ಯಾರು ಬಲ್ಲರು.............ವಾಣಿ ರಾಮದಾಸ್.
ಬರಹ
ಯಾರು ಬಲ್ಲರು.............ವಾಣಿ ರಾಮದಾಸ್.
ಅಪರಿಚಿತ ನಗೆಯಲಿ ಪರಿಚಿತ ಭಾವ
ನೀನ್ಯಾರೋ, ನಾನ್ಯಾರೋ ಜನ್ಮಾಂತರ ಸ್ನೇಹ
ಭರವಸೆಯ ಆಶಾಕಿರಣ ಅರಸಿತು ನೇಹ
ಪ್ರತಿ ಆತ್ಮದಲೂ ಪ್ರೀತಿಯ ಮೋಹ
ಯಾವ ಮೋಡದಲಿ ಯಾವ ಹನಿಯೋ ಬಲ್ಲವರಾರು?||
ಪ್ರವಾಹದ ಮೊರೆತದಲಿ ಹ್ರುದಯದ ಹಾಡು
ತುಡಿತ ಮಿಡಿತಗಳಲಿ ತವಕಿಸುಟಿದೆ ನೋಡು
ಸೆಳೆತಗಳ ಸುಳಿಯಲಿ ಸಿಲುಕಿದೆ ಮನಸು
ಕೆರೆ ನದಿಯತ, ನದಿ ಸಾಗರದತ
ಸಾಗರವೆಲ್ಲಿಗೋ ಬಲ್ಲವರಾರು?||
ಕಾಯುತಿದೆ ಭೂಮಿ ಮಳೆಯ ಆಗಮನಕೆ
ತಪಿಸಿ, ತವಕಿಸಿಡೆ ನೈದಿಲೆ ಚಂದ್ರಮನ ನೋಟಕೆ
ಹ್ರುದಯದ ಚಿಪ್ಪಿನೊಳಗೆ ಪರಿತಪಿಸುತಿದೆ ಜೀವ
ಎಲ್ಲ ಮನಸ್ಸುಗಳಲಿ ನಿರಂಟರ ದಾಹ
ಯಾವ ಮೇಘ ಯಾವ ಗಿರಿಯ ಚುಂಬಿಸುವುಡೋ ಆರು ಬಲ್ಲರು?||
ಅರ್ಥವೇ ಆಗದು ಈ ಜೀವನ ಪರಿ
ಅರ್ಥೈಸಿಕೊಳ್ಳುವ ಗೋಜಿಗೆ ಹೋಗದಿರುವುದೇ ಸರಿ
ಅನುಭವವೇ ಜೀವನದ ಅರ್ಥವೇ,
ಅರ್ಥಗಿರ್ಥಗಳ ಹುಡುಕಿ ಅಳಲಿ, ಬಳಲಿರುವೆ
ಇದೇ ಜೀವನಡ ಅರ್ಥ, ಎಂದು ತಿಳಿಸುವರಾರು?||