ರಾಜರ ಆಡಳಿತದಲ್ಲಿ ರಿಸೆಶನ್...!! -ಭಾಗ 2

ರಾಜರ ಆಡಳಿತದಲ್ಲಿ ರಿಸೆಶನ್...!! -ಭಾಗ 2

ಬರಹ

(ಇದು ಈ ಲೇಖನದ ೨ನೇ ಭಾಗ. ಮೊದಲನೇ ಭಾಗ ಓದಲು http://sampada.net/article/19036 ಕ್ಲಿಕಿಸಿ.)

ಸ್ವಲ್ಪ ದಿನಗಳ ನಂತರ....

ಎಂದಿನಂತೆ ರಾಜ ಸಭೆ ಶುರುವಾಯಿತು.. ರಾಜರು ಮಂತ್ರಿಗಳಾದಿಯಾಗಿ ಎಲ್ಲರೂ ಗಂಭಿರವಾಗಿ ಆರ್ಥಿಕ ಹಿಂಜರಿತದ ಕುರಿತು ಚರ್ಚೆ ಮಾಡುತ್ತಿದ್ದಾರೆ... ಅಷ್ಟರಲ್ಲಿ, ರಾಜ ಭಟರು ಒಬ್ಬನನ್ನು ಹಿಡಿದು ಸಭೆಗೆ ಕರೆ ತಂದರು.

ಮಹಾರಾಜರು : ದಳವಾಯಿಗಳೆ, ಯಾರಿವನು ? ಇವನನ್ನು ಈ ಸಭೆಗೆ ಎಕೆ ಕರೆತಂದಿರಿ ?

ದಳವಾಯಿಗಳು : ಪ್ರಭು, ಇವನು ಯಾವುದೊ T.V. 9 ಎಂಬ ಸುದ್ದಿ ವಾಹಿನಿಯ ನಿರೂಪಕನಂತೆ. ನಮ್ಮ ರಾಜ್ಯದ ಬೆಟ್ಟ,ಗುಡ್ಡ, ಗುಹೆ, ಪೊದೆ ಎಲ್ಲಂದರಲ್ಲೆ ಹೊಕ್ಕು ಅದನ್ನು ಚಿತ್ರಿಸಿಕೊಂಡು "ಹಿಗೋ ಉಂಟೆ ?" , "ಹಿಗೋ ಉಂಟೆ ?" ಎಂದು ಅರಚುತ್ತಿರುತ್ತಾನೆ ಮಹಾಪ್ರಭು. ನಮ್ಮ ರಾಜ್ಯದ ಬೆಟ್ಟ,ಗುಡ್ಡಗಳನ್ನು ನೋಡಿ "ಹಿಗೋ ಉಂಟೆ ?" , "ಹಿಗೋ ಉಂಟೆ ?" ಎಂದು ಅವಮಾನ ಮಾಡುತ್ತಿರುವನಲ್ಲ ಎಂದು ಬಂದಿಸಿ ಕರೆತಂದೆವು..

ಮಹಾರಾಜರು: ದಳವಾಯಿಗಳೆ, ಇವನು ಯಾವ ಮಹಾ ತಪ್ಪು ಮಾಡಿರುವನೆಂದು ಬಂದಿಸಿರುವಿರಿ. ಅವನು ಅವರ ರಾಜ್ಯದಲ್ಲಿ ಕಾಣದ್ದನ್ನು ಇಲ್ಲಿ ನೋಡಿ ಅಶ್ಚರ್ಯದಿಂದ " ಹಿಗೋ ಉಂಟೆ ?" ಎಂದಿರುವನು.. ಅದರಲ್ಲಿ ಅವಮಾನದ ಪ್ರಶ್ನೆಯಲ್ಲಿ ಬಂತು.. ಅವನು ಯಾವ ತಪ್ಪು ಮಾಡಿಲ್ಲ. ಇದರ ಬಗ್ಗೆ ಚರ್ಚಿಸಲು ನಮಗೆ ಸಮಯವಿಲ್ಲ.. ಸಭೆಯ ಸಮಯ ವ್ಯರ್ಥ ಮಾಡದೆ, ಅವನನ್ನು ಬಿಡುಗಡೆ ಮಾಡಿ ನೀವು ಈ ಕೊಡಲೇ ಹೊರಡಿ. ಅವರಿಗೆ ಸಕಲ ಮರ್ಯಾದೆಗಳೊಂದಿಗೆ ಬೀಳ್ಕೋಡುಗೆ ನೀಡಿ.

