ರಾಜಕಾರಣಿಗಳು ಮತ್ತು ಚುನಾವಣೆಃ ಕೇಳುವವರೇ ಇಲ್ಲ ಜನಗಳ ಬವಣೆ

ರಾಜಕಾರಣಿಗಳು ಮತ್ತು ಚುನಾವಣೆಃ ಕೇಳುವವರೇ ಇಲ್ಲ ಜನಗಳ ಬವಣೆ

ಇಂದಿನ ರಾಜಕೀಯ ಇಚ್ಛಾಶಕ್ತಿಗಳಿಗೆ ದೇಶದ ಅಭಿವೖದ್ಧಿಯ ಚಿಂತನೆಗಳಿಲ್ಲ. ತಮ್ಮ ಸ್ವಾಥ೯ಕ್ಕಾಗಿ ರಾಜಕಾರಣ ಮಾಡುವ ದುರುದ್ದೇಶ, ತಮ್ಮ ಕುಟುಂಬ ಶ್ರೇಯೋಭಿವೖದ್ಧಿಗೆ ಮಾತ್ರ ಜನರ ಕಣ್ಣೀರೊರೆಸುವ ತಂತ್ರ, ಮೊಸಳೆ ಕಣ್ಣೀರಿಟ್ಟು ಪ್ರಚಾರ ಗಿಟ್ಟಿಸುವ ಕಾಯ೯ರೂಪಕ್ಕೆ ಸಿದ್ಧರಾಗುತ್ತಿರುವ ನಾಯಕರೇ ಸಮಾಜದಲ್ಲಿ ಬೆಳೆಯುತಿದ್ದಾರೆ.

ಜನಸಾಮಾನ್ಯರ ಹಬ್ಬ ಹರಿದಿನಗಳಲ್ಲಿ, ಜಾತ್ರಾ ಸಮಾರಂಭಗಳಲ್ಲಿ ಪ್ರತ್ಯಕ್ಷಗೊಳ್ಳುವ ರಾಜಕೀಯ ಮುಖಂಡರಿಗೆ ಅಲ್ಲಿನ ಜನಜೀವನದ ಬಗ್ಗೆ ನಿಗಾ ಇಡುವುದಕ್ಕಿಂತ ಹೆಚ್ಚಾಗಿ ಒಂದು ಸಮಾರಂಭಗಳಲ್ಲಿ ಭಾಗವಹಿಸಿ ಮರುದಿನದ ಪತ್ರಿಕೆಗಳಲ್ಲಿ ಕಾಣಿಸಕೊಳ್ಳುವುದೇ ಮುಖ್ಯ ಉದ್ದೇಶವಾಗಿದೆ.

ಹಲವು ಗ್ರಾಮೀಣ ಪ್ರದೇಶಗಳಲ್ಲಿ ನೀರಿಗೆ ತಾತ್ಸಾರ, ರಸ್ತೆಗಳ ದುರಸ್ಥಿ ಇಲ್ಲ. ವ್ಯವಸ್ಥಿತವಾಗಿ ಚರಂಡಿ ನೀರು ಹರಿದು ಹೋಗುವುದಿಲ್ಲ. ಮುಂತಾದ ಸಮಸ್ಯೆಗಳತ್ತ ಗಮನ ಹರಿಸದೇ ರಾಜಕೀಯ ಪ್ರಚಾರ ಸಭೆಗಳಲ್ಲಿ ತಮ್ಮ ಕಾಯ೯ ಚಟುವಟಿಕೆ ಜನಪರವಾಗಿತ್ತು ಎನ್ನುವ ಹಾಗೆ ಪ್ರತಿಬಿಂಬಸಲು ಹವಣಿಸುವವರೇ ಹೆಚ್ಚಾಗಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಪುಕ್ಕಟೆ ಪ್ರಚಾರಕ್ಕೆ ರಾಜಕಾರಣಿಗಳು ರೂಪಿಸುತ್ತಿರುವ ಕಾಯ೯ತಂತ್ರ ಹೇಸಿಗೆಯುಂಟು ಮಾಡಿದರೆ, ಇನ್ನೂ ಕೆಲವರ ವತ೯ನೆ ಮಾಧ್ಯಮಗಳಿಗೆ ಕಂಟಕವಾಗಿ ಪರಿಣಮಿಸುವುದರಲ್ಲಿ ಅಚ್ಚರಿಯೇನಿಲ್ಲ. ಪತ್ರಕತ೯ರಿಗೆ ರಾಜಕಾರಣಿಗಳ ಕಾಟಾಚಾರ ಒಂದೆಡೆ ಸಹಿಸಲಸಾಧ್ಯ ಆಗುವುದರಲ್ಲಿ ಸಂಧೇಹವಿಲ್ಲ.
 
