ಯಾವುದು ಗ್ರಾಮ್ಯ, ಕೈಗುಳಿಗೆ-3

ಯಾವುದು ಗ್ರಾಮ್ಯ, ಕೈಗುಳಿಗೆ-3

ಬರಹ

ಯಾವುದು ಗ್ರಾಮ್ಯ?:
ಮಾಂಗಾಯಿ - ಇದು ಗ್ರಾಮ್ಯವೆನ್ದು ಸಾಮಾನ್ಯ ತಿಳಿವಳಿಕೆ. ನಿಜವಾಗಿ ಮಾವಿನ್ ಕೂಡೆ ಕಾಯಿ ಮಾಂಗಾಯಿ ಶುದ್ಧ ಒರೆಯಾಗಿದೆ. ಇನ್ತಹ ಒರೆಗಳಿನ್ದಲೇ ಭಾಷೆಯ ನಿಜವಾದ ಗುಣ ಎದ್ದು ಕಾಣುವನ್ತಹುದು. ದ್ರಾವಿಡಾದಿ ಭಾಷೆಗಳಲ್ಲಿ ಇನ್ತಹ ಒರೆಗಳು ಕನಿಷ್ಠ ನೂರಾದರೂ ಇವೆ ಮತ್ತು ಅವು ಗ್ರಾಮ್ಯಗಳೆನ್ದೆಣಿಸಲ್ಪಡಲಿಲ್ಲ.

ಬೞಕೆಗಳು:
ಮಾವಿನ್ ಕೂಡೆ ಕಾಯಿ  = ಮಾಂಗಾಯಿ
ಮಾವಿನ್ ಕೂಡೆ ಹಣ್ಣು = ಮಾಂಬಣ್ಣು
ಮಾವಿನ್ ಕೂಡೆ ತೋಟ  = ಮಾನ್ದೋಟ

ಮಾವಿಗೆ ಸಂಬನ್ಧಪಡುವವುಗಳೆಲ್ಲವೂ ಮಾವಿನ್ ಸೇರಿ ಕೂಡೊರೆಗಳಾಗುವುವು.

ಇತರ ಬೞಕೆಗಳು:
ಮಾಂಬಣ್ಣ ತಿಂಬೆನು = ಮಾವಿನ ಹಣ್ಣ ತಿನ್ನುವೆನು.

ಕೈಗುಳಿಗೆ:    ಕನ್ನಡದಲ್ಲಿ ಕರ್ಮಣಿ ಪ್ರಯೋಗವಿಲ್ಲವೇ?
ಇತರ ಭಾಷೆಗಳಲ್ಲಿ(ಸಂಸ್ಕೃತ, ಇಂಗ್ಲೀಷ್) ಕರ್ಮಣಿ ಪ್ರಯೋಗಕ್ಕಿರುವ ಪ್ರಾಧಾನ್ಯ ಕನ್ನಡದಲ್ಲಿಲ್ಲ(ದ್ರಾವಿಡಾದಿ ಭಾಷೆಗಳಲ್ಲೂ). ಅದರ ಅರ್ಥ ಕರ್ಮಣಿ ಇಲ್ಲವೆನ್ದಲ್ಲ, ನುರಕ್ಕೆ ಮೂವತ್ತರಷ್ಟು ಮಾತ್ರವಿದೆ. ಇನ್ತಿರಲು, ಮೂವತ್ತಕ್ಕೂ ಸಲ್ಲಬೇಕಾದುದುದು ಸಲ್ಲಲೇ ಬೇಕು. ಯಾವ ಬಗೆಯ ಪ್ರಯೋಗಗಳಲ್ಲಿ ಕರ್ಮಪದ ಪ್ರಧಾನವಾಗಿರುವುದೋ ಅನ್ತಹ ಪ್ರಯೋಗಗಳು ಕರ್ಮಣಿಗಳೆನ್ದೆಣಿಸಲ್ಪಡುವುವು.

ಕನ್ನಡದಲ್ಲಿ ಎರಡು ಬಗೆಯ ಕರ್ಮಣಿಗಳಿವೆ.
1) ಮಾಡಲಾಗಿದೆ, 2) ಮಾಡಲ್ಪಟ್ಟಿದೆ.


