ಯಾರು ಸರಿ?
ಕನ್ನಡದ ಜನಪ್ರಿಯ ನಟಿಯೊಬ್ಬರು ಅತ್ತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಗೆದ್ದ ಮಾತ್ರಕ್ಕೆ ಅವರು ರಜನಿಕಾಂತ್ ಅವರು ಕ್ಷಮೆ ಕೇಳಲಿ, ನಾವು ಕ್ಷಮಿಸಿ ದೊಡ್ಡವರಾಗೋಣ ಏಂಬ ಆಸೆ ನನ್ನದು ಎಂದು ಟಿ ವಿ ೯ ಚಾನೆಲ್ನಲ್ಲಿ ಬಹಿರಂಗವಾಗಿ ಹೇಳಿದ್ದರು. ಅಂದರೆ ಅವರೆಂದಿಗೂ ದೊಡ್ಡವರೇ ಅಲ್ಲ ಎಂದೇ ಅರ್ಥ. ಇಂಥ ದುರಾಸೆಗಳಿಗೆ ಬಿದ್ದಿರುವ ನಟರಿಗೆ ಅದ್ಯಾರು ರಾಷ್ಟ್ರ ಪ್ರಶಸ್ತಿ ಕೊಟ್ಟರೋ ಏನೋ?
ಹಾಗೂ ರಜನಿಕಾಂತ್ ಅವರು ಹೇಳಿರುವುದು ಐದು ಕೋಟಿ ಕನ್ನಡಿಗರಿಗೆ ಒದೆಯಿರಿ ಎಂದಲ್ಲ. ಸಾಮಾನ್ಯ ಜನರ ಜೀವನ ಅಸ್ತವ್ಯಸ್ತ ಮಾಡುತ್ತಿರುವ ಪುಂಡರಿಗೆ ಒದೆಯಿರಿ ಎಂದು. ಎಷ್ಟೋ ಕನ್ನಡ ಪರ ಸಂಘಗಳು ಕನ್ನಡ ಕನ್ನಡ ಎಂದು ಹೋರ್ಆಡುತ್ತಿವೆ ಯಾಕೆ? ಕೇವಲ ಪ್ರಚಾರಕ್ಕಾಗಿ ಮಾತ್ರ ಅಷ್ಟೇ ಅವರ ಸೀಮಿತ ಪ್ರದೇಶ. ಬೇರೆ ಯಾವುದಕ್ಕೂ ಅಲ್ಲ. ರಾಜ್ಯೋತ್ರವದ ಸಮಯದಲ್ಲಿ ಇಡೀ ನವೆಂಬರ್ ತಿಂಗಲು ಮೈಕುಗಳನ್ನು ಹಾಕಿಕೊಂಡು ಆರ್ಕೇಸ್ಟ್ರಾ ಹಾಡುವುದೇ ಕನ್ನಡ ಭಾಷೆಗೆ ತಾವು ಮಾಡುತ್ತಿರುವ ಒಳ್ಳೆಯ ಕೆಲಸ ನೀಡುತ್ತಿರುವ ಗೌರವ ಎಂದು ತಿಳಿದ ಮುಠ್ಠಾಳರಿಗೆ ಕನ್ನಡ ಎಂ಼ದರೆ ಏನು ಎಂದು ಕೇಳಿದರೆ ಯಾವ ರೀತಿ ತಾನೆ ಉತ್ತರ ಕೊಟ್ಟಾರು?
ಆದ್ದರಿಂದ ಸ್ನೇಹಿತರೇ ನೀವೂ ಸಹ ಈ ಬಗ್ಗೆ ಒಮ್ಮೆ ಯೋಚಿಸಿ. ಯಾರು ಸತ್ಯ ನುಡಿಯುತ್ತಿದ್ದಾರೆ ಎಂದು.