ಯುಗಾದಿ ಹಬ್ಬ ಬಂದೈತಿ

ಯುಗಾದಿ ಹಬ್ಬ ಬಂದೈತಿ

ಕವನ

ಮಾಮರದಲ್ಲಿ ಹಾಡುತಿದೆ 

ಕೋಗಿಲೆಯೊಂದು ಕೂಗುತಿದೆ 

ಪ್ರಕೃತಿ ಸೌಂದರ್ಯ ಹೊಳೆಯುತಿದೆ 

ಮನುಕುಲಕ್ಕೆ ಖುಷಿ ತಂದೈತಿ

 

ಅರಳಿಸು ಎನ್ನ ಮನವು

ತಣಿಸು ನನ್ನ ತನುವು 

ಪ್ರಕೃತಿ ಸೌಂದರ್ಯವು 

ಹನುಮಂತ ದೇವರ ಜಾತ್ರೆಯು

 

ಕೋಗಿಲೆ ಧ್ವನಿಯಲ್ಲಿ ಸಂಗೀತವು 

ಜನಮನದಲ್ಲಿ ಸಂತೋಷವು 

ಮಕ್ಕಳ ಮುಖದಲ್ಲಿ ಮಂದಹಾಸವು 

ಇದು ದೇವರ ಕೊಟ್ಟ ಫಲವು

 

ಉತ್ಸವದ ಜಾತ್ರೆ ನಡದೈತೊ 

ಹನುಮಪ್ಪನ ತೇರು ಎಳೆದೈತೊ 

ಭಕ್ತರ ಹೃದಯಕ್ಕೆ ಹರ್ಷ ತಂದೈತೊ 

ಯುಗಾದಿ ಹಬ್ಬದ ಜಾತ್ರೆ ನಡದೈತೊ

 

ದೇವಾನು ದೇವತೆಗಳ ವರವು 

ಪ್ರಕೃತಿ ಮಾತೆ ವರದಾನವು 

ದೇವರು ಇಲ್ಲಿ ಪ್ರದಾನವು 

ಯುಗಾದಿ ಹಬ್ಬದ ಶುಭಾಶಯವು

 

-ಹುಚ್ಚೀರಪ್ಪ ವೀರಪ್ಪ ಈಟಿ, ಗದಗ

ಚಿತ್ರ್