ರಾಂಗ್ ನಂಬರ್
ಟ್ರಿಂಗ್....ಟ್ರಿಂಗ್...
ದೂರವಾಣಿ ಒಂದೇ ಸಮ ರಿಂಗಣಿಸಿತು, ಬೆಳಗಿನ ಉಪಾಹಾರ ಸೇವಿಸುತ್ತಿದ್ದ ಕೆ.ಎಸ್.ರಾವ್ ಹುಬ್ಬುಗಂಟಿಕ್ಕಿ
ಎದ್ದು ಫೋನ್ ತೆಗೆದು "ಹೆಲೋ..." ಎಂದ
ಆ ತುದಿಯಿಂದ ಎಂತದೊ ಬಿಟ್ಟು ಬಿಟ್ಟು ಬರುತ್ತಿರುವ ರೀತಿಯಲ್ಲಿ , ಸಹಜವಲ್ಲದ ದ್ವನಿಯಲ್ಲಿ " ಹೆಲೋ ಇದು
ಅಂಡ್ರೋಮಿಡ ಗಲಾಕ್ಸಿಯ , ಆಲ್ಫ-ಎ ನಕ್ಷತ್ರಲೋಕದ ೫ನೆ ಗ್ರಹ ಭೂಮಿಕದಿಂದ, ನಾನು ಪೆನಿಲಿಯ ಆಕಾಶದರ್ಷಕ
ಕೇಂದ್ರದಿಂದ ಮಾತನಾದೋದು, ನನ್ನ ಪರಿಚಯ ರೆತಿಯ-೫೪೩೬ , ನಿಮ್ಮ ಪರಿಚಯ ಹೇಳಿ ಪ್ಲೀಸ್..."
ಯಾವುದೋ ಯಂತ್ರವೊಂದು ಮಾತನಾದಿದಂತೆ ಬರುತ್ತಿರುವ ಶಬ್ದ.ಆಶ್ಚರ್ಯಪಟ್ಟ ರಾವ್, ದೂರದ ಗ್ರಹದಿಂದ
ಬಂದ ಕರೆಗೆ ಈ ಭೂಮಿಯಿಂದ ಮೊದಲು ಮಾತಾನಾಡುವ ಅವಕಾಶ ನನಗೆ. ತಕ್ಷಣ ಅವರ ಅನುಮಾನದ
ಸಹಜ ಸ್ವಭಾವ ತಲೆ ಎತ್ತಿತು. ಖಂಡಿತ ಇದರಲ್ಲೇನೊ ಮೋಸವಿದೆ. ನೆನೆಪಿಸಿಕೊಂಡರು, ಸಂದೇಹವಿಲ್ಲ ಇದು
ಅವನದೆ ಕೆಲಸ . ಅವರ ಬಾವಮೈದುನ ರವಿ ನೆನಪಿಗೆ ಬಂದ , ಈ ರೀತಿ ಏನೊ ಮಾಡೋದು ನಂತರ ತನ್ನ
ಅಕ್ಕನ ಬಳಿ ಕುಳಿತು ಅಟ್ಟಹಾಸದಿಂದ ನಗುತ ತಾನು ಹೇಗೆ ಬಾವನನ್ನು ಕಿಚಾಯಿಸಿದೆ ಎಂದು ವಿವರಿಸುವುದು,
ಎಷ್ಟೋ ಬಾರಿ ನಡೆದಿದೆ. ಈ ಬಾರಿ ಮೊದಲೆ ಎಚ್ಚರಗೊಂಡರು ರಾವ್, ಮಾಡಲು ಏನು ಕೆಲಸವಿಲ್ಲದಿದ್ದರು
ಈ ರೀತಿಯ ಕುಚೇಷ್ಟೆಯಲ್ಲಿ ಪ್ರವೀಣ ಎನಿಸಿ ಕೋಪ ಬಂತು,
" ನೋಡು ರವಿ , ನನಗೆ ನಿನ್ನ ಈ ರೀತಿಯ ವರ್ತನೆ ಹಿಡಿಸುವುದಿಲ್ಲ, ಕಳೆದವಾರ ನೀನು ತೆಗೆದುಕೊಂದಿರುವ
೨೦,೦೦೦ ರೂ ಸಾಲ ಮೊದಲು ತಂದು ಕೊಡು, ನಿನ್ನ ಈ ಹುಡುಗಾಟ ಬಿಟ್ಟು ಜವಾಬ್ದಾರಿ ಕಲಿತುಕೋ" ಎಂದರು.
ಆ ಕಡೆಯಿಂದ ಪುನ: ಅದೆ ದ್ವನಿ " ಹಲೋ ಇದು ಮಿಲ್ಕೀವೇಯ ಭೂಮಿಯ, ದಯವಿಟ್ಟು ನಿಮ್ಮ ಪರಿಚಯ ಹೇಳಿ,
ದಯವಿಟ್ಟು ಸಹಕರಿಸಿ" ಅದೆ ಯಂತ್ರದ್ವನಿ,
ಕೋಪಗೊಡರು ರಾವ್ " ನೋಡು ರವಿ , ಹೇಳಿದರೆ ಕೇಳಬೇಕು , ನಿನ್ನ ಹುಡುಗಾಟ ನನ್ನ ಬಳಿ ಬೇಡ , ನಿನ್ನ
ಬಳಿ ಆಡುತ್ತ ಕುಳಿತಿರಲು ನನ್ನ ಬಳಿ ಸಮಯವಿಲ್ಲ ಆಫೀಸ್ ಗೆ ತಡವಾಯಿತು" ಎನ್ನುತ್ತ ಪೋನ್ ಕುಕ್ಕಿ,
ಈಡಿಯೆಟ್ ಎಂದು ಮನಸಿನಲ್ಲೆ ಶಪಿಸುತ್ತ ಪುನ: ಟೇಬಲ್ ಕಡೆ ನಡೆದರು.
***********.......
ಅತ್ತ ದೂರ ದೂರ ದ ಅಂಡ್ರೋಮಿಡ ಗಲಕ್ಸಿಯ ಅಲ್ಫ-ಎ ನಕ್ಷತ್ರ ಲೋಕದ ೫ ನೆ ಗ್ರಹದ ಜೀವಿ, ರೆತಿಯ-೫೪೩೬
ತಲೆ ಮೇಲೆ ಕೈ ಹೊತ್ತು ಕುಳಿತ, ತನ್ನ ಹಲವು ಕಾಲದ ಪ್ರಯೋಗ ದೂರ ಗ್ರಹದ ಸಂಪರ್ಕ ಪ್ರಯತ್ನ ಈ ರೀತಿ
ವಿಪಲವಾಗಿದಕ್ಕೆ ಅವನಿಗೆ ಅತೀವ ಸಂತಾಪವಾಗಿತ್ತು. ಮತ್ತೆ ಇದನ್ನೆ ಸಾದಿಸಲು ತಾನು ಪುನಃ ಪ್ರಯತ್ನಪಡಬೇಕು
ಎಂಬ ವ್ಯಾಕುಲ ಅವನಿಗೆ .