ಯಾರಿಗ್ಕೊಟ್ರೂ ಕೊಡ್ಬೊದು ನಿವೃತ್ತಿ ; ಆದ್ರೆ ಲಕ್ಷ್ಮಣ್ಗೆ, ಹೇಗ್ಸಾಧ್ಯ ಮಾರಾಯ !

ಯಾರಿಗ್ಕೊಟ್ರೂ ಕೊಡ್ಬೊದು ನಿವೃತ್ತಿ ; ಆದ್ರೆ ಲಕ್ಷ್ಮಣ್ಗೆ, ಹೇಗ್ಸಾಧ್ಯ ಮಾರಾಯ !

ಬರಹ

ನಾನು ಹೇಳಿದ್ದು, ಇತ್ತೀಚೆಗೆ ಅವರ ವ್ಯಂಗ್ಯ ಚಿತ್ರಾಂಕಣದಲ್ಲಿ ಬರ್ತಿತ್ತಲ್ಲ ; ಆ ಕಾರ್ಟೂನ್ಗಳು, ಮೊದಲಿನ ಮಟ್ಟದ್ದಾಗಿಲ್ಲ ಅಂತ ! ಅಂದ್ರೆ ಅದನ್ನೆಲ್ಲ ಲಕ್ಷ್ಮಣರೇ ಬರೆದಿದ್ದಾರೆ ಅಂದಲ್ಲ ! " ಹುಣಸೆ ಮರಕ್ಕೆ ಮುಪ್ಪು ಪ್ಬಂದರೂ ಅದರ್ ಹುಳೀಗ್ ಬರುತ್ಯೆ ?" ಇಲ್ಲವಲ್ಲ. ಅದೇ ರೀತಿ ಲಕ್ಷ್ಮಣ್ ಗರಡಿಯಲ್ಲಿ ಯಾರ್ನೊ ತಯಾರ್ ಮಾಡ್ತಿದಾರೆ ಅನ್ಸತ್ತೆ. ಆತ ಬರೆದ ರೇಖೆಗಳಂತೂ ಲಕ್ಷ್ಮಣರೇಖೆಗಳಲ್ಲ, ಅನ್ನೊ ಮಾತ್ನ ನಾನು ಹೇಳಿದ್ದು. ನಾನೇನೂ ಲಕ್ಶ್ಮಣ ವ್ಯಂಗ್ಯಚಿತ್ರಗಳಬಗ್ಗೆ ಹಚ್ಚಿಕೊಂಡಿರೊ ಎಲ್ಲ ಬುದ್ಧಿ ಜೀವಿಗಳದೂ ಇದೇ ಅಭಿಪ್ರಾಯ. ( ನಾನು ಒಬ್ಬ ಬುದ್ಧಿ ಜೀವಿಯೆ ? ಗೊತ್ತಿಲ್ಲ.)

ಇನ್ನು ಅವರ ಪರಾಕ್ರಮ ಎಲ್ಲಾರ್ಗೂ ತಿಳಿದದ್ದೆ. ಒಬ್ಬ ಸಾಮಾನ್ಯ ವ್ಯಂಗ್ಯ ಚಿತ್ರಕಾರನಿಗೆ [Times of India ] ನಲ್ಲಿ ಒಂದು ಪ್ರತ್ಯೇಕ ಕೊಠಡಿ ಏರ್ಪಾಡು ಮಾಡಿದ್ದರು ಅಂದರೆ, ನಂಬುವುದು ಕಷ್ಟ. ಕೊಠಡಿ ಏನಿದ್ದರೂ ಚೀಫ್ ಎಡಿಟರ್ ಗೆ ಮಾತ್ರ. ಆದರೆ ಲಕ್ಷ್ಮಣರ ಜನಪ್ರಿಯತೆ ಎಷ್ಟಿತ್ತಪ್ಪ ಅಂದ್ರೆ, ಅವರ ಚಿತ್ರಗಳನ್ನು ನೋಡಲೇ ದಿನ ಪತ್ರಿಕೆ ಖರೀದಿಸುವವರ ಸಂಖ್ಯೆ- ಸಾವಿರಾರು. ಅಥಾವಾ ಲಕ್ಷಗಟ್ಟಲೆನೋ ಗೊತ್ತಿಲ್ಲ. ಇದ್ದರು ಇರಬಹುದು. ಅಂದ ಮೇಲೆ ಅವರನ್ನು ಚೆನ್ನಾಗಿ ನೋಡಿಕೊಂಡಷ್ಟೂ ಲಾಭ ಮಾಲೀಕರಿಗಲ್ಲವೇ ? ಇದು ಜೈನ್ ವ್ಯಾಪಾರ ಧುರೀಣರಿಗೆ ತಿಳಿದಷ್ಟು ಬೇರೆ ಯಾರಿಗೆ ತಿಳಿಯತ್ತೆ ? ಇದೇ ನೋಡಿ ಅವರ ಯಶಸ್ಸಿನ ಹಿಂದಿನ ಗುಟ್ಟು.

