ರಸ್ತೆಯಲ್ಲೇ ಹತ್ತು ದಿನ!
ಜಗತ್ತಿನಲ್ಲೆ ಹೆಚ್ಚು ಜನಸಂಖ್ಯೆ ಇರುವ ರಾಷ್ಟ್ರ ಚೀನಾ. ಏಷ್ಯಾದ ಅಭಿವೃದ್ಧಿ ರಾಷ್ಟ್ರಗಳಲ್ಲಿ ಭಾರತಕ್ಕಿಂತ ಒಂದು ಹೆಜ್ಜೆ ಮುಂದಿರುವ ದೇಶ. 2011ರ ಜನಗಣತಿ ಪ್ರಕಾರ ಚೀನಾದ ಜನಸಂಖ್ಯೆ ನೂರು ಕೋಟಿ 33 ಲಕ್ಷ. ಅಂದ್ರೆ ಭಾರತಕ್ಕಿಂತ 0.2ರಷ್ಟು ಹೆಚ್ಚಿನ ಜನಸಂಖ್ಯೆಯನ್ನ ಹೊಂದಿರೋ ಬೃಹತ್ ರಾಷ್ಟ್ರ. ಇಲ್ಲಿನ ರಸ್ತೆಗಳು ಅಷ್ಟೇ ದೊಡ್ಡವು.. ಇಷ್ಟು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರದಲ್ಲಿ ಟ್ರಾಫಿಕ್ ಜಾಮ್ ಆದ್ರೆ...
ಅಂಥ ಭಯ ಹುಟ್ಟಿಸೋ ಉದಾಹರಣೆಗಳಿಗೇನೂ ಕಮ್ಮಿ ಇಲ್ಲ. ಆದ್ರೆ 2010ರಲ್ಲಿ ಉಂಟಾದ ಟ್ರಾಫಿಕ್ ಜಾಮ್ ಮಾತ್ರ ಜಾಗತಿಕ ಇತಿಹಾಸದಲ್ಲೇ ದಾಖಲೆ ಸೃಷ್ಟಿಸ್ತು...
2010, ಆಗಸ್ಟ್ 14 ರಂದು ಅಂತದ್ದೊಂದು ದಾಖಲೆ ಆಗಿ ಹೋಯ್ತು. ಚೀನಾದ ರಾಷ್ಟ್ರೀಯ ಹೆದ್ದಾರಿ 110. ಬೀಜಿಂಗ್ ಅನ್ನು ಸಂಪರ್ಕಿಸುವ ಮೊಂಗೋಲಿಯಾದ ಪ್ರಮುಖ ಹೈವೇ. ಬೀಜಿಂಗ್-ಟಿಬೆಟ್ ಎಕ್ಸ್ ಪ್ರೆಸ್ ವೇ ಅಂತ್ಲೂ ಕರೀತಾರೆ. ಒಂದು ದಿನ ಈ ರಸ್ತೆಯಲ್ಲಿ ಏಕಾಏಕಿ ಟ್ರಾಫಿಕ್ ಜಾಮ್ ಆಯ್ತು. ಅವತ್ತು ಚೀನಾ ರಾಷ್ಟ್ರೀಯ ಹೆದ್ದಾರಿ 110ರಲ್ಲಿ ಮರಳು ಎರಚಿದರೂ ಅದು ನೆಲ ಮುಟ್ಟೋ ಸಾಧ್ಯತೆ ಕಮ್ಮಿಯಿತ್ತು. ಯಾಕಂದ್ರೆ ಅವತ್ತು ಆ ರಸ್ತೆಯಲ್ಲಿ ಉಂಟಾದ ಜಾಮ್ ಇತಿಹಾಸದ ಪುಟದಲ್ಲಿ ದಾಖಲಾಗುವಷ್ಟರ ಮಟ್ಟಿಗಿತ್ತು. ಡ್ರೈವರ್ಗಳು ಸರಕು ಸರಿಯಾದ ಸಮಯಕ್ಕೆ ತಲುಪಿಸಲಾಗದ ಆತಂಕದಲ್ಲಿದ್ದರು. ಇನ್ನೂ ಕೆಲ ಸಾಮಾನ್ಯ ಪ್ರಯಾಣಿಕ್ರು ತಮ್ಮ ಮನೆಗಳಿಗೆ ಹೋಗೋ ಧಾವಂತವೂ ಇತ್ತು.