ದಳವಾಯಿಗಳು: ಅಪ್ಪಣೆ ಮಹಾಪ್ರಭು...

ಮಹಾರಾಜರು: ಹಾಗೆ, ಅವರು ಮತ್ತೆ ನಮ್ಮ ರಾಜ್ಯಕ್ಕೆ ಬಂದರೆ ಅವರ ಕಾರ್ಯಕ್ರಮಕ್ಕೆ ಅಡ್ಡಿ ಮಾಡಬೇಡಿ. ಮತ್ತು ನಮ್ಮ ರಾಜ್ಯದಲ್ಲೂ T.V.9 ಸುದ್ದಿ ವಾಹಿನಿಯನ್ನು ಪ್ರಸಾರ ಮಾಡಲು ಎಲ್ಲಾ ಎರ್ಪಾಡು ಮಾಡಿ.

ದಳವಾಯಿಗಳು: ಅಪ್ಪಣೆ ಮಹಾಪ್ರಭು...

ಮಂತ್ರಿಗಳು : ಆ ಸುದ್ದಿ ವಾಹಿನಿಯಲ್ಲಿ ಕೆಲವು ಉತ್ತಮ ಮತ್ತು ಸ್ವಾರಸ್ಯಕರ ಕಾರ್ಯಕ್ರಮಗಳು ಮೂಡಿಬರುತ್ತವೆ, ಆದರೆ ಅದರ ಜೊತೆಗೆ ಕೆಲವು ಮೂಢನಂಬಿಕೆಗಳನ್ನು ಬಿತ್ತುವ ಕಾರ್ಯಕ್ರಮಗಳು ಮೂಡಿಬರುತ್ತವೆ. ಆದು ಅಲ್ಲದೆ, ಆ ರಾಜ್ಯದಲ್ಲಿನ ಕೆಲವು ಮುಖಂಡರ ಮಾತುಗಳು ಪ್ರಚೋಧನಕಾರಿಯಾಗಿದ್ದು ಮತಾಂದತೆಯನ್ನು, ಧರ್ಮಾಂಧತೆಯನ್ನು ಬಿತ್ತುತ್ತವೆ. ಇವರ ಸಂಸ್ಥೆ ಸುದ್ದಿವಾಹಿನಿಯಾಗಿರುವುದರಿಂದ ಆವರ ಬಾಷಣವನ್ನು ಸುದ್ದಿಗಾಗಿ ಜನತೆಗೆ ತಿಳಿಸುತ್ತಾರೆ.. ಅದರೆ ಜನತೆ ಭಾಷಣದ ಪ್ರಚೋಧನೆಗೆ ಒಳಪಡುತ್ತಾರೆ. ಆದ್ದರಿಂದ ಆ ಸುದ್ದಿವಾಹಿನಿ ನಮ್ಮ ರಾಜ್ಯದಲ್ಲಿ ಪ್ರಸಾರವಾಗುವುದರಿಂದ ನಮ್ಮ ರಾಜ್ಯದಲ್ಲಿರುವ ಅರೋಗ್ಯಕರ ಸಮಾಜ ಎಲ್ಲಿ ಹಾಳಗುವುದೊ ಎಂಬ ಭಯ ಮಹಾಪ್ರಭು.