ಈಗಲೂ ಲಕ್ಷ್ಮಣ್ ಭಾನುವಾರದ ಅಂಕಣದಲ್ಲಿ [ಟೈಮ್ಸ್] ಅಂಕಲೇಶರ್ ಐಯರ್ ರವರ ಕಾಲಮ್ ಮೇಲೆ ಒಂದು ಚಿತ್ರಾಂಕಣ ಸಾಮಾನ್ಯವಾಗಿ ಇದ್ದೆ ಇರುತ್ತೆ. ಅದರ ಗುಣಮಟ್ಟವಂತೂ Superb ಆಗಿರುತ್ತೆ. ಅದು ಪೇಂಟಿಂಗ್ ; ಮತ್ತು ಅದರಲ್ಲಿನ ವಿಶಯ ನಿರೂಪಣೆ ಮತ್ತು ಅಲ್ಲಿನ ವಿನ್ಯಾಸ ಹಾಗೂ ತಕ್ಕ ಶಿರೋನಾಮ ಇವುಗಳನ್ನು ಲಕ್ಷ್ಮಣ್ ಅಲ್ಲದೆ ಬೇರೆಯವರು ಬರೆಯಲು ಹೇಗೆ ಸಾಧ್ಯ ? ಎಂಬುದನ್ನು ಮನದಟ್ಟು ಮಾಡುತ್ತವೆ.

ಇನ್ನು ಲಕ್ಷ್ಮಣರ ಅಮರ ಕೃತಿಗಳ ಬಗ್ಗೆ :

ಮಳೆಗಾಲದ ಮುಂಬೈಕರ್ಗಳ ಪಾಡು, ಮಂತ್ರಿಗಳ ವಿದೇಶಿ ಪ್ರವಾಸ, ಅವರ ಗ್ರಾಮೀಣ ನಾಡಿನ ಪ್ರವಾಸ, ಮಾಂಸೂನ್ ನಂತರ ದ ಶಾಲೆ ಪ್ರಾರಂಭದ ಸನ್ನಿವೇಶ, ಬೆಲೆಯೇರಿಕೆ ಬಗ್ಗೆ, ಭಿಕ್ಷಕರ ಅಭಿಪ್ರಾಯಗಳು, ಮಂತ್ರಿಗಳ ಭಾಷಣಗಳ ತಯಾರಿ, ಎಲೆಕ್ಷನ್ ಗಳು ಮತ್ತು ಅದರ ಪ್ರಚಾರ, ಇತ್ಯಾದಿಗಳು ಸಾರ್ವಕಾಲಿಕ. ಅವು ಲಕ್ಷ್ಮಣರ Master piece ಗಳು.

ಕೈ ನಡುಗಿದರೂ, ಅವರ ತಲೆ ಕೆಲಸ ಮಾಡುತ್ತೆ- ಅದೂ ಪಾದರಸದಂತೆ ! ಐಡಿಯ ಗಳೋ ಎಲೆಕ್ಟ್ರಿಕ್ ಫ್ಲಾಷ್ ಳಂತೆ !

ಮುಂದೆ ಬರೆಯಲು ಆಗಲ್ಲ. ಕ್ಷಮಿಸಿ.