ರಾಜ್ಯೋತ್ಸವಕ್ಕೆ ಸಂಪದದ ಮತ್ತೊಂದು ಕೊಡುಗೆ: ಸಂಪದ ಮೊಬೈಲ್ ಆವೃತ್ತಿ!
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಕಂಪ್ಯೂಟರ್ ಕ್ಷೇತ್ರದಲ್ಲಿ ಕನ್ನಡಿಗರನೇಕರು ಕೆಲಸ ಮಾಡುತ್ತಿದ್ದರೂ, ಕನ್ನಡಿಗರು ಅಂತರ್ಜಾಲ ಚಟುವಟಿಕೆಗಳಾದ ಇ-ಮೇಲ್, ಚಾಟ್, ಚರ್ಚೆ, ಬ್ಲಾಗ್ ಗಳಲ್ಲಿ ತೊಡಗಿಕೊಂಡಿದ್ದರೂ ಕಂಪ್ಯೂಟರ್ ಹಾಗೂ ಅಂತರಜಾಲದಲ್ಲಿ ಕನ್ನಡದ ಅನುಪಸ್ಥಿತಿ ಎದ್ದು ಕಾಣುವಂತಿತ್ತು. ಯುನಿಕೋಡ್ ಬೆಂಬಲ ಬಂದ ನಂತರವೂ ಇಮೇಲ್ ಗಳಲ್ಲಿ, ಚಾಟ್ ಸೇವೆಗಳಲ್ಲಿ ಕನ್ನಡದ ಅಕ್ಷರಗಳನ್ನು ಮೂಡಿಸಬಹುದು ಎನ್ನುವುದೇ ಅನೇಕರಿಗೆ ತಿಳಿದಿರಲಿಲ್ಲ. ಇಂಗ್ಲೀಷ್ ಲಿಪಿಯನ್ನೇ ಬಳಸಿ ಕನ್ನಡವನ್ನು ಬರೆಯುವ ವಿಚಿತ್ರ ಕಂಗ್ಲೀಷ್ ಉಪಾಯಕ್ಕೆ ಹಲವರು ಶರಣಾಗಿದ್ದರು. ಆ ಸಂದರ್ಭದಲ್ಲಿ ಕನ್ನಡದ ಬಳಕೆಯನ್ನು ಅಂತರ್ಜಾಲದಲ್ಲಿ ಹೆಚ್ಚಿಸುವ ಉದ್ದೇಶವನ್ನಿಟ್ಟುಕೊಂಡು ಪ್ರಾರಂಭವಾಗಿದ್ದು 'ಸಂಪದ' ಸಮುದಾಯ ತಾಣ.
ಸಂಪದ ಈಗಾಗಲೇ ಆರು ವಸಂತಗಳನ್ನು ಪೂರೈಸಿದೆ. ಅತಿ ಹೆಚ್ಚು ಕನ್ನಡದ ಬರಹಗಳನ್ನು ಹೊಂದಿರುವ, ಬಹುದೊಡ್ಡ ಕನ್ನಡದ ಸಮುದಾಯವನ್ನು ಹೊಂದಿರುವ ಅಂತರಜಾಲ ತಾಣವಾಗಿ ಸಂಪದ ರೂಪುಗೊಂಡಿರುವುದಕ್ಕೆ ಸಂಪದದ ಬೆನ್ನೆಲುಬಾದ ತಾಂತ್ರಿಕ ಪರಿಣಿತಿ, ಬೆಂಬಲದ ಜೊತೆಗೆ ಎಲ್ಲಾ ಸದಸ್ಯರ ಸಹೃದಯತೆಯೂ ಕಾರಣ. ಸಂಪದದಿಂದಾಗಿ ಅನೇಕ ಮಂದಿ ಕಂಪ್ಯೂಟರಿನಲ್ಲಿ ಕನ್ನಡ ಬಳಸುವುದನ್ನು ಕಲಿತರು, ಕೆಲವರು ಸಹೃದಯ ಸಮುದಾಯದ ನೆರಳಿನಲ್ಲಿ ಬರವಣಿಗೆಯ ಕೌಶಲ್ಯವನ್ನೂ ಬೆಳೆಸಿಕೊಂಡರು ಎಂದು ನೆನಪಿಸಿಕೊಳ್ಳುವುದಕ್ಕೆ ನಮಗೆ ಹೆಮ್ಮೆಯಾಗುತ್ತದೆ. ಸಂಪದದಲ್ಲಿ ಬರೆದ ಕೆಲವರು ಮುನ್ನಡೆದು ಮೆಚ್ಚುಗೆ ಪಡೆದ ಪುಸ್ತಕಗಳ ಕರ್ತೃಗಳಾಗಿದ್ದಾರೆ, ಕೆಲವರು ಪತ್ರಿಕೆಗಳಿಗೆ ಹಾಗು ನಿಯತಕಾಲಿಕಗಳಿಗೆ ಲೇಖನ/ಕಾಲಂ ಬರೆಯುತ್ತಿದ್ದಾರೆ.