ಮಹಾರಾಜರು: ಮಂತ್ರಿಗಳೇ, ನಿಮ್ಮ ಅಭಿಪ್ರಾಯ ಸರಿಯಾದುದೇ, ಆದರೆ ನಮ್ಮ ರಾಜ್ಯದ ಜನ ಅಂಥವರಮಾತಿನಿಂದ ಪ್ರಚೋಧನೆಗೆ ಒಳಪಡುತ್ತಾರೋ, ಅಂಥ ಕಾರ್ಯಕ್ರಮಗಳಿಂದ ಮೊಢನಂಭಿಕೆಗಳನ್ನು ಬೆಳೆಸಿಕೊಳ್ಳುತ್ತಾರೊ ಅಥವಾ ತಮ್ಮ ಸ್ವಂತ ಬುದ್ಧಿಯಿಂದ ಸಾಮರಸ್ಯ ಕಾಪಡುತ್ತಾರೊ ಎಂದು ನಾವು ನೋಡಬೇಕಾಗಿದೆ. ಇದು ನಮ ಜನರ ನೆಡತೆಗೆ ನಾವು ಕೊಡುತ್ತಿರುವ ಸಣ್ಣ ಪರೀಕ್ಷೆ. ಇದರಲ್ಲಿ ನಮ್ಮ ಜನ ಖಂಡಿತ ಉತ್ತೀರ್ಣಾರಾಗುವರೆಂಬ ಭರವಸೆ ನಮಗಿದೆ. ಅದ್ದರಿಂದ ಆ ಸುದ್ದಿವಾಹಿನಿಯನ್ನು ಪ್ರಸಾರ ಮಾಡಲು ವ್ಯವಸ್ಥೆ ಮಾಡಿ.

ಮಂತ್ರಿಗಳು: ಅಪ್ಪಣೆ ಮಹಾಪ್ರಭು.

ಮಹಾರಾಜರು: ಮಾತು ಎತ್ತಲೊ ಸಾಗುತ್ತಿದೆ. ಈಗ ಅವೆಲ್ಲವನ್ನು ಬಿಟ್ಟು ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸಲು ಎನು ಮಾಡಬೇಕೆಂದು ಚರ್ಚೆ ಮಾಡೋಣ.

ಅಷ್ಟರಲ್ಲಿ ರಾಜ ಭಟನೊಬ್ಬ ಬಂದು ರಾಜರನ್ನು ಕುರಿತು : ಪ್ರಭು ತಮ್ಮನ್ನು ಕಾಣಲು ಬ್ಯಾಂಕಿನ ಸಿಬ್ಬಂದಿ ಬಂದಿದ್ದಾರೆ.

ಮಹಾರಾಜರು : ಅವರನ್ನು ಒಳಗೆ ಕಳಿಸಿ.

ಬ್ಯಾಂಕಿನ ಸಿಬ್ಬಂದಿ ಬಂದು ರಾಜರನ್ನು ಕಂಡು ಲೋನ್ ಮತ್ತು ಇ.ಎಮ್.ಐ. ಕುರಿತು ಎಲ್ಲಾ ವಿವರಿಸಿದರು.

ಬ್ಯಾಂಕ್ ಸಿಬ್ಬಂದಿ: ನೀವು ಒಪ್ಪಂದದ ಪತ್ರಗಳನ್ನು ಪೊರ್ತಿ ಓದದೇ ಸಹಿ ಮಾಡಿದ್ದೇ ಇದಕ್ಕೆಲ್ಲಾ ಕಾರಣ. ಪತ್ರದಲ್ಲಿ ಇವೆಲ್ಲವನ್ನು ಸವಿಸ್ತಾರವಾಗಿ ತಿಳಿಸಿದ್ದೇವೆ. ಒಪ್ಪಂದದ ಪ್ರಕಾರ ನೀವು ಪೂರ್ತಿ ಸಾಲವನ್ನು ಇನ್ನೊಂದು ತಿಂಗಳಲ್ಲಿ ಮರುಪಾವತಿಸದಿದ್ದಲ್ಲಿ ಅರಮನೆ ಹರಾಜಾಗುವುದು.

ಒಂದು ಕ್ಷಣ ಸಭೆಯಲ್ಲಿ ಸ್ಮಶಾನ ಮೌನ.

ಸೇನೆಯ ಮುಖ್ಯಸ್ಥ : (ಬ್ಯಾಂಕ್ ಸಿಬ್ಬಂದಿಗೆ, ತನ್ನ ಖಡ್ಗವನ್ನು ಹೊರ ತೆಗೆದು..) ಯಾರ ಮುಂದೆ ಎನು ಮಾತನಾಡುತ್ತಿದ್ದಿರಿ ? ತಾಯಿ ಚಾಮುಂಡೇಶ್ವರಿಯಾಣೆ, ಇನ್ನೊಮ್ಮೆ ಆ ಮಾತಾಡಿದರೆ, ಒಬ್ಬೊಬರ ರುಂಡವನ್ನು ಚಂಡಾಡಿಬಿಟ್ಟೇನು..

