ಯೆಂಜಲು ಮುಸುರೆ
ಕವನ
ನನ್ನ ನಿನ್ನ ನಡುವೆ,
ಬರೀ ಯೆಂಜಲು ಮುಸುರೆ!
ಪ್ರಣಯದಿಂದ ಸ್ಪರ್ಶಿಸಲು,
ಹೆಳುವೆ ಮಡಿ ಮೈಲಿಗೆ!
ನನ್ನ ನಿನ್ನ ನಡುವೆ,
ಬರೀ ಯೆಂಜಲು ಮುಸುರೆ!
ಯುಗಗಳು ಕಳೆದವೆ,
ಗುರುಕುಲಗಳು ವಿಶ್ವವಿದ್ಯಾಲಯಗಳಾಗಿವೆ,
ಚಂದ್ರತಾರೆಗಳ ದೂರ ತಿಳದಿದೆ,
ಪ್ರಿಯೆ!!
ನಿನ್ನ ಮೂಢನಂಬಿಕೆಗಳು ಪ್ರಾಣ ಹೀರುತಿವೆ!!
ನನ್ನ ನಿನ್ನ ನಡುವೆ,
ಬರೀ ಯೆಂಜಲು ಮುಸುರೆ!
ಎರಡು ಕಣ್ಣುಗಳ ನೊಟ ಒಂದೆ!
ಎರಡು ಕಿವಿಗಳ ಕೆಲಸ ಒಂದೆ!
ಕೈ ಕಾಲುಗಳಿಗೆ ಭೆಧ ಬೇಡಾ!
ಚಪ್ಪಾಳೆ, ನಡುಗೆಗೆ, ಎಡ ಬಲ ಬೇಕೆ?
ನನ್ನ ನಿನ್ನ ನಡುವೆ,
ಬರೀ ಯೆಂಜಲು ಮುಸುರೆ!
ಇನ್ನೂ ಇದೆ... ಇದು ಮುಗಿಯಲಾರದ ಪರದಾಟ!!