ಯಾರಿವರು ತಾತ?
ಕವನ
*ಮಗು* ತಲೆಯ ಮೇಲೆ ಬಿಳಿಯ ಜುಟ್ಟು
ಮುಖದ ತುಂಬ ಗಡ್ಡ ಬಿಟ್ಟು
ತಾತನಂತೆ ಕಾಣುತಿರುವ
ಚಿತ್ರ ಯಾರದು
*ಅಮ್ಮ* ಬೇಡ ಕುಲದೆ ಜನಿಸಿದವರು
ತಪವ ಗೈದ ಮಹಾತ್ಮರಿವರು
ಬಹಳ ದೊಡ್ಡ ಋಷಿಗಳವರು
ನಮಗೆ ಪೂಜ್ಯರು
*ಮಗು* ಎದರಲೇನೊ ಇಟ್ಟುಕೊಂಡು
ಬರೆಯುತಿಹರು ನೀನು ನೋಡು
ನಮ್ಮ ಹಾಗೆ ಪಾಠವನ್ನು
ಬರೆಯುತಿರುವರೆ?
*ಅಮ್ಮ* ವಾಲ್ಮೀಕಿ ಎಂದು ಇವರ ಹೆಸರು
ರಾಮಾಯಣ ಬರೆದರಿವರು
ರಾಮಚರಿತೆ ನಮಗೆ ಕೊಟ್ಟು
ಅಮರರಾದರು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್