ಯಾರಿಹರು?

ಯಾರಿಹರು?

ಕವನ

ಯಾರಿಹರು ಎನಗೆನುತ ಊರೊಳಗೆ ತಿರುಗದಿರು

ಬೇರೆಯೇ ನಾನೆನುತ ಉಳಿದವರ ತೆಗಳದಿರು

ಕಾರಣವ ಕೇಳದೆಯೆ ಉರಿದುರಿದು ಬೀಳದಿರು

ಜಾರುತಲೆ ಜೀವನವ ದೂರುತಲೆ ಸಾಗದಿರು

ಕಾರುವರು ಅವರೆಂದು ಹುಸಿಮುನಿಸ ತೋರದಿರು

ಹಾರುತಲೆ ಬದುಕದಿರು --- ಛಲವಾದಿಯೆ !

***

ಗಝಲ್

ಸಂಸ್ಕಾರವಂತೆ ಹಣೆಗೆಯಿಂದು ಇಟ್ಟಿದ್ದಾಳೆ ತಿಲಕ ನನ್ನವಳು

ಮನೆಯೊಳಗೆ ಏನಿದೆಯೆಂದು ತಿಳಿಸುವಂತ ಫಲಕ ನನ್ನವಳು

 

ಜೀವನವ ನಡೆಸುವುದರಲ್ಲಿ ಸೋಲಿರದು ಯಾವತ್ತೂ ಹೀಗೆಯೆ

ಕತ್ತಲೆಯಲ್ಲೂ ಜಾಣ್ಮೆಯನು ತೋರುವಂತಹ ಚಲಕ ನನ್ನವಳು

 

ಮನದಾಸೆಯ ಸಂಗದಲ್ಲಿ ನವರೂಪ ಹೊಳೆಯುತ್ತಿದೆ ನೋಡು

ಕರುಣೆಯದು ಇರುವಂತಹ ಮನದೊಳಗಿನ ಜಾಲಕ ನನ್ನವಳು

 

ಪ್ರೀತಿಯರಳುವ ಸಮಯ ಆರೋಪಗಳು ಸೋರಿ ಹೋಗುತ್ತವೆ

ಮೌನ ಮುರಿಯುತ್ತಲೇ ಹೃದಯ ಬಂಧಿಸುವ ಚಿಲಕ ನನ್ನವಳು

 

ಕೈಹಿಡಿದಾಗಲೇ ಹೇಳಿದ್ದಳು ನನ್ನವಳಂದು ನೀನು ನನ್ನವನು ಈಶಾ

ದಿನಗಳು ಉರುಳುರುಳಿದರೂ ಎನ್ನಯ ಪಾಲಿನ ಚುಲಕ ನನ್ನವಳು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್