ಮಹಾರಾಜರು: ಸೇನಾಧಿಪತಿಗಳೆ, ದಯವಿಟ್ಟು ಶಾಂತರಾಗಿ. ಒಪ್ಪಂದದ ಪತ್ರಗಳನ್ನು ಪೊರ್ತಿ ಓದದೇ ಸಹಿ ಮಾಡಿದ್ದು ನಮ್ಮ ತಪ್ಪು. ಇದರಲ್ಲಿ ಅವರ ತಪ್ಪೇನು ಇಲ್ಲ.

ಮಹಾರಾಜರು: ನಾವು ಇನ್ನೂಂದು ತಿಂಗಳಲ್ಲಿ ನಿಮ್ಮ ಹಣವನ್ನು ಮರುಪಾವತಿಸಲು ಎಲ್ಲಾ ಎರ್ಪಾಡು ಮಾಡುತ್ತೇವೆ, ನೀವಿನ್ನು ಹೊರಡಿ.

ಮಹಾರಾಜರು: ಮಂತ್ರಿಗಳೇ, ಎಂಥ ಅನರ್ಥವಾಯಿತು..

ಮತ್ತೆ ಎಲ್ಲಾ ಚಿಂತೆ ಮಾಡಲು ಶುರು ಮಾಡಿದರು..

ಮಹಾರಾಜರು: ಮಂತ್ರಿಗಳೆ, ಈಗ ನಮಗೆ ಕಾಲಾವಕಾಶವಿಲ್ಲ... ಬೇಗ ಎನಾದರೊಂದು ಉಪಯಾ ಹೇಳಿ.

ಮಂತ್ರಿಗಳು: ಪ್ರಭು ಒಂದು ಉಪಾಯವಿದೆ. ನಿಮ್ಮ ಹಿರಿಯರ ಕಾಲದಲ್ಲಿ ವಿಠಲ್ ಮಲ್ಯ ಎಂಬುವರಿಗೆ ಮಹಾಪ್ರಭುಗಳು ಉದ್ಯಮ ಶುರು ಮಾಡಲು ಅಪಾರವಾದ ಸಾಲವನ್ನು ಕೊಟ್ಟಿದ್ದರು. ಈಗ ಅದನ್ನು ಅವರು ಹಿಂದಿರುಗಿಸಿದರೆ, ನಮ್ಮ ಕಷ್ಟವೆಲ್ಲ ಬಗೆಹರಿಯುತ್ತದೆ.

ಮಹಾರಾಜರು: ಆದರೆ ವಿಠಲ್ ಮಲ್ಯ ಅವರು ಕಾಲವಾಗಿ ತುಂಬಾ ದಿನಗಳಾಗಿದೆಯಲ್ಲಾ ?

ಮಂತ್ರಿಗಳು: ಹೌದು ಮಹಾಪ್ರಭು. ಈಗ ಅವರ ಪುತ್ರನಾದ ವಿಜಯ್ ಮಲ್ಯ ಎಂಬುವವರಿದ್ದಾರೆ. ಅವರು ಅಲ್ಲಿ ದೊಡ್ಡ ಉದ್ಯಮಿಯಾಗಿ, ಅಪಾರ ಧನಸಂಪತ್ತುಳ್ಳವರಾಗಿದ್ದಾರೆ. ಅವರಿಗೆ ಈ ವಿಷಯ ತಿಳಿಸಿದರೆ ಅವರು ಆ ಹಣವನ್ನು ಹಿಂತಿರುಗಿಸಬಹುದು..

ಮಹಾರಾಜರು: ಆದರೆ ಅವರು ತಮ್ಮ ತಂದೆಯ ಸಾಲವನ್ನು ತಾವು ಇಷ್ಟು ದಿನಗಳ ನಂತರ ಹಿಂತಿರುಗಿಸಲು ಒಪ್ಪುವರೆ ?