ಕಾರಣ ವಷ೯ವಿಡೀ ಪತ್ರಿಕೆಗಳಿಗೆ ಜಾಹಿರಾತು ನೀಡುತ್ತೇವೆಂಬ ಬಿಗುಮಾನ ಅವರಲ್ಲಿರುತ್ತದೆ. ಕೆಲವರು ಯಾವುದೇ ಪತ್ರಿಕೆಗಳಿಗೆ ಜಾಹಿರಾತು ಕೊಡದವರಿದ್ದರೂ ಕೂಡ ದಬ್ಬಾಳಿಕೆ ನಡೆಸುವ ಚಿಲ್ಲರೆ ರಾಜಕಾರಣಿಗಳು ಎಲ್ಲೆಡೆ ಇದ್ದಾರೆ. ನೀವು ಪತ್ರಕತ೯ರಾಗಿ ಇರುವುದ್ಯಾಕೆ,? ನಿಮಗೆ ನಾವು ಕೊಟ್ಟಿದ್ದೇ ಸುದ್ಧಿಯಲ್ಲವಾ ಎಂಬ ಉದ್ಧಟತನದ ಪ್ರಶ್ನೆ ಎದುರಿಸಬೇಕು.

ಅವರು ಕೊಟ್ಟಿದ್ದೆಲ್ಲ ಪತ್ರಿಕೆಗಳಲ್ಲಿ ಸುದ್ಧಿಯಾಗಬೇಕು ಎಂಬುದು ಅವರಲ್ಲಿರುವ ಮೊಂಡುತನ ಪ್ರದಶಿ೯ಸುತ್ತದೆ. ಯಾವುದೇ ಪಕ್ಷದ ಜನನಾಯಕರು ಸಮಾರಂಭಗಳ ವೇದಿಕೆಗಳಲ್ಲಿ ಠೀಕು ಠಾಕಾಗಿಯೇ ಬಂದು ಜನರ ಮಧ್ಯೆ ಭಾಗವಹಿಸಿರುತ್ತಾರೆ. ಅವರು ಹೇಳಿದ್ದನ್ನು ಬರೆದುಕೊಂಡು ಪ್ರಕಟಿಸುವುದೇ ಮುದ್ರಣ ಮಾಧ್ಯಮದ ಧಮ೯ವೆ ಎಂಬ ಪ್ರಶ್ನೆ ಎದುರಾಗುತ್ತದೆ.

ವೇದಿಕೆಯಲ್ಲಿ ನಾಲ್ಕಾರು ಮಾತುಗಳನ್ನುದುರಿಸಿದ್ದೇ ಮಹಾತ್ಮರ ತತ್ವಾದಶ೯ಗಳು ಪಾಲಿಸಿದಷ್ಟೇ ಹೆಮ್ಮೆ ಪಡುವವರು ಮೈಕಿನ ಮುಂದೆ ಕಿರುಚಿ ಬಂದಿರುತ್ತಾರೆ. ಅದೇ ಮಾತನ್ನು ಮಾಣಿಕ್ಯವೆಂಬಂತೆ ಮರುದಿನ ಪತ್ರಿಕೆಯಲ್ಲಿ ಪ್ರಕಟವಾಗಬೇಕು ಎಂಬ ಹಠ ಅವರಲ್ಲಿರುವುದು ಸಹಜ. ಆದರೆ ಅದನ್ನು ಯಥಾವತ್ತಾಗಿ ಪ್ರಕಟಿಸಬೇಕು ಎಂಬ ಮಾನದಂಡ ಇದೆಯೇ..?

