ಯುಗಾದಿ
ಕವನ
ಚೈತ್ರ ಮಾಸವದು ಚಿಗುರಿ ನಗುವ ಯುಗಾದಿ
ಭವ್ಯಭವಿತವ್ಯವ ತೋರುವ ಮಹಾ ಪ್ರವಾದಿ
ಚಾಂದ್ರಮಾನದಲಿ ನವ ಚಂದ್ರಮನ ಆರಂಭ
ಭಾರತೀಯರ ಹೊಸ ವರ್ಷ ನಲಿವಿನಾರಂಭ
ಬೇವು ಬೆಲ್ಲವನು ತಿಂದು ಸಂಭ್ರಮಿಸು ಜಗದಿ
ಕಷ್ಟ ಸುಖವನೆಲ್ಲ ಸ್ವೀಕರಿಸು ಸಮತಾಭಾವದಿ
ಅಂಗಳದಲಿ ರಂಗೋಲಿಗಳ ರಂಗು ರಂಗಿನಾಟ
ಹೊಸ ಬಟ್ಟೆಯನುಟ್ಟು ಸಂಭ್ರಮದಿ ಕೋಲಾಟ
ಬಾಳೆಯ ಎಲೆಯಲಿ ಹೋಳಿಗೆ ಕಡುಬ ಊಟ
ಹಾರಿಸುವ ಬನ್ನಿರೆಲ್ಲ ಭಾವೈಕ್ಯವೆಂಬ ಬಾವುಟ
ನೊಂದು ಬೆಂದಿಹ ಮನಕೆ ಇದು ಸಾಂತ್ವನ ಕೂಟ
ಮನದ ಸಂತಸಕೆ ಹಿರಿಯರು ಹೂಡಿದ ಮೇಲಾಟ
ಇದು ಜೀವನ ಜಂಟಾಟಕೆ ನೀಡುವ ಮನದೌಷಧಿ
ನಾವೆಲ್ಲ ಆಚರಿಸುವ ಬಾ ಪ್ರತಿವರುಷ ಯುಗಾದಿ!
- ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್