ಮಂತ್ರಿಗಳು: ಖಂಡಿತ ಮಹಾಪ್ರಭು. ಅವರು ಯಾವಗಲೂ ಹೆಣ್ಣು, ಹೆಂಡದ ಸುತ್ತ ಇದ್ದರೂ, ಸ್ವಭಾವ ತುಂಬ ಒಳ್ಳೆಯದೆ. ಗಾಂಧಿಯ ಕನ್ನಡಕಕ್ಕೆ, ಟಿಪ್ಪು ಸುಲ್ತಾನನ ಖಡ್ಗಕ್ಕೆ ಕೊಟ್ಯಾಂತರ ರೂಪಾಯಿ ಖರ್ಚು ಮಾಡಿದ ದೇಶ ಪ್ರೇಮಿ.

ಮಹಾರಾಜರು: ದಿವಾನರೆ ಹಾಗಿದ್ದರೆ ಈ ಕೊಡಲೇ ಅವರನ್ನು ಸಂಪರ್ಕಿಸಿ ಹಣದ ಬಗ್ಗೆ ಮಾತನಾಡಿ.

ಮಂತ್ರಿಗಳು: ಅಪ್ಪಣೆ ಮಹಾಪ್ರಭು.

ದಿವಾನರು ಫೋನ್ ಮುಖಾಂತರ, ಮಲ್ಯ ಸಾಹೆಬ್ರನ್ನು ಸಂಪರ್ಕಿಸಿ ವಿಷಯ ತಿಳಿಸಿದರು. ಮಲ್ಯ ಸಾಹೆಬ್ರು ತುಂಬ ನೊಂದುಕೊಂಡು ಈಗ್ಲೆ ಹಣ ಕಳುಸ್ತಿನಿ.. ಯಾರದರು ನಿಮ್ಮವರನ್ನು ಇಲ್ಲಿಗೆ ಕಳುಹಿಸಿ ಎಂದರು. ಆಸ್ಥಾನದಿಂದ ೪ ಜನ ರಾಜ ಭಟರು ಮಲ್ಯರನ್ನು ಭೇಟಿಯದರು. ಮಲ್ಯರವರು ತಡ ಮಾಡದೆ, ೧೦ ಕೋಟಿ ದುಡ್ಡನ್ನು ಕೊಟ್ಟು ಒಂದು ಕಾರಲ್ಲಿ ಅವರೆಲ್ಲರನ್ನು ಮೈಸೊರಿಗೆ ಕಳುಹಿಸಿದರು. ಮೈಸೊರಿಗೆ ಕಾರಿನಲ್ಲಿ ಬರುವಾಗ ಮಾರ್ಗ ಮಧ್ಯದಲ್ಲಿ ಪೋಲಿಸರ ಚೆಕ್ಕಿಂಗ್ ನೆಡೀತಾ ಇತ್ತು.

ಪೋಲಿಸರು : (ರಾಜ ಭಟರಿಗೆ..)ಕಾರಲ್ಲಿ ಎನಿದೆ ?
ರಾಜ ಭಟರು : ೧೦ ಕೋಟಿ ದುಡ್ಡು ಇದೆ.
ಪೋಲಿಸರು : ಅಯ್ಯೋ ... ಅಯ್ಯೋ.. ೧೦ ಕೊಟಿ . ಯಾಕೆ ಆಷ್ಟೊಂದು ಡುಡ್ಡು ?
ರಾಜ ಭಟರು : ಪ್ರಭುಗಳು ಜನಕ್ಕೆ ಸಹಾಯ ಮಾಡೋಕೆ.
ಪೋಲಿಸರು : ಚುನಾವಣೆ ನೀತಿಸಂಹಿತೆ ಜಾರಿಯಿದೆ ಅಂತ ಗೊತ್ತಿಲ್ವಾ... ರೀ 240, ದುಡ್ಡು ಸೀಝ್ ಮಾಡಿ ಅವರಲ್ಲಿ ಒಬ್ಬರನ್ನು ಅರೆಸ್ಟ್ ಮಾಡಿ.. ಉಳಿದವರನ್ನು ಬಿಟ್ಟು ಬಿಡಿ.

-- ಮುಂದುವರೆಯುತ್ತದೆ....