ಯಾಕೆ??
ಕವನ
ನಾವು ಮಾತಾಡುವುದ್ಯಾಕೆ?
ಮಾತು ಬರುವುದೆಂದೋ? ಅರ್ಥವಿರುವುದೆಂದೋ?
ನಿನಗೆ ತಿಳಿಯದು ಎಂದೋ? ನನಗೆ ತಿಳಿದಿದೆ ಎಂದೋ?
ಕಣ್ತುಂಬ ಕನಸುಗಳನ್ನು ಕಾಣುವುದ್ಯಾಕೆ?
ನನಸು ಮಾಡಲೆಂದೋ? ಕೆಲಸ ಆಗದೆಂದೋ?
ಒಳಮನಸಿನ ಪ್ರತಿ ಭಾವನೆ ತಿಳಿಯಲೆಂದೋ?
ನಾವು ಬದುಕುವುದ್ಯಾಕೆ?
ಬಾಳು ಬೆಳಗಿಸಲೆಂದೋ? ಹೊನ್ನು ಕರಗಿಸಲೆಂದೋ?
ಭೂತಾಯಿಯ ಉಸಿರಡಗಿಸಿ ಅಸುನೀಗಲೆಂದೋ?
ನಾವು ಪ್ರಶ್ನೆಗಳನ್ನು ಕೇಳುವುದ್ಯಾಕೆ?
ಉತ್ತರ ತಿಳಿಯಲೆಂದೋ? ವಾಸ್ತವ ತಿಳಿಸಲೆಂದೋ?
ಉತ್ತರ- ಪ್ರತ್ಯುತ್ತರಗಳ ನಡುವೆ ತತ್ತರಿಸಲೆಂದೋ?
Comments
ಉ: ಯಾಕೆ??
In reply to ಉ: ಯಾಕೆ?? by venkatb83
ಉ: ಯಾಕೆ??