ಸದ್ದಿಲ್ಲದೆ ಕನ್ನಡದ ಕೆಲಸವನ್ನು ಮಾಡಿಕೊಂಡು ಬರುತ್ತಿರುವ ಸಂಪದ ಸಮುದಾಯ ಈ ಬಾರಿಯ ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಹೆಚ್ಚಿಸುವ ಎರಡು ಸಿಹಿ ಸುದ್ದಿಗಳನ್ನು ನೀಡುತ್ತಿದೆ.
ಮೊದಲನೆಯದನ್ನು ಈಗಾಗಲೇ ನಿಮ್ಮ ಗಮನಕ್ಕೆ ತರಲಾಗಿದೆ. ಸಂಪದದ ಅಮೂಲ್ಯ ಸಂದರ್ಶನಗಳ ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ.
ಎರಡನೆಯದಾಗಿ, ಮೊಬೈಲ್ ಗಳಲ್ಲಿ ಓದಲೆಂದೇ ಪ್ರತ್ಯೇಕವಾದ ಸಂಪದ ವೆಬ್ ಸೈಟ್ ಆವೃತ್ತಿ ಸಿದ್ಧವಾಗಿದೆ. ನೀವು ಅಂತರಜಾಲ ಸಂಪರ್ಕವಿರುವ ಯಾವ ಮೊಬೈಲ್ ಫೋನಿನಿಂದ ಸಂಪದ ತೆರೆದರೂ ನೇರವಾಗಿ ಮೊಬೈಲ್ ಆವೃತ್ತಿಗೆ ನಿಮ್ಮನ್ನು ಕೊಂಡೊಯ್ಯುತ್ತದೆ. ಸರಳ ಹಾಗೂ ಹಗುರವಾದ ಪುಟಗಳಿರುವ ಮೊಬೈಲ್ ಆವೃತ್ತಿ ಬಲುಬೇಗನೇ ಮೊಬೈಲಿನಲ್ಲಿ ಲೋಡ್ ಆಗುತ್ತದೆ. ಆರು ತಿಂಗಳ ಹಿಂದೇ ಈ ಆವೃತ್ತಿ ಸಿದ್ಧಪಡಿಸಲಾಗಿತ್ತು. ಅದನ್ನು ಸಂಪೂರ್ಣ ಕಾರ್ಯ ಪ್ರವೃತ್ತಗೊಳಿಸಿ ಅಧಿಕೃತವಾಗಿ ಇಂದು ಪ್ರಕಟಿಸುತ್ತಿದ್ದೇವೆ.
ಪೂರ್ಣ ಆವೃತ್ತಿಯ ಎಲ್ಲಾ ಕಾರ್ಯಚಟುವಟಿಕೆಗಳನ್ನು ಮೊಬೈಲ್ ಆವೃತ್ತಿ ಬೆಂಬಲಿಸುತ್ತದೆ. ಮೊಬೈಲ್ ಫೋನಿನಲ್ಲಿ ಸಂಪದವನ್ನು ಓದುವುದಷ್ಟೇ ಅಲ್ಲ, ಸಂಪದಕ್ಕೆ ಲಾಗಿನ್ ಆಗಬಹುದು. ಮೊಬೈಲ್ ನಿಂದಲೇ ಲೇಖನಗಳನ್ನು , ಚಿತ್ರಗಳನ್ನು ಪ್ರಕಟಿಸಬಹುದು. ಪ್ರಕಟಿತ ಬರಹಗಳಿಗೆ ಪ್ರತಿಕ್ರಿಯೆಗಳನ್ನು ಸೇರಿಸಬಹುದು. ಮೊಬೈಲ್ ಮೂಲಕವೇ ಚರ್ಚೆಗಳಲ್ಲಿ ಭಾಗವಹಿಸಬಹುದು.
