ರಷ್ಯಾ ಮತ್ತು ಉಕ್ರೇನ್ ಬಿಕ್ಕಟ್ಟು, ಮೋದಿ - ಪುಟಿನ್ ಮಾತುಕತೆ...!

ರಷ್ಯಾ ಮತ್ತು ಉಕ್ರೇನ್ ಬಿಕ್ಕಟ್ಟು, ಮೋದಿ - ಪುಟಿನ್ ಮಾತುಕತೆ...!

ಈ ಸುದ್ದಿಯ ಜಾಡು ಹಿಡಿದು...( ನಿನ್ನೆ ಇಬ್ಬರೂ ಅಧಿಕೃತವಾಗಿ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದಾರೆ ) ಇಬ್ಬರೂ ಸೇರಿ ದೂರವಾಣಿಯಲ್ಲಿ ಏನು ಮಾತನಾಡಿರಬಹುದು?

ಮೋದಿ : ಹಲೋ ನಮಸ್ತೆ ಪುಟಿನ್ ಅವರೇ,

ಪುಟಿನ್ : ಹಾಯ್, ನಮಸ್ತೆ ಮೋದಿಯವರೇ,

ಮೋದಿ : ಹೇಗಿದ್ದೀರಿ ?

ಪುಟಿನ್ : ನಾನು ಆರಾಮ, ನೀವು ?

ಮೋದಿ : ನಾನು ಏಕ್ ದಂ ಆರಾಮ. ನಿಮ್ಮ ಉಕ್ರೇನ್ ಮೇಲಿನ ಆಕ್ರಮಣ ಎಲ್ಲಿಯವರೆಗೆ ಬಂದಿದೆ?

ಪುಟಿನ್ : ನಿರೀಕ್ಷೆಗಿಂತ ಸ್ವಲ್ಪ ಹೆಚ್ಚು ಕಷ್ಟವಾಗುತ್ತಿದೆ ಮತ್ತು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಆ ನ್ಯಾಟೋದವರು ನಮ್ಮ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಅವರಿಗೂ ಪಾಠ ಕಲಿಸುತ್ತೇನೆ. ಅವರಿಂದಲೇ ಈ ಯುದ್ಧ.

ಮೋದಿ : ಪುಟಿನ್ ಅವರೇ ನೋಡಿ ಇದು ಹೀಗೆ ಮುಂದುವರೆದರೆ ಎಲ್ಲರಿಗೂ ಕಷ್ಟ. ಏನಾದರೂ ಮಾಡಿ ಉಕ್ರೇನ್ ಜೊತೆ ಮಾತುಕತೆ ಮಾಡಿ.

ಪುಟಿನ್ : ನಾವು ರೆಡಿ, ಮೊದಲಿನಿಂದಲೂ ಹೇಳುತ್ತಲೇ ಇದ್ದೇನೆ. ಯುದ್ಧ ಮಾಡಲು ನಮಗೇನು ಖುಷಿಯೇ. ಆದರೆ ಆ ಬೇಕೂಪ ಝಲೆನ್ಸ್ಕಿ ಅಮೆರಿಕ ಇಂಗ್ಲೆಂಡ್ ಹೇಳಿದಂತೆ ಕುಣಿಯುತ್ತಿದ್ದಾನೆ. ಅವನನ್ನು ಆದಷ್ಟು ಬೇಗ ಹೊಸಕಿ ಹಾಕಿ ಅಲ್ಲಿ ಬೇರೆ ಸರ್ಕಾರ ಸ್ಥಾಪನೆ ಮಾಡ್ತೀವಿ.

ಮೋದಿ : ಅದು ಅಷ್ಟು ಸುಲಭವಲ್ಲ ಪುಟಿನ್. ಬೈಡನ್ ಕೂಡ ಸ್ಟ್ರಾಂಗ್ ಆಗಿ ನಿಂತಿದ್ದಾರೆ. ಅವರ ಉದ್ದೇಶ ಯುದ್ದವನ್ನು ಆದಷ್ಟು ದೀರ್ಘಕಾಲ ಎಳೆದು ನಿಮ್ಮ ಆರ್ಥಿಕ - ಸೈನಿಕ ಶಕ್ತಿ ಕುಗ್ಗಿಸಿ ಆಮೇಲೆ ನಿಮ್ಮ ಮೇಲೆ ನೇರ ಆಕ್ರಮಣ ಮಾಡುತ್ತಾರೆ. ಸ್ವಲ್ಪ ಯೋಚಿಸಿ.

ಪುಟಿನ್ : ಅದೆಲ್ಲಾ ಸಾಧ್ಯತೆಗಳನ್ನು ನಾನೂ ಯೋಚಿಸಿದ್ದೇನೆ. ಜೊತೆಗೆ ನೀವು, ಚೀನಾ, ಉತ್ತರ ಕೊರಿಯಾ, ಇರಾನ್, ಪಾಕಿಸ್ತಾನ ಇನ್ನೂ ಕೆಲವು ದೇಶಗಳು ಇದ್ದೀರಲ್ಲಾ, ನಮಗೇನು ಭಯ.

ಮೋದಿ : ಹೌದು ಇದ್ದೀವಿ ನಿಜ. ಆದರೆ ನಿಮಗೆ ಗೊತ್ತಲ್ಲ ನಮ್ಮದು ಅಲಿಪ್ತ ನೀತಿ. ಯಾರೊಂದಿಗೂ  ನೇರ ರಕ್ಷಣಾ  ಒಡಂಬಡಿಕೆ ಇಲ್ಲ. ಆದರೆ ನಮ್ಮ ನೈತಿಕ ಬೆಂಬಲ ಸದಾ ನಿಮಗಿದೆ.

ಪುಟಿನ್ : ನನಗೂ ಗೊತ್ತು. ಅಷ್ಟು ಸಾಕು ಬಿಡಿ. ನೀವು ತಟಸ್ಥವಾಗಿರುವುದೇ ನಮಗೆ ಬೆಂಬಲವಿದ್ದಂತೆ. ಆದರೆ ವಾಣಿಜ್ಯ ವ್ಯವಹಾರದಲ್ಲಿ ಅನೇಕ ದಿಗ್ಬಂದನಗಳಿಂದ ನಮಗೆ ಸ್ವಲ್ಪ ತೊಂದರೆಯಾಗಿದೆ. ಆ ವಿಷಯದಲ್ಲಿ ನೀವು ಈಗಿರುವಂತೆ ಮುಂದೆಯೂ ಬೆಂಬಲ ನೀಡಬೇಕು.

ಮೋದಿ : ಖಂಡಿತ ಅದರಲ್ಲಿ ನಮ್ಮ ಸಂಪೂರ್ಣ ಸಹಕಾರ ಇರುತ್ತದೆ. ನೀವೇನೂ ಚಿಂತಿಸಬೇಡಿ. ಆದರೂ ಬೇಗ ಮಾತುಕತೆ ಪ್ರಾರಂಭಿಸಿ. ಒಂದು ಒಪ್ಪಂದದ ಪಾಯಿಂಟ್ ಗೆ ಬನ್ನಿ.

ಪುಟಿನ್ : ಇದೇ ಮಾತನ್ನು ಆ ಭೋ... ಮಗ ಝಲೆನ್ಸ್ಕಿ ಗೆ ಹೇಳಿ. ಅವನು ನ್ಯಾಟೋ ಪಡೆ ಸೇರುವುದಿಲ್ಲ ಎಂದು ಸಂವಿಧಾನ ತಿದ್ದುಪಡಿ ಮಾಡಿದ ತಕ್ಷಣ ನಾಳೆಯೇ ಯುದ್ಧ ನಿಲ್ಲಿಸಿ ಮತ್ತೆ ಉಕ್ರೇನ್ ಮರು ಸ್ಥಾಪಿಸಲು ಎಲ್ಲಾ ಸಹಕಾರ ನೀಡುತ್ತೇವೆ.

ಮೋದಿ : ನಾನು ಝಲೆನ್ಸ್ಕಿ ಬಳಿಯೂ ಮಾತನಾಡಿದೆ. ಆತ ಮೊದಲು ಸೈನ್ಯ ವಾಪಸ್ಸು ಪಡೆಯಲಿ. ಆಮೇಲೆ ನೋಡೋಣ ಎನ್ನುತ್ತಾರೆ.

ಪುಟಿನ್ : ಪ್ರಾಬ್ಲಮ್ ಇರೋದೆ ಅಲ್ಲಿ. ಸುಮ್ನೆ ಅಟ್ಯಾಕ್ ಮಾಡೋಕೆ ನಮಗೇನು ಹುಚ್ಚಾ 

ಮೋದಿ : ಉಕ್ರೇನ್ ಒಂದು ಸ್ವತಂತ್ರ ರಾಷ್ಟ್ರ. ಅದರ ಸಾರ್ವಭೌಮತ್ವದ ಮೇಲೆ ರಷ್ಯಾ ಅಧಿಕಾರ ಚಲಾಯಿಸುವುದು ತಪ್ಪಲ್ವಾ ಅಂತ ಬೈಡನ್ ಕೂಡ ಹೇಳಿದರು. ತನ್ನ ನೆರೆ ರಾಷ್ಟ್ರದ ಮೇಲೆ ದಾಳಿ ಮಾಡಲು ಅವನೇನು ರೌಡಿಯೇ. ಎಷ್ಟೊಂದು ಅಮಾಯಕ ಜನರನ್ನು ಕೊಲ್ಲುವುದು ಅನ್ಯಾಯವಲ್ಲವೇ. ಅದನ್ನು ನೋಡಿಕೊಂಡು ಸುಮ್ಮನೆ ಇರಬೇಕೆ ಎನ್ನುತ್ತಾರೆ.

ಪುಟಿನ್ : ಯಾವ ಸಾರ್ವಭೌಮತ್ವ. ಅವರು ಇರಾಕ್‌, ಆಫ್ಘನಿಸ್ಥಾನ, ವಿಯೆಟ್ನಾಂ ಮೇಲೆ‌ ದಾಳಿ ಮಾಡಲಿಲ್ಲವೇ, ಚೀನಾ ಟಿಬೆಟ್ ವಶಪಡಿಸಿಕೊಂಡು ತೈವಾನ್ ಮೇಲೆ ಕಣ್ಣಾಕಿಲ್ಲವೇ, ನೀವು ಪಾಕಿಸ್ತಾನ ಭಾಗದ ಕಾಶ್ಮೀರ, ಬಲೂಚಿಸ್ಥಾನದ ಮೇಲೆ ಕಣ್ಣಿಟ್ಟಿಲ್ಲವೇ, ಬಾಂಗ್ಲಾದೇಶ ಪ್ರತ್ಯೇಕ ರಾಷ್ಟ್ರ ಮಾಡಲಿಲ್ಲವೇ, ನೋಡಿ ನಾವೇನು ಉಕ್ರೇನ್ ಆಕ್ರಮಿಸಿಕೊಳ್ಳುವ ಉದ್ದೇಶ ಹೊಂದಿಲ್ಲ. ಅದರ ಸೈನ್ಯವನ್ನು ದುರ್ಬಲಗೊಳಿಸಿ ನ್ಯಾಟೋ ಸೇರದಂತೆ ತಡೆದು ಉಳಿದ ಎಲ್ಲಾ ವಿಷಯಗಳಲ್ಲಿ ಸ್ವತಂತ್ರ ನೀಡುತ್ತೇವೆ.

ಮೋದಿ : ಅದು ಸಾಧ್ಯವೇ. ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ಸುಮ್ಮನೆ ಇರುತ್ತವೆಯೇ. ಈಗಾಗಲೇ ನಿಮ್ಮನ್ನು ಹಿಟ್ಲರ್ ಗೆ ಹೋಲಿಸಲಾಗುತ್ತಿದೆ. ಮೂರನೇ ಮಹಾಯುದ್ಧ ಆದರೆ ನಿಮಗೂ ನಿಮ್ಮ ದೇಶದ ಜನರಿಗೂ ಮತ್ತು ಇಡೀ ವಿಶ್ವಕ್ಕೆ ತುಂಬಾ ತೊಂದರೆ ಆಗುತ್ತದೆ.

ಪುಟಿನ್ : ಅದನ್ನು ಆ ಬೈಡನ್ ಮತ್ತು ಟೀಂ ಗೆ ಹೇಳಿ. ಸುಮ್ಮನೆ ನಮ್ಮ ತಂಟೆಗೆ ಬರೋದು ಬೇಡ. ಅವರೇನಾದರೂ ನಮ್ಮ ಮೇಲೆ ಅಟ್ಯಾಕ್ ಮಾಡಿದರೆ ನಮ್ಮ ಕೊನೆಯ ಅಸ್ತ್ರ ಹೈಡ್ರೋಜನ್ ಬಾಂಬ್ ಉಪಯೋಗಿಸುವುದು ಗ್ಯಾರಂಟಿ.

ಮೋದಿ : ಅಷ್ಟೊಂದು ಎಮೋಷನ್ ಬೇಡ. ಸ್ವಲ್ಪ ತಾಳ್ಮೆಯಿಂದ ಇರಿ. ನೋಡೋಣ ಇನ್ನೊಮ್ಮೆ ಎಲ್ಲರ ಬಳಿ ಮಾತನಾಡುತ್ತೇನೆ.

ಪುಟಿನ್ : ಓ ಕೆ, ಓ.ಕೆ, - ನೆಹರು, ಶಾಸ್ತ್ರಿ, ಇಂದಿರಾಗಾಂಧಿ ಕಾಲದಿಂದಲೂ ಭಾರತ ನಮ್ಮ ಜೊತೆಗೇ ಇದೆ. ನೀವು ಡೊನಾಲ್ಡ್ ಟ್ರಂಪ್ ಕಾಲದಲ್ಲಿ ಸ್ವಲ್ಪ ಅಮೆರಿಕ ಪರವಾಗಿ ವಾಲಿದ್ದಿರಿ. ಅವರು ನಂಬಿಕೆ ದ್ರೋಹಿಗಳು. ನಾವು ನಿಮಗೆ ಸದಾ ಕಾಲ ಬೆಂಬಲಿಸುತ್ತೇವೆ. ಪಾಕಿಸ್ತಾನ ಮತ್ತು ಚೀನಾ ನಿಮ್ಮ ನೆರೆ ರಾಷ್ಟ್ರಗಳು ಎಂಬುದು ನಿಮ್ಮ ನೆನಪಿನಲ್ಲಿರಲಿ.

ಮೋದಿ : ಅದು ನಮಗೂ ಗೊತ್ತು. ವ್ಯಾಪಾರದ ದೃಷ್ಟಿಯಿಂದ ಮಾತ್ರ ಸ್ವಲ್ಪ ಅಮೆರಿಕದ ಜೊತೆ ಒಡನಾಟ ಜಾಸ್ತಿ ಮಾಡಿಕೊಂಡೆವು ಅಷ್ಟೇ. ನಿಮ್ಮ ಮೇಲೆಯೇ ಈಗಲೂ ಹೆಚ್ಚು ಪ್ರೀತಿ.

ಪುಟಿನ್ : ಆಯ್ತು, ನಮ್ಮ ಸೇನಾ ಜನರಲ್ ನಿಂದ ತುರ್ತು ಕರೆ ಬಂದಿದೆ. ಮತ್ತೆ ಮಾತನಾಡೋಣ. ಏನಾದರೂ ಎಮರ್ಜೆನ್ಸಿ ಇದ್ದರೆ ನಮ್ಮ ವಿದೇಶಾಂಗ ಮಂತ್ರಿಯ ಹಾಟ್ ಲೈನ್ ಗೆ ಮಾತನಾಡಿ. ಆದರೆ ಆ ಝಲೆನ್ಸ್ಕಿ ನ ಮಾತ್ರ ಬಿಡಲ್ಲ. ಅವನಿಗೆ ಹೇಳಿ, ಧನ್ಯವಾದಗಳು,

ಮೋದಿ : ಆಯ್ತು ಆಯ್ತು. ಶೀಘ್ರದಲ್ಲೇ ನಾನು ನ್ಯಾಟೋ ಅಧ್ಯಕ್ಷರ ಬಳಿ ಮಾತನಾಡುತ್ತೇನೆ. ಬೇಗ ಏನಾದರೂ ಒಂದು ಪರಿಹಾರ ಕಂಡುಹಿಡಿಯೋಣ. ದುಡುಕಬೇಡಿ. ವಂದನೆಗಳು.

( ಇದು ನನ್ನ ಗ್ರಹಿಕೆಗೆ ನಿಲುಕಿದ ಕಾಲ್ಪನಿಕ ಸಂಭಾಷಣೆ )

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