ಯಶೋಧೆಯ ಹುಡುಕಾಟ
ಕವನ
ಯಶೋಧೆಯ ಹುಡುಕಾಟ
ಹುಡುಕಿದಳು ಮಗನ | ಯಶೋಧೆ ಹುಡುಕಿದಳು ಮಗನ ||ಪ||
ಒಳಹೊರ ಓಡಾಡುತ ಪರಿ ಪರಿ ಕರೆಯುತ
ಕೆಲಸಗಳೆಲ್ಲವ ತೊರೆದರಸಿದಳು ||ಅ.ಪ||
ಮುಂಜಾನೆಗೆ ಹೋದವನೆಲ್ಲಿಹನೋ
ನಂಜಿನ ಕಾಳಿಯ ಮರು ಕೆಣಕಿದನೋ |
ಅಂಜಿಕೆಯಿಲ್ಲದೆ ಇನ್ನೇನೆಸಗುತ
ಕಂಜನಾಭನವ ನಗುತಿಹನೋ ||೧||
ನವನೀತವನವ ಕದಿಯುತಲಿಹನೋ
ಯುವಕರ ತಂಡವ ಗೆಲ್ಲುತಲಿಹನೋ |
ಯುವನೀರೆಯರ ಸೀರೆಯ ಕದ್ದು
ಗವುಗಳ ಮಂದೆಯ ಹಿಂದಡಗಿಹನೋ ||೨||
ಕಲ್ಲು ಮುಳ್ಳಿನಲಿ ನಡೆಯುತಲಿಹನೋ
ಹುಲ್ಲು ಹಾಸಿನಲಿ ದಣಿದೊರಗಿದನೋ |
ನಲ್ಲೆಯರೊಟ್ಟಿಗೆ ಯಮುನಾ ತಟದಲಿ
ಬಲ್ಲಿದರಂತೆಯೇ ಅಡುತಲಿಹನೋ ||೩||
- ಸದಾನಂದ
ಹುಡುಕಿದಳು ಮಗನ | ಯಶೋಧೆ ಹುಡುಕಿದಳು ಮಗನ ||ಪ||
ಒಳಹೊರ ಓಡಾಡುತ ಪರಿ ಪರಿ ಕರೆಯುತ
ಕೆಲಸಗಳೆಲ್ಲವ ತೊರೆದರಸಿದಳು ||ಅ.ಪ||
ಮುಂಜಾನೆಗೆ ಹೋದವನೆಲ್ಲಿಹನೋ
ನಂಜಿನ ಕಾಳಿಯ ಮರು ಕೆಣಕಿದನೋ |
ಅಂಜಿಕೆಯಿಲ್ಲದೆ ಇನ್ನೇನೆಸಗುತ
ಕಂಜನಾಭನವ ನಗುತಿಹನೋ ||೧||
ನವನೀತವನವ ಕದಿಯುತಲಿಹನೋ
ಯುವಕರ ತಂಡವ ಗೆಲ್ಲುತಲಿಹನೋ |
ಯುವನೀರೆಯರ ಸೀರೆಯ ಕದ್ದು
ಗವುಗಳ ಮಂದೆಯ ಹಿಂದಡಗಿಹನೋ ||೨||
ಕಲ್ಲು ಮುಳ್ಳಿನಲಿ ನಡೆಯುತಲಿಹನೋ
ಹುಲ್ಲು ಹಾಸಿನಲಿ ದಣಿದೊರಗಿದನೋ |
ನಲ್ಲೆಯರೊಟ್ಟಿಗೆ ಯಮುನಾ ತಟದಲಿ
ಬಲ್ಲಿದರಂತೆಯೇ ಅಡುತಲಿಹನೋ ||೩||
- ಸದಾನಂದ