"ಮುಖ್ಯಧಾರೆಯ ಕನ್ನಡದಲ್ಲಿ ಎರಡೂ ಒನ್ದೇ ಬಗೆಯಲ್ಲಿ ಬೞಸಲ್ಪಡುತ್ತಿವೆ. "

ಈ ವಾಕ್ಯವನ್ನು ಇನ್ನೊನ್ದು ರೀತಿಯಿನ್ದಲೂ ಹೇೞಬಹುದು,

"ಮುಖ್ಯಧಾರೆಯ ಕನ್ನಡದಲ್ಲಿ ಎರಡನ್ನೂ ಒನ್ದೇ ಬಗೆಯಲ್ಲಿ ಬೞಸಲಾಗುತ್ತದೆ. "

1. ಮೊದಲ ಬೞಕೆಯಲ್ಲಿ ಕರ್ಮಪದಕ್ಕೆ ಎರಡನೇ ವಿಭಕ್ತಿ ಪ್ರತ್ಯಯ(ಅನ್ನು) ಸೇರುತ್ತದೆ ಮತ್ತು ಎರಡನೇ ಬೞಕೆಯಲ್ಲಿ ಕರ್ಮಪದಕ್ಕೆ ಒನ್ದನೇ ವಿಭಕ್ತಿ ಪ್ರತ್ಯಯ(ಉ) ಸೇರುತ್ತದೆ. (ಒನ್ದನೇ ವಿಭಕ್ತಿ ಪ್ರತ್ಯಯದ ಕುರಿತ ಟಿಪ್ಪಣಿಗಾಗಿ ಕೈಗುಳಿಗೆ-4)
2. ಮೊದಲ ಬೞಕೆಯಲ್ಲಿ ಕರ್ತಾರಪದವಿಲ್ಲ. ಎರಡನೇ ಬೞಕೆಯಲ್ಲಿ ಕರ್ತಾರಪದವಿದೆ, ಒನ್ದು ವೇಳೆ ಇದ್ದರೂ ಹೇೞದೇ ಇರಬಹುದು.
3. ಮೊದಲ ಬೞಕೆ ಇಂಗ್ಲೀಷ್ ಪ್ರಯೋಗಗಳ ತರ್ಜಮೆಗಾಗಿ ಮಾಡಿಕೊಣ್ಡ ಪಲ್ಲಟ ಮತ್ತು ಕನ್ನಡಕ್ಕೆ ಸಹಜವೆನ್ನಿಸದು. ಎರಡನೇ ಬೞಕೆ ಸಹಜವಾದುದು ಮತ್ತು ಇನ್ತಹ ಬೞಕೆಯೂ ನೂರಕ್ಕೆ ಮೂವತ್ತರಷ್ಟು ಸನ್ದರ್ಭಗಳಲ್ಲಿ ಮಾತ್ರ ಬರುವನ್ತಹುದು.
4. ಮೇಲಣ ಉದಾಹರಣಗಳಲ್ಲಿ, ಕರ್ಮಪದಕ್ಕೆ ಒನ್ದನೇ ವಿಭಕ್ತಿ ಪ್ರತ್ಯಯವ ಸೇರಿಸಿ ಮೊದಲನೇ ಬಗೆಯ ಬೞಕೆಗಳ ಪ್ರಯೋಗಿಸಿದರೆ ಯಾವ ಅರ್ಥವೂ ಇರದು. ಇನ್ತಹ ಸನ್ದರ್ಭಗಳಲ್ಲಿ ಎರಡನೇ ಬಗೆಯ ಪ್ರಯೋಗಗಳ ಬೞಸಲಾಪುದಾಗಿದೆ.

ಬೞಕೆಗಳು:
1.    ಕೆಲಸವು ಮಾಡಲಾಗಿದೆ - ತಪ್ಪು
      ಕೆಲಸವನ್ನು ಮಾಡಲಾಗಿದೆ - ಸರಿ

2.     ಕೆಲಸವು ಮಾಡಲ್ಪಟ್ಟಿದೆ.