ಯುಗ ಯುಗಾದಿ
ಕವನ
ಮನದಿ ಸುಂದರ ಚಿತ್ರ ಹರಡಿದೆ
ಛಲದಿ ಮಂದಿರ ಕಟ್ಟಿದೆ
ಚೆಲುವು ಸೂಸಲು ತನುವು ಕುಣಿದಿದೆ
ಒಲವು ಹಾಡುತ ಬಂದಿದೆ
ಜೀವ ಜೀವನ ಸುಖದ ಭಾವನೆ
ಕಾವ ನನಸಲಿ ಮೂಡಿದೆ
ಬಾಳು ಗೆಲುವಲಿ ನಿತ್ಯ ಸವಿದಿದೆ
ಕಾಳ ಮೆಲ್ಲುತ ನಿಂತಿದೆ
ನವ್ಯ ಬದುಕಿಗೆ ತಾನು ಸೇರುತ
ಭವ್ಯ ಸಂಸ್ಕೃತಿ ಉಂಡಿದೆ
ಚೈತ್ರ ಋತುವಿಗೆ ಹಾಗೆ ಸೋಲುತ
ಕ್ಷಾತ್ರ ತೇಜವ ಹೊಂದಿದೆ
ಬೇವು ಬೆಲ್ಲದ ಯುಗದ ಧರ್ಮವು
ನೋವು ಇರದೇ ನಡೆದಿದೆ
ಮತ್ತೆ ಕೋಗಿಲೆ ಕುಕಿಲ ಗಾನವು
ಸುತ್ತ ಹರಡುತ ಸಾಗಿದೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
