ಯಾವದು ನಮ್ಮಊರು?
ಕವನ
ಯಾವುದು ನಮ್ಮ ಊರು?
ಯಾವುದು ನಿಮ್ಮ ಊರು ?
ಈ ಧರೆ ಅಲ್ಲವೇ
ನಮ್ಮನಿಮ್ಮ ಊರು?
ಈ
ಊರು ಕೇರಿಗೆಲ್ಲ ಹೆಸರಿಟ್ಟವರು ನಾವು,
ನಾವೆಲ್ಲ ಮಾನವರು,
ನಮ್ಮ ನಿಮ್ಮ ಕೆಂಪು ನೆತ್ತರ
ಹರಿಯುವುದು ನಮ್ಮ ಧಮನಿಗಳಲ್ಲಿ.
ಇದೇ ಸತ್ಯ.
ನಾವು ಉಸಿರಾಡುವ ಗಾಳಿ,
ಕುಡಿಯುವ ನೀರು
ಚೇತನ ತುಂಬಿ ಬೆಳಗುವ ಸೂರ್ಯ
ಒಂದೇ ಚಂದ್ರ,
ನಮ್ಮ ಹುಟ್ಟಿನಂತೆ ನಿಮ್ಮ ಹುಟ್ಟು
ಅದರಂತೆಯೇ ಮೃತ್ಯು
ಆದರೂ
ಏಕೆ ಈ ಒಡಕು ಕಲಹ ವೈಶಮ್ಯ?
ಭೇದ ಭಾವ ವಿನಾಶ?