ಯುಗಾದಿ ಶುಭಾಶಯಗಳು
ಪೌರೋಹಿತ್ಯವೇ ವೃತ್ತಿಯಾಗಿರುವ ಶೇಷಾಚಾರ್ಯರು ರಾವಬಹದ್ದೂರರ ಮನೆಗೆ ಪೂಜೆಗೆ ಹೋದರಂತೆ. ಸಿರಿವಂತರು ತಣ್ಣೀರು ಸ್ನಾನ ಮಾಡಲು ಹೇಳಿದರಂತೆ. ಇವರಿಗೆ ತಣ್ಣೀರು ಸ್ನಾನ ಮೈಗಾಗೋಲ್ಲ. ಸರಿ, ಬಚ್ಚಲಮನೆ ಬಾಗಿಲು ಜಡಿದು ತಂಬಿಗೆಯಿಂದ ನೆಲಕ್ಕೆ ನೀರು ಜೋರಾಗಿ ಸುರಿಸಿ, ಸ್ನಾನ ಆದವರಂತೆ ಹೊರಗೆ ಬಂದರು. ಇಬ್ಬರಿಗೂ ಸಂತೋಷ !!!
ಜೀವನದಲ್ಲಿ ಸನ್ನಿವೇಶಗಳು ಬೇವಿನಂತೆ ಬರುತ್ತದೆ. ಬೇವನ್ನು ಬೇವಾಗೇ ಸೇವಿಸಿದರೆ ಮನಸ್ಸು ಕೆಡುತ್ತದೆ. ಬೇವನ್ನು ಬೆಲ್ಲವಾಗಿ ಸ್ವೀಕರಿಸಿದರೆ, ನಿತ್ಯವೂ ಉಗಾದಿಯೇ !!
ಶ್ರೀನಂದನ ಸಂವತ್ಸರವು ಎಲ್ಲರ ಬಾಳಿನಲ್ಲಿ ಕಹಿ ಕಡಿಮೆಗೊಳಿಸಿ ಸಿಹಿ ಹೆಚ್ಚಿಸಲಿ ಎಂಬುದೇ ನನ್ನ ಆಶಯ ....
ಕಹಿಯನ್ನು ಕಡಿಮೆಗೊಳಿಸಿ ಎಂದೇಕೆ ಹೇಳಿದೆ ಎಂದರೆ ಕಹಿಯೇ ಇಲ್ಲದಿದ್ದರೆ, ಸಿಹಿಗೆ ಬೆಲೆ ಇರುವುದಿಲ್ಲ !!! ಶುಭವಾಗಲಿ.
Comments
ಉ: ಯುಗಾದಿ ಶುಭಾಶಯಗಳು
In reply to ಉ: ಯುಗಾದಿ ಶುಭಾಶಯಗಳು by venkatb83
ಉ: ಯುಗಾದಿ ಶುಭಾಶಯಗಳು
ಉ: ಯುಗಾದಿ ಶುಭಾಶಯಗಳು
In reply to ಉ: ಯುಗಾದಿ ಶುಭಾಶಯಗಳು by makara
ಉ: ಯುಗಾದಿ ಶುಭಾಶಯಗಳು