ರತನ್ ಟಾಟಾ ಹೇಳಿದ ಅಣಿ ಮುತ್ತುಗಳು
* ಸರಿಯಾದ ನಿರ್ಧಾರ ಕೈಗೊಳ್ಳುವುದರಲ್ಲಿ ನನಗೆ ನಂಬಿಕೆಯಿಲ್ಲ. ನಾನು ಮೊದಲು ನಿರ್ಧಾರ ಕೈಗೊಳ್ಳುತ್ತೇನೆ. ಬಳಿಕ ಅವುಗಳನ್ನು ಸರಿಯಾದ ನಿರ್ಧಾರವಾಗಿಸುತ್ತೇನೆ.
* ಮತ್ತೊಮ್ಮೆ ಮಾಡಬೇಕು ಎಂದೆನಿಸುವ ಕೆಲಸಗಳು ನನ್ನ ಜೀವನದಲ್ಲಿ ಸಾಕಷ್ಟಿವೆ. ಆ ಕೆಲಸವನ್ನು ನಾನೀಗ ಹಿಂದಿಗಿಂತ ಭಿನ್ನವಾಗಿ ಮಾಡಬಲ್ಲೆ. ಆದರೆ ಹಿಂದಿರುಗಿ ನೋಡಲು ಮತ್ತು ನಾನು ಏನೆಲ್ಲಾ ಮಾಡಬಹುದಿತ್ತು ಎಂದು ಯೋಚಿಸಲು ನನಗೆ ಇಷ್ಟವಿಲ್ಲ.
* ಜನ ನಿಮ್ಮತ್ತ ಎಸೆಯುವ ಕಲ್ಲುಗಳನ್ನೆಲ್ಲ ಸಂಗ್ರಹಿಸಿ. ಮುಂದೊಂದು ದಿನ ನಿಮ್ಮ ಸಾಧನೆಯ ಸ್ಮಾರಕ ನಿರ್ಮಿಸಲು ಅವುಗಳನ್ನು ಉಪಯೋಗಿಸಿ.
* ನೀವು ವೇಗವಾಗಿ ನಡೆಯಬೇಕು ಅಂದುಕೊಂಡಿದ್ದರೆ ಒಬ್ಬರೇ ನಡೆದುಕೊಂಡು ಹೋಗಿ. ಆದರ ಬಹು ದೂರ ನಡೆದು ಕೊಂಡು ಹೋಗಬೇಕೆಂದು ಬಯಸಿದರೆ ಇತರರನ್ನೂ ಜತೆಗೆ ಕರೆದೊಯ್ಯಿರಿ.
* ಬೇರೆಯವರನ್ನು ನಕಲು ಮಾಡುವ ವ್ಯಕ್ತಿ ಸ್ವಲ್ಪ ಸಮಯದವರೆಗೆ ಸಫಲನಾಗಬಲ್ಲ. ಆದರೆ ಆತ ಜೀವನದಲ್ಲಿ ತುಂಬಾ ದೂರ ಯಶಸ್ವಿಯಾಗಿ ಸಾಗಲಾರ.
* ಕಬ್ಬಿಣವನ್ನು ಯಾರೂ ನಾಶ ಮಾಡಲು ಸಾಧ್ಯವಿಲ್ಲ. ಆದರೆ ಅದರ ತುಕ್ಕೇ ಅದನ್ನು ನಾಶ ಮಾಡುತ್ತದೆ. ಹಾಗೇ ವ್ಯಕ್ತಿಯನ್ನು ಯಾರೂ ನಾಶ ಮಾಡಲಾರರು. ಬದಲಿಗೆ ಆತನ ಮನಸ್ಥಿತಿಯೇ ಆತನ ವಿನಾಶಕ್ಕೆ ಕಾರಣವಾಗುತ್ತದೆ.
* ನಾವು ಮುಂದೆ ಸಾಗುತ್ತಾ ಇರಬೇಕೆಂದರೆ ಜೀವನದಲ್ಲಿ ಏರಿಳಿತಗಳು ಬಹುಮುಖ್ಯ.
* ಅತ್ಯಂತ ಯಶಸ್ವಿ ವ್ಯಕ್ತಿಗಳನ್ನು ನಾನು ಪ್ರಶಂಸಿಸುತ್ತೇನೆ. ಆದರೆ ಅವರ ಆ ಯಶಸ್ಸು ನಿಷ್ಕರುಣೆಯ ಮಾರ್ಗದ ಮೂಲಕ ಬಂದಿದ್ದರೆ ಅಂತಹ ವ್ಯಕ್ತಿಗಳನ್ನು ನಾನು ಪ್ರಶಂಸಿಸಬಹುದು ಆದರೆ ಗೌರವಿಸುವುದಿಲ್ಲ.
* ನಂ ೧ ಆಗುವುದು ಸುಲಭ. ಆದರೆ ನಂ ೧ ಆಗಿಯೇ ಉಳಿಯುವುದು ಕಷ್ಟ. ಕಾರಣ, ನಂ ೧ ಆಗಿ ಉಳಿಯುವ ದೃಷ್ಟಿಕೋನದೊಂದಿಗೇ ನಾವು ಹೋರಾಡಬೇಕಾಗುತ್ತದೆ.
* ನಾವೆಲ್ಲರೂ ಸಮಾನವಾದ ಪ್ರತಿಭೆಯನ್ನು ಹೊಂದಿಲ್ಲ. ಆದರೆ ನಮ್ಮಲ್ಲಿರುವ ಪ್ರತಿಭೆಯನ್ನು ಉತ್ತಮವಾಗಿಸಿಕೊಳ್ಳಲು ಎಲ್ಲರೂ ಸಮಾನ ಅವಕಾಶ ಹೊಂದಿದ್ದೇವೆ.
* ನಿಮ್ಮ ಜೊತೆಗಿರುವವರು ಬೆಳೆಯಲು ಪ್ರೋತ್ಸಾಹ ನೀಡಿ. ಅವರಿಗೆ ಪ್ರಶ್ನೆ ಕೇಳಲು ಅವಕಾಶ ಕೊಟ್ಟು, ಅವರಲ್ಲಿರುವ ಹೊಸ ಐಡಿಯಾಗಳ ಬಗ್ಗೆ ಮುಕ್ತ ಮನಸ್ಸಿನಿಂದ ಚರ್ಚಿಸಲು ಬಿಡಿ. ಹೊಸ ಆಲೋಚನೆಗಳಿಂದ ಮಾತ್ರ ಅದ್ವಿತೀಯವಾದುದನ್ನು ಸಾಧಿಸಲು ಸಾಧ್ಯ.
* ನಿಮ್ಮ ಕೆಲಸ ಹಾಗೂ ಖಾಸಗಿ ಜೀವನ ಇವೆರಡನ್ನೂ ಅರ್ಥಪೂರ್ಣವಾಗಿ ನಿಭಾಯಿಸಿಕೊಂಡು ಹೋಗುವುದು ಹೇಗೆ ಎಂಬುದನ್ನು ಅಭ್ಯಾಸ ಮಾಡಿಕೊಳ್ಳಿ. ಏಕೆಂದರೆ, ಅವೆರಡೂ ಒಂದಕ್ಕೊಂದು ಪೂರಕವಾಗಿರುತ್ತವೆ.
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