ಅಂತರಜಾಲ ಹಾಗೂ ಮೊಬೈಲ್ ಆವೃತ್ತಿಗಳ ಸ್ಕ್ರೀನ್ ಶಾಟ್ ಗಳು ಇಲ್ಲಿವೆ:
ಕನ್ನಡ ಅಂತರಜಾಲದ ಸಂದರ್ಭದಲ್ಲಿ ಅನೇಕ ಪ್ರಥಮಗಳಿಗೆ ಕಾರಣವಾಗಿರುವ ಸಂಪದ ಈಗ ಮೊಬೈಲ್ ಆವೃತ್ತಿಯಲ್ಲಿ ಲಭ್ಯವಿರುವ ಪ್ರಪ್ರಥಮ ಹಾಗೂ ಏಕೈಕ ಕನ್ನಡ ಸಮುದಾಯ ತಾಣ ಎನ್ನಿಸುತ್ತದೆ.
ಎಂದಿನಂತೆ ನಿಮ್ಮ ಬೆಂಬಲ ಹಾಗೂ ಹಾರೈಕೆಯ ನಿರೀಕ್ಷೆಯಲ್ಲಿ. ಈ ಬಾರಿಯ ಕನ್ನಡ ರಾಜ್ಯೋತ್ಸವ ಹೆಚ್ಚಿನ ಸಂಭ್ರಮ ಹಾಗು ಪ್ರಗತಿ ತರಲಿ ಎಂದು ಆಶಿಸುವ,
- ಸಂಪದ ತಂಡ
Comments
ಉ: ರಾಜ್ಯೋತ್ಸವಕ್ಕೆ ಸಂಪದದ ಮತ್ತೊಂದು ಕೊಡುಗೆ: ಸಂಪದ ಮೊಬೈಲ್ ಆವೃತ್ತಿ!
In reply to ಉ: ರಾಜ್ಯೋತ್ಸವಕ್ಕೆ ಸಂಪದದ ಮತ್ತೊಂದು ಕೊಡುಗೆ: ಸಂಪದ ಮೊಬೈಲ್ ಆವೃತ್ತಿ! by malleshgowda
ಉ: ರಾಜ್ಯೋತ್ಸವಕ್ಕೆ ಸಂಪದದ ಮತ್ತೊಂದು ಕೊಡುಗೆ: ಸಂಪದ ಮೊಬೈಲ್ ಆವೃತ್ತಿ!
ಉ: ರಾಜ್ಯೋತ್ಸವಕ್ಕೆ ಸಂಪದದ ಮತ್ತೊಂದು ಕೊಡುಗೆ: ಸಂಪದ ಮೊಬೈಲ್ ಆವೃತ್ತಿ!
ಉ: ರಾಜ್ಯೋತ್ಸವಕ್ಕೆ ಸಂಪದದ ಮತ್ತೊಂದು ಕೊಡುಗೆ: ಸಂಪದ ಮೊಬೈಲ್ ಆವೃತ್ತಿ!
ಉ: ರಾಜ್ಯೋತ್ಸವಕ್ಕೆ ಸಂಪದದ ಮತ್ತೊಂದು ಕೊಡುಗೆ: ಸಂಪದ ಮೊಬೈಲ್ ಆವೃತ್ತಿ!
ಉ: ರಾಜ್ಯೋತ್ಸವಕ್ಕೆ ಸಂಪದದ ಮತ್ತೊಂದು ಕೊಡುಗೆ: ಸಂಪದ ಮೊಬೈಲ್ ಆವೃತ್ತಿ!
ಉ: ರಾಜ್ಯೋತ್ಸವಕ್ಕೆ ಸಂಪದದ ಮತ್ತೊಂದು ಕೊಡುಗೆ: ಸಂಪದ ಮೊಬೈಲ್ ಆವೃತ್ತಿ!
In reply to ಉ: ರಾಜ್ಯೋತ್ಸವಕ್ಕೆ ಸಂಪದದ ಮತ್ತೊಂದು ಕೊಡುಗೆ: ಸಂಪದ ಮೊಬೈಲ್ ಆವೃತ್ತಿ! by santhosh_87
ಉ: ರಾಜ್ಯೋತ್ಸವಕ್ಕೆ ಸಂಪದದ ಮತ್ತೊಂದು ಕೊಡುಗೆ: ಸಂಪದ ಮೊಬೈಲ್ ಆವೃತ್ತಿ!
In reply to ಉ: ರಾಜ್ಯೋತ್ಸವಕ್ಕೆ ಸಂಪದದ ಮತ್ತೊಂದು ಕೊಡುಗೆ: ಸಂಪದ ಮೊಬೈಲ್ ಆವೃತ್ತಿ! by shreekant