ಪ್ರಚಾರಪ್ರಿಯತೆಯ ಹಪಾಹಪಿತನ ಬಹುತೇಕ ರಾಜಕಾರಣಿಗಳಲ್ಲಿ ಇತ್ತೀಚಿಗೆ ಮನೆ ಮಾಡಿಕೊಂಡಿರುವುದರಿಂದ ಜನರ ಸಮಸ್ಯೆಗಳು ಅವರು ಯಾವ ರೀತಿ ನಿಭಾಯಿಸುತ್ತಾರೆ ಎಂಬುದನ್ನು ಜನಸಾಮಾನ್ಯರು ಚಿಂತಿಸಬೇಕು. ಇವರಿಂದ ಸರ್ವಾಂಗೀಣ ಸಮಾಜ ಅಭಿವೖದ್ಧಿ ಹೊಂದಲು ಸಾಧ್ಯವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
 
ಮಾಧ್ಯಮಗಳ ಮೂಲಕವಷ್ಟೇ ತಾವು ಉತ್ತಮರೆಂದು ಸಾಬೀತು ಪಡಿಸಲು ಮುಂದಾಗುವ ರಾಜಕಾರಣ ಹೆಚ್ಚಾಗಿದೆ. ವಾಸ್ತವಿಕ ಬದುಕಿನಲ್ಲಿ ಜನರ ಮೂಲ ಸಮಸ್ಯೆಗಳಿಗೆ ಸ್ಪಂಧಿಸುವ ನಿಟ್ಟಿನಲ್ಲಿ ಉತ್ತಮ ನಾಯಕರಾಗಬೇಕು. ಸಕಾ೯ರದ ಸೌಲಭ್ಯಗಳು ಒದಗಿಸುವುದರೊಂದಿಗೆ ಸನ್ನಡತೆಯ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಪ್ರಗತಿ ಸಾಧ್ಯ.

ಮತಬ್ಯಾಂಕ್ ಸ್ಥಾಪಿಸುವ ಹುನ್ನಾರದಲ್ಲಿ ಆಯಾ ಜಾತಿ ಜನಾಂಗದವರ ಹಬ್ಬ ಹರಿದಿನಗಳ ಸಡಗರದಲ್ಲಿ, ಜಾತ್ರಾ ಮಹೋತ್ಸವಗಳಲ್ಲಿ ಸಾಮಾನ್ಯ ಜನರೊಂದಿಗೆ ಬೆರೆಯುವುದು ಯಾವ ನ್ಯಾಯ. ಆಯಾ ಸಂದಭ೯ಗಳಲ್ಲಿ ಭಾರಿ ಗಾತ್ರದ ಕಟೌಟ್ಗಳು ನೇತಾಕಿದ ಮಾತ್ರಕ್ಕೆ ಜನಗಳ ಸಂಕಟಗಳು, ನೂರಾರು ಸಮಸ್ಯೆಗಳು ಬಗೆ ಹರಿಯುವುದಿಲ್ಲ.

ಜನರ ಕಣ್ಣಿಗೆ ರಾಜಕೀಯ ನಾಯಕರ ಭಾವಚಿತ್ರಗಳು ರಾರಾಜಿಸುವ ಹಾಗೆ ಎಲ್ಲೆಡೆ ರಸ್ತೆ, ಕಟ್ಟಡಗಳ ಅಂದವನ್ನು ಕೆಡಿಸಿರುತ್ತಾರೆ. ಕಟೌಟ್ಗಳಲ್ಲಿ ಚಂದವಾಗಿ ಕಾಣಿಸಿದರೆ ಹಸಿದವರ ಹೊಟ್ಟೆ ತುಂಬುವುದಿಲ್ಲ. ಸಿದ್ಧ ಕಟೌಟ್ಗಳಲ್ಲಿ ಕಾಣಿಸಿಕೊಂಡ ಮಾತ್ರಕ್ಕೆ ಜನನಾಯಕರಾಗಲು ಸಾಧ್ಯವಿಲ್ಲ.

ಪ್ರಜ್ಞಾವಂತ ನಾಗರಿಕರು ರಾಜಕೀಯ ನಾಟಕೀಯಕ್ಕೆ ಮಾರಿ ಹೋಗದೇ, ಚುನಾವಣೆಗಳಲ್ಲಿ ರಾಜಕೀಯ ದಾಳಕ್ಕೆ ಸಿಲುಕಿ ಆಸೆ, ಆಮಿಷಗಳಿಗೆ ಬಲಿಯಾಗದೇ ಇರುವುದರಿಂದ ಸಾಮಾಜಿಕ ಚಿಂತನೆಯುಳ್ಳ ನಾಯಕರನ್ನು ನಾವು ಆಯ್ಕೆ ಮಾಡಿಕೊಳ್ಳಬಹುದು. ಪ್ರಚಾರದಿಂದ ಸಮಾಜದ ಅಭಿವೖದ್ಧಿಯ ಕನಸು ನನಸಾಗಿಸಲು ಸಾಧ್ಯವಿಲ್ಲ.