ಆದ್ರೆ ಅಲ್ಲಿನ ಟ್ರಾಫಿಕ್ ಚಿಕ್ಕದಾಗಿರಲಿಲ್ಲ. ಅಂದು ಚೀನಾದ ರಾಷ್ಟ್ರೀಯ ಹೆದ್ದಾರಿ 110ರಲ್ಲಿ ಟ್ರಕ್, ಬಸ್, ಕಾರ್ ಮತ್ತು ಇತರೆ ವಾಹನಗಳು ನಿಂತಿದದ್ದು ಬರೋಬ್ಬರಿ 120 ಕಿ. ಮೀ ಉದ್ದ. 10 ಸಾವಿರಕ್ಕೂ ಹೆಚ್ಚಿನ ಕಲ್ಲಿದ್ದಲ್ಲು ಹೊತ್ತಿದ್ದ ಕಾರ್ಗೋ ಟ್ರಕ್ಸ್ ಗಳು ರಸ್ತೆಯುದ್ದಕ್ಕೂ ನಿಂತಿದ್ದವು. ಟ್ರಕ್ ಲಾರಿಗಳ ಜೊತೆ 60 ಲಕ್ಷ ವಾಹನಗಳು ರಸ್ತೆಯುದ್ದಕ್ಕೂ ನಿಂತಿದ್ದವು. ಈ ಟ್ರಾಫಿಕ್ ಜಾಮ್ ಒಂದೆರಡು ಗಂಟೆಯದ್ದಲ್ಲ.. ಒಂದರ್ಧ ದಿನ ಅಲ್ಲ.. ಟ್ರಾಫಿಕ್ ಜಾಮ್್ನಲ್ಲಿ ಹೀಗೆ ವಾಹನಗಳು ನಿಲ್ಲಬೇಕಾಗಿ ಬಂದದ್ದು ಬರೋಬ್ಬರಿ 10 ದಿನ. ಅಲ್ಲಿನ ಸ್ಥಳೀಯ ವ್ಯಾಪಾರಿಗಳು ಅಂಗಡಿಗಳನ್ನ ಮುಚ್ಚಲೇ ಇಲ್ಲ.
ರಸ್ತೆ ಬದಿಯ ವ್ಯಾಪಾರಿಗಳು ಟ್ರಕ್ನಿಂದ ಟ್ರಕ್ಗೆ ಆಹಾರದ ಪದಾರ್ಥಗಳನ್ನ ಮಾರುವ ಭರಾಟೆಯಲ್ಲಿದ್ದರು. ಕೆಲ ವ್ಯಾಪಾರಸ್ಥರಂತೂ ಕೇವಲ 6 ರೂಪಾಯಿಯ ಊಟವನ್ನು 69 ರೂಗೆ ಮಾರಿದ್ದರು. ಇದು ಮಾಮೂಲಿ ಬೆಲೆಗಿಂತ 10 ಪಟ್ಟು ಜಾಸ್ತಿಯಾಗಿತ್ತು.,. ಟ್ರಕ್ ಡ್ರೈವರ್ಗಳು ಬಿಸಿಲ ಧಗೆ ತಾಳಲಾರದೇ ಮೇಲಂಗಿಯನ್ನು ಬಿಚ್ಚಿ, ಇಸ್ಪೀಟ್ ಆಡುತ್ತಾ ಕಾಲ ಕಳೀತಿದ್ರು. ಇನ್ನೂ ಕೆಲವರಂತೂ ಕಾರ್ನಲ್ಲಿ, ಟ್ರಕ್ಗಳಲ್ಲಿ ನಿದ್ದೆ ಹೋಗ್ತಿದ್ರು. ಇದ್ದಷ್ಟೇ ನೀರಿನಲ್ಲಿ ಸ್ನಾನ ಮಾಡ್ತಿದ್ರು. ರಸ್ತೆ ಬದಿಯಲ್ಲೇ ನಿತ್ಯಕರ್ಮ ಪೂರೈಸಿದ್ದರು..
