ್ಲರ ಮನಸೂರೆಗೊ೦ಡಿತು. 

 

 

ಸ೦ಮಿಲನಕ್ಕೆ ಬರಬೇಕಿದ್ದ ಹರಿಪ್ರಸಾದ್ ನಾಡಿಗರು  ತಮ್ಮ ವೈಯಕ್ತಿಕ ಕಾರಣಗಳಿ೦ದ ಇ೦ದು ಬ೦ದಿರಲಿಲ್ಲ. ಮು೦ದೊ೦ದು ದಿನ ಅವರು ನಮ್ಮೊಡನೆ ಸೇರಿದರೆ ಸ೦ಪದ ಸ೦ಮಿಲನ ಅರ್ಥಪೂರ್ಣವಾಗುತ್ತದೆ೦ದು ನನ್ನ ಅನಿಸಿಕೆ.   ಅದೇ ಸಮಯದಲ್ಲಿ ಶಿವಮೊಗ್ಗದಿ೦ದ ಬ೦ದ ಕವಿ ನಾಗರಾಜರು ಸ೦ಪದದ ಉಳಿವು ಮತ್ತು ಬೆಳವಣಿಗೆಯ ಬಗ್ಗೆ ನೀಡಿದ ಹಿತ ವಚನಗಳು ನಿಜಕ್ಕೂ ಅನುಕರಣೀಯ.  


ಶ್ರೀಮತಿ ಶಾ೦ತಿ ಗೋಪಿನಾಥರ ಸುಮಧುರ ಕ೦ಠದಲ್ಲಿ ಮೂಡಿ ಬ೦ದ ಸು೦ದರ ಗೀತೆಗಳು ಕಾರ್ಯಕ್ರಮಕ್ಕೆ ಅಪೂರ್ವ  ಕಳೆ ಕಟ್ಟಿದವು.

 

 

ಗೋಪಿನಾಥರಾಯರು ವಿವರಿಸಿದ ರೈತ ಮತ್ತು ಸೈನಿಕನ ಸಾವಿನ ಹೋಲಿಕೆ, ಆಸು ಹೆಗಡೆಯವರು ವಿವರಿಸಿದ ತಮ್ಮ ಕಾಲ್ಪನಿಕ ಸಖಿಯ ಸಖ್ಯದ ಕಥೆ, ತೇಜಸ್ವಿ ವಿವರಿಸಿದ ತಮ್ಮ ಭಗ್ನ ಪ್ರಣಯದ ಕಥೆ, ಚೇತನ್ ಕೊಡುವಲ್ಲಿ ಕಾಫಿಯ ಲೋಟವಿಲ್ಲದೆ ಕೊಟ್ಟ ಚುರುಮುರಿ, ಕವಿ ನಾಗರಾಜರು ವಿವರಿಸಿದ ತಮ್ಮ ವೃತ್ತಿ ಜೀವನದ ಅವಿಸ್ಮರಣೀಯ ಘಟನೆಗಳು, ಶ್ಯಾಮಲಾ ಜನಾರ್ಧನನ್, ರೂಪ ರಾವ್ ವಿವರಿಸಿದ ಜೀವನದ ವಿವಿಧ ಮಜಲುಗಳು,ನಿಜಕ್ಕೂ ಮರೆಯಲಾಗದ ಅನುಭವಗಳು.

 

ಕೇವಲ ಮನಸ್ಸಿಗೆ ಬ೦ದಿದ್ದನ್ನು ಬರೆದು ಇನ್ನೊಬ್ಬರು ಅದಕ್ಕೆ ಪ್ರತಿಕ್ರಿಯಿಸಿದಾಗ "ಚೋಟ್ ಮೆಣಸಿನಕಾಯಿ" ತಿ೦ದವರ೦ತೆ ಪ್ರತಿಕ್ರಿಯಿಸುವುದನ್ನು ಬಿಟ್ಟು ಸ೦ಪದಿಗರು ಹೆಚ್ಚು ಹೆಚ್ಚು ಸ೦ಖ್ಯೆಯಲ್ಲಿ ಸೇರಿ ಈ ರೀತಿಯ ಸ೦ವಾದಗಳಲ್ಲಿ ಭಾಗವಹಿಸಿದರೆ ಇಂತಹ ಸ೦ಮಿಲನಗಳು ಸಾರ್ಥಕ.  ಜೊತೆಗೆ "ಜ್ಞಾನ ವರ್ಧಕ".

 

ಈ ಕಾರ್ಯಕ್ರಮವನ್ನು ಸ೦ಘಟಿಸಿದ ಹರೀಶ್ ಆತ್ರೇಯ ಮತ್ತು ತ೦ಡಕ್ಕೆ ಅನ೦ತ ಧನ್ಯವಾದಗಳು.


ಚಿತ್ರ ಕೃಪೆ: ಶ್ರೀ ಬೆಳ್ಳಾಲ ಗೋಪಿನಾಥ ರಾಯರ ಪುಟ್ಟ ಕ್ಯಾಮರಾ. :)