ಜನಸಾಮಾನ್ಯರು ಗಮನಿಸಬೇಕಾದ ಪ್ರಮುಖ ವಿಚಾರವೆಂದರೆ ಕೆಲವೇ ತಿಂಗಳಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಗಾಗಿ ರಾಜ್ಯ ರಾಜಕಾರಣದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತಿವೆ. ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳಲ್ಲಿ ಭುಗಿಲೆದ್ದಿರುವ ಗೊಂದಲಗಳಿಂದ ಜನಜೀವನ ಅಸ್ತವ್ಯಸ್ತಗೊಂ ಡಿದೆ.
 
ಜನಗಳ ಅಭಿವೖದ್ಧಿಯ ಕನಸು ನನಸಾಗದೇ ಸಮಸ್ಯೆಗಳು ನಿಂತ ನೀರಾಗಿದೆ. ಗೊಂದಲದ ರಾಜಕೀಯ ವಾತಾವರಣ ನಿಮಾ೯ಣವಾಗಿದೆ. ಇದರಿಂದ ಸಮಾಜ ಕಲುಷಿತಗೊಳ್ಳುತ್ತಿದೆ. ಸಕಾ೯ರದ ಮೂಲ ಸೌಲಭ್ಯಗಳಿಂದ ವಂಚಿತರಾದ ಜನರ ತಲ್ಲಣದ ಬದುಕು ಮುಂದೆ ಸಾಗದಂತಾಗಿದೆ.

ಈ ಬಾರಿ ಮತ ಕೇಳಲು ಬಂದವರನ್ನು ಮಾತಿನ ಮಂಟಪಕ್ಕೊಯ್ಯಲು ಸನ್ನದ್ಧರಾಗಬೇಕು. ಪಕ್ಷ ಭೇದ ಮರೆತು ವ್ಯಕ್ತಿ ನಿಷ್ಠ, ಸಾಮಾಜಿಕ ಸರ್ವಾಂಗೀಣ ಅಭಿವೖದ್ಧಿಗಾಗಿ ಶ್ರಮಿಸುವ ಪಕ್ಷಗಳಿಗೆ ಬೆಂಬಲಿಸಬೇಕಾದ್ದು ಅಧ್ಯ ಕತ೯ವ್ಯವಾಗಿದೆ. ಮತದಾನದ ಹಕ್ಕು ಚಲಾಯಿಸುವವರ ಮೇಲೆ ಸದೖಢ ಸಮಾಜದ ಕನಸು ಅಡಗಿ ಕುಳಿತಿದೆ.
 
 

Comments

Submitted by makara Sat, 03/02/2013 - 12:49

ವೀರಣ್ಣನವರೆ, ನೀವು ಹೇಳುವ ವಿಚಾರ ರಾಜಕಾರಣಿಗಳ ಕುರಿತು ಆಲೋಚಿಸ ಬೇಕಾದುದೇ ಆಗಿದೆ. ಆದರೆ ಈಗ ಮತದಾರ ಯಾರನ್ನು ಆರಿಸ ಬೇಕೆಂಬ ಗೊಂದಲದಲ್ಲಿದ್ದಾನೆ ಏಕೆಂದರೆ ಅವನು ಎಲ್ಲಾ ರಾಜಕೀಯ ನಾಯಕರು ಹಾಗೂ ಪಕ್ಷಗಳ ಮೇಲೆ ನಂಬುಗೆಯನ್ನು ಕಳೆದುಕೊಂಡಿದ್ದಾನೆ. ಇದ್ದುದರಲ್ಲಿಯೇ ಕಡಿಮೆ ಕಳ್ಳನನ್ನು ಆರಿಸುವುದು ಜನರಿಗೆ ಉಳಿದಿರುವ ಏಕೈಕ ಮಾರ್ಗವೆನಿಸುತ್ತಿದೆ :((
Submitted by venkatb83 Sat, 03/02/2013 - 17:36

