ರವಿಯಲ್ಲಿ ಕೋರಿಕೆ

ರವಿಯಲ್ಲಿ ಕೋರಿಕೆ

ಕವನ

ನೀಲಾಗಸದ ಬಯಲಿನಲಿ

ಕಾಲಮೇಘಗಳ ನಡುವಿನಲಿ

ಓಲಾಡುವ ಓ ಭಾಸ್ಕರನೆ

ಆಲಿಸೆನ್ನ ನುಡಿ ದಿನಕರನೆ

 

ಗ್ರಹಗಳ ಮಧ್ಯದಿ ಸಂಚಾರ

ಸಹಸ್ರಕರಗಳ ಸುಕುಮಾರ

ಮಹಿಯಜೀವಿಗಳ್ಗುಪಕಾರ

ಸಹನ ಶಕ್ತಿಯ ಸಾಕಾರ

 

ರವಿಯೆ ಎನ್ನ ಮನದಾಳವನು

ಕವಿದ ಅಜ್ಞಾನ ಕತ್ತಲನು

ಪವನ ಸುಳಿಯದ ತಾಣವನು

ದಿವಿರಾಜ ತೊಳೆಯೊ ಕೊಳೆಯನ್ನು

 

ಕಲಿಸು ನಿನ್ನಂತೆ ಕರ್ಮವನು

ಬೆಳೆಸು ಓಜ ತೇಜವ ನೀನು

ನಿಲಿಸು ಉಪಕಾರ ಬುದ್ಧಿಯನು

ಗೆಲಿಸು ಜೀವನದ ಪಂದ್ಯವನು

 

ಜಲ ಸ್ಥಳ ಮಲಿನದ ಮೇಲ್ನಿನ್ನ

ಥಳಥಳಿಸುವ ಕಿರಣಗಳನ್ನ

ಫಲಿಸುವಂತೆನ್ನ ಮನವನನು

ಗೊಳಿಸು ಸರ್ವಾತ್ಮ ಭಾವವನು

 

Comments