ರವಿವಾರ, ಜೂನ್ ೧೧, ೨೦೦೬ ರಂದು ನಡೆಯಲಿರುವ 'ಫಿಫಾ ವಿಶ್ವಕಪ್' ಪಂದ್ಯಗಳು !

ರವಿವಾರ, ಜೂನ್ ೧೧, ೨೦೦೬ ರಂದು ನಡೆಯಲಿರುವ 'ಫಿಫಾ ವಿಶ್ವಕಪ್' ಪಂದ್ಯಗಳು !

ಬರಹ

ರವಿವಾರ,ಜೂನ್ ೧೧, ೨೦೦೬ ರಂದು ನಡೆಯಲಿರುವ ಫಿಫಾ ವಿಶ್ವಕಪ್ ಪಂದ್ಯಗಳು:

೬-೩೦ ಸಾ. ಸರ್ಬಿಯ ವಿರುದ್ಧ ನೆದರ್ ಲ್ಯಾಂಡ್ಸ್ - ಸಿ.ಗ್ರುಪ್
೯-೩೦ ರಾ. ಮೆಕ್ಸಿಕೊ ವಿರುದ್ಧ ಇರಾನ್ - ಡಿ.ಗ್ರುಪ್.
೧೨-೩೦ ಮ.ರಾ. ಆಂಗೋಲ ವಿರುದ್ಧ ಪೋರ್ಚುಗಲ್ -ಡಿ.ಗ್ರುಪ್.

೧. ನೆನ್ನೆ ಆಡಿದ ಪಂದ್ಯಗಳಲ್ಲಿ, ಇಂಗ್ಲೆಂಡ್ ವಿರುದ್ಧ ಪರಗ್ವೆ (೧-೦). ಇಂಗ್ಲೆಂಡ್ ಗೆ ಉಡುಗೊರೆಯಾಗಿ ಒಂದು ಸ್ವತಃ ಗೋಲ್ ಮಾಡಿ ಕೊಟ್ಟ ಪರಗ್ವೆಯ ಕಪ್ತಾನ್ ಗಮಾರರ್, ಬಾಲನ್ನು ತಲೆಯಿಂದ ತಡೆದಾಗ ಅದು ಅವನ ಗೋಲಿನೊಳಗೆ ನುಸುಳಿದ್ದನ್ನು ಬಿಟ್ಟರೆ,ಇಂಗೆಂಡಿನ ಆಟ ಸಪ್ಪೆಯಾಗಿ ಕಂಡಿತು.

೨. ಟ್ರಿನಿಡಾಡ್ ಮತ್ತು ಟೊಬ್ಯಾಗೋ, ಕೆರೇಬಿಯನ್ನಿನ ಅತಿ ಚಿಕ್ಕ ದ್ವೀಪಗಳು, ಸ್ವೀಡನ್ ವಿರುದ್ಧ (೦-೦) ಡ್ರಾ ಮಾಡಿ ಕೊಂಡವು.

೩. ಅರ್ಜೆಂಟೈನ್, ಐವರಿ ಕೋಸ್ಟ ವಿರುದ್ಧ (೨-೧) ನಿಂದ ಜಯಗಳಿಸಿದರು.

(FIFA:(Federation Internationale de Football Association.) ಫಿಫಾ ವಿಶ್ವಕಪ್ಪಿನ ಬಗ್ಯೆ ವಿವರ :

೧೯೩೦ ರಲ್ಲಿ ಪ್ರಾರಂಭಗೊಂಡ" ಜುಲ್ಸ್ ರಿಮೆಟ್ "ಹೆಸರಿನ ಟ್ರೋಫಿ ಯನ್ನು ವಿಶ್ವಕಪ್ ಎಂದು ಫುಟ್ ಬಾಲ್ ವಿಜೆತರಿಗೆ ಕೊಡಲಾಗುತ್ತಿತ್ತು. ೧೯೪೬ ರಿಂದ ಇಚೆಗೆ ಪ್ರಪ್ರಥಮವಾಗಿ ಫುಟ್ ಬಾಲ್ ಟೂರ್ನ್ ಮೆಂಟ್ ನಿಯೋಜಿಸಿದ ಫುಟ್ ಬಾಲ್ ಅಧ್ಯಕ್ಷರ ಗೌರವಾರ್ಥವಾಗಿ "ಫಿಫಾ ವಿಶ್ವಕಪ್ "ಎಂದು ಬದಲಾಯಿಸಲಾಯಿತು.

೧೯೭೦ ರ ಹೊತ್ತಿಗೆ ಬ್ರೆಸಿಲ್ ದೇಶ ೩ ಬಾರಿ ವಿಶ್ವಕಪ್ ಗಳಿಸಿ 'ಟ್ರೋಫಿ' ಯನ್ನು ತನ್ನ ಸ್ವಾಧೀನವೆಂದು ಪರಿಗಣಿಸಿ ತನ್ನಬಳಿ ಇಟ್ಟು ಕೊಂಡಿತು. ಆದರೆ ೧೯೮೩ ರಲ್ಲಿ ಈ 'ಟ್ರೋಫಿ' ವಿಚಿತ್ರರೀತಿಯಲ್ಲಿ ಕಳುವಾಯಿತು;ಮತ್ತೆ ಸಿಕ್ಕಲೇ ಇಲ್ಲ !ಈಗ ಕಾನುನು ಬಿಗಿಮಾಡಲಾಗಿದ್ದು 'ಕಪ್ ವಿಜೇತ ರಾಷ್ರಗಳು 'ಏಷ್ಟೆ ಬಾರಿ ಗೆದ್ದರೂ, ಟ್ರೋಫಿಯನ್ನು ತಮ್ಮ ಅಧೀನದಲ್ಲಿ ಇಟ್ಟುಕೊಳ್ಳುವಂತಿಲ್ಲ ! ಟ್ರೋಫಿಯ ಹೊರಮೇಲ್ಮೈಮೇಲೆ ಗೆದ್ದ ರಾಷ್ಟ್ರದ ವಿವರಗಳನ್ನೆಲ್ಲಾ ದಾಖಲಾತಿ, ಪ್ರತಿ ೪ ವರ್ಷಗಳಿಗೊಮ್ಮೆ ಮಾಡಲಾಗುವುದು. ಇದು ೨೦೩೮ ನೆ ಇಸವಿಯವರೆವಿಗೂ ಚಾಲನೆಯಲ್ಲಿರುತ್ತದೆ.
ಆಮೇಲೆ ಸರ್ವಾನುಮತದ ಮೇರೆಗೆ "ಹೊಸ ಟ್ರೋಫಿಯ" ವಿನ್ಯಾಸ ಮಾಡಲಾಗುವುದು !