In reply to by makara

ಆವಾ ಕಳ್ಳ-ಇವ ಕಳ್ಳ-ಮಧ್ಯದಲ್ಲಿ ಒಬ್ಬ ಮಳ್ಳ .... ಅತ್ತ ದಾರಿ ಇತ್ತ ಪುಲಿ ಎಂದರೂ ಅಡ್ಡಿ ಇಲ್ಲ...!! ಮತದಾದರ್ರ ಸ್ಥಿತಿ ಏನು ಹೇಗೆ ಹೇಳೋದು? ಯುವ ಜನತೆಯಂತೂ ಈ ರಾಜಕಾರಣಿಗಳು-ಹಗರಣಗಳಿಂದ ಬೇಸತ್ತು ವೋಟು ಹಾಕದೆ ದೂರ ಉಳಿದು ತುಂಬಾ ದಿನಗಳೇ ಆಯ್ತು.. ೧೦೦-೧೦೦೦ ನೋಟು ನೀಡಿ ಸೂಟ್ಕೇಸ್ ಲೂಟಿ ಹೋದೆವ ರಾಜಕಾರಣಿಗಳ ಬಗ್ಗೆ ಯಾರಿಗೆ ಗೊತ್ತಿಲ್ಲ...?? ಹಾಗಾದ್ರೆ ಅವರನ್ನೇ ಯಾಕೆ ಆರಿಸೋದು.? ಅದೇ ಯಕ್ಷ ಪ್ರಶ್ನೆ ..ಉತ್ತರ ಗೊತ್ತಿಲ್ಲ...;(( ಸಕಾಲಿಕ ಚಿಂತನಾ ಬರಹ.. ಶುಭವಾಗಲಿ.. ಮತದಾರರಲ್ಲಿ ಜಾಗೃತಿ ಮೂಡಲಿ..ಸಭ್ಯ ಸುಶಿಕ್ಷಿತ ಸುಸಂಸ್ಕೃತ ಪ್ರಾಮಾಣಿಕರನ್ನು ನಿಲ್ಲಿಸಿ ಆರಿಸಲಿ..
Submitted by ವೀರಣ್ಣ ಮಂಠಾಳಕರ್ Sat, 03/02/2013 - 13:23

ನೀವು ಹೇಳುವುದು ನಿಜ ಸರ್, ಕಳ್ಳರಲ್ಲೇ ಉತ್ತಮರು ಯಾರೆಂಬುದನ್ನು ಮತದಾರರು ಗೊಂದಲದಲ್ಲಿರುವುದು ಸಹಜ. ಅದರ ಕುರಿತಾಗಿಯೂ ಮತ್ತೆ ಮತ್ತೆ ಸಾವ೯ಜನಿಕರಿಗೆ ತಿಳಿಸಬೇಕಾದ ಅನಿವಾಯ೯ತೆ ನಮ್ಮ, ನಿಮ್ಮಂಥವರ ಕತ೯ವ್ಯವಾಗಿದೆ. ಅದಕ್ಕಿಂತ ಹೆಚ್ಚಾಗಿ ಮಾಧ್ಯಮದ ಜವಾಬ್ದಾರಿ ಉತ್ತಮ ಸಮಾಜ ನಿಮಾ೯ಣಕ್ಕೆ ದಾರಿ ಮಾಡಿ ಕೊಡುತ್ತದೆ. ಅದಕ್ಕಾಗಿ ಪ್ರತಿಯೊಬ್ಬರ ಸಹಕಾರ ಬೇಕು. ಪ್ರಸ್ತುತವಾಗಿ ಸಮಾಜದಲ್ಲಿ ಆಗುತ್ತಿರುವ ಅನ್ಯಾಯ, ಅತ್ಯಾಚಾರ, ಭ್ರಷ್ಟಾಚಾರಗಳಿಗೆ ಇದೊಂದು ಶತಮಾನ ಸಾಕಾಗಬಹುದೇ ಎಂಬುದನ್ನು ಎಲ್ಲಾ ಪ್ರಜ್ಞಾವಂತ ನಾಗರಿಕರು ಚಿಂತಿಸಬೇಕಾದಿಗೆ. ನಿಮ್ಮ ಅಭಿಪ್ರಾಯಕ್ಕೆ ಅಭಿನಂದನೆಗಳು.