ವಾಹನಗಳು 120 ಕಿ.ಮೀ. ದೂರದವರೆಗೆ ವಾಹನಗಳು ಒಂದರ ಹಿಂದೆ ಒಂದರಂತೆ ಸರತಿ ಸಾಲಿನಲ್ಲಿ ನಿಂತಿದ್ವು. ವಾಹನ ಸವಾರರು ತಮ್ಮ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸಿ ಊಟ, ತಿಂಡಿ ಎಲ್ಲವನ್ನೂ ತರಿಸಿ ತಿನ್ನುತ್ತಿದ್ದರು. ಕೆಲವರು ವಾಹನ ನಿಲ್ಲಿಸಿ ಹತ್ತಿರದಲ್ಲೇ ಇರುವ ರೆಸ್ಟೋರೆಂಟ್ ಗೆ ಹೋಗಿ ಹೊಟ್ಟೆತುಂಬಾ ತಿಂದು, ನಿತ್ಯಕರ್ಮ ಮುಗಿಸಿ ಬಂದು ಮತ್ತೆ ವಾಹನದಲ್ಲಿ ಕುಳಿತುಕೊಳ್ಳುತ್ತಿದ್ದರು. ಒಂದೊಮ್ಮೆ ಟ್ರಾಫಿಕ್ ಸ್ವಲ್ಪವೇ ಸಡಿಲಗೊಂಡರೂ ಮುಂದಕ್ಕೆ ಸಾಗಲು ಸಾಧ್ಯವಾಗುತ್ತಿಲ್ಲ, ಕಾರಣ ಎದುರಿಗೆ ನಿಂತಿರುವ ವಾಹನಗಳಲ್ಲಿ ಚಾಲಕರು ಇದ್ದರೆ ಇರುತ್ತಾರೆ, ಇಲ್ಲದಿದ್ದರೆ ವಾಹನ ತೊರೆದು ಹೋಗಿರುತ್ತಾರೆ.
ಟ್ರಾಫಿಕ್ ಜಾಮ್ ಸಮಸ್ಯೆ ಪರಿಹರಿಸಲು ಟ್ರಾಫಿಕ್ ಪೊಲೀಸರು ಹರಸಾಹಸ ಪಡ್ತಿದ್ರು. ಬೀಜಿಂಗ್ ಗೆ ಹೊರಟಿರುವ ಟ್ರಕ್ ಗಳು ಹೆದ್ದಾರಿಯಲ್ಲಿಯೇ ಸಿಲುಕಿಕೊಂಡಿದ್ದು, ಅಗತ್ಯ ವಸ್ತುಗಳ ಸಾಗಾಟಕ್ಕೆ ಅಡಚಣೆಯಾಗುತ್ತಿದೆ. ಹತ್ತಿರದ ಆಹಾರ ವಸ್ತುಗಳ ಮಳಿಗೆಗಳು, ರೆಸ್ಟೋರೆಂಟ್ಗಳಲ್ಲಿ ಜನರು ವಿರಳವಾಗಿದ್ದು, ಆಹಾರ ಪೂರೈಕೆಯ ವಾಹನಗಳು ಸಂಚರಿಸದೆ ಸಮಸ್ಯೆ ಸೃಷ್ಟಿಯಾಗಿತ್ತು.
ಈ ವಾಹನಗಳು ದಿನಕ್ಕೆ ಮೂವ್ ಅಗ್ತಾ ಇದ್ದದ್ದು, ಅಬ್ಬಬ್ಬಾ ಅಂದ್ರೂ ಕೇವ್ಲ ಅರ್ಧ ಕಿ ಮೀ ಮಾತ್ರ. ಚೀನಾ ರಾಷ್ಟ್ರೀಯ ಹೆದ್ದಾರಿ 110ರಲ್ಲಿನ ಟ್ರಾಫಿಕ್ ಪ್ರಮಾಣ ಪ್ರತಿ ವರ್ಷ ಶೇಕಡ 40ರಷ್ಟು ಹೆಚ್ಚಾಗುತ್ತಲೇ ಇದೆ. ಇದ್ಕೆ ಬಹುಮುಖ್ಯ ಕಾರಣ ಕಲ್ಲಿದ್ದಲ್ಲು ಹೊತ್ತೊಯ್ಯುವ ಟ್ರಕ್ಕ್ಗಳು. ಸಮುದ್ರ ತೀರದಿಂದ ಬೀಜೀಂಗ್ ಸಿಟಿಗೆ ಕಲ್ಲಿದ್ದಲ್ಲು ಸಾಗಾಣಿಕೆ ಮಾಡ್ಲಾಗ್ತಿತ್ತು. 2009ರಲ್ಲಿ 602 ಟನ್ನಷ್ಟು ಸಾಗಾಣಿಕೆಯಾಗ್ತಿದದ್ದು, 2010ರಲ್ಲಿ 730 ಟನ್ ಹೆಚ್ಚಾಯ್ತು. ಅಷ್ಟರ ಮಟ್ಟಿಗೆ ಹೆಚ್ಎನ್110ರಲ್ಲಿ ಟ್ರಕ್ಗಳ ಓಡಾಟವಿತ್ತು.ಆದ್ರೆ ಸಂಚಾರಿ ಪೊಲೀಸ್ಗಳು ಮಾತ್ರ ಕೆಲವು ಅಪಘಾತಗಳಿಂದಾಗಿ ಟ್ರಾಫಿಕ್ ಜಾಮ್ ಉಂಟಾಯ್ತು ಅಂದಿದ್ರು.
ಅಲ್ಲದೆ ಚೀನಾದಲ್ಲಿ ವಾಹನಗಳ ಉತ್ಪಾದನೆಯಷ್ಟೇ ವೇಗವಾದ ವಾಹನಗಳ ಖರೀದಿ ಕೂಡ ನಡೀತಿದೆ. ಬೀಜಿಂಗ್ ಮುನ್ಸಿಪಲ್ ಸಮಿತಿಯ ಗಣತಿಯ ಪ್ರಕಾರ ಈ ರಸ್ತೆಯಲ್ಲಿ ವಾಹನಗಳ ಓಟಾಟದ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ತಾನೇ ಇದೆ. 6000 ಕಾರ್ಗಳು ಕೇವಲ ಒಂದೇ ದಿನದಲ್ಲಿ ಓಡಾಡ್ತವೆ ಅನ್ನೋದು ವಿಶೇಷ.
ಸಮಿತಿ ಹೇಳೋ ಪ್ರಕಾರ 2009ರಲ್ಲಿ 6000 ಕಾರ್ಗಳು ಓಡಾಡ್ತಾ ಇದ್ವು. 2010ರಲ್ಲಿ ಇವ್ಗಳ ಪ್ರಮಾಣ 10,000 ಆಯ್ತು. ಈ ಅಂಶ ಕೂಡ ಟ್ರಾಫಿಕ್ ಜಾಮ್ ಆಗೋಕೆ ಕಾರಣವಾಗಿತ್ತು.
ಇದು ಚೀನಾದ ಟ್ರಾಫಿಕ್ ಜಾಮ್ ಕಥೆ. ಭಾರತದಲ್ಲಿ ಇಲ್ವೇ ಬೆಂಗಳೂರಿನ ಹೆದ್ದಾರಿಯಲ್ಲಿ ಸ್ವಲ್ಪ ಹೊತ್ತು ರಸ್ತೆ ಬ್ಲಾಕ್ ಆಯ್ತು ಎಂದು ಆಕಾಶವೇ ತಲೆ ಮೇಲೆ ಬಿದ್ದಂತೆ ಮಾತಾಡುವ ನಾವು ಸ್ವಲ್ಪ ನೆರೆಯ ದೇಶದ ಪರಿಸ್ಥಿತಿ ನೋಡಿದ್ರೆ ಒಳ್ಳೆದೇನೋ? ಜನಸಂಖ್ಯೆ ಹೆಚ್ಚಾದಂತೆ ಪರಿಸ್ಥಿತಿ ಏನಾಗುತ್ತೆ ಅನ್ನೋದಕ್ಕೆ ಬೀಜಿಂಗ್ ಟ್ರಾಫಿಕ್ ಜಾಮ್ ಸೂಕ್ತ ಉದಾಹರಣೆ.
ಚಿತ್ರಕೃಪೆ-ಅಂತರ್ಜಾಲ.
Comments
ಉ: ರಸ್ತೆಯಲ್ಲೇ ಹತ್ತು ದಿನ!
In reply to ಉ: ರಸ್ತೆಯಲ್ಲೇ ಹತ್ತು ದಿನ! by pkumar
ಉ: ರಸ್ತೆಯಲ್ಲೇ ಹತ್ತು ದಿನ!
ಉ: ರಸ್ತೆಯಲ್ಲೇ ಹತ್ತು ದಿನ!
ಉ: ರಸ್ತೆಯಲ್ಲೇ ಹತ್ತು ದಿನ!
In reply to ಉ: ರಸ್ತೆಯಲ್ಲೇ ಹತ್ತು ದಿನ! by pkumar
ಉ: ರಸ್ತೆಯಲ್ಲೇ ಹತ್ತು ದಿನ!
ಉ: ರಸ್ತೆಯಲ್ಲೇ ಹತ್ತು ದಿನ!
In reply to ಉ: ರಸ್ತೆಯಲ್ಲೇ ಹತ್ತು ದಿನ! by ಗಣೇಶ
ಉ: ರಸ್ತೆಯಲ್ಲೇ ಹತ್ತು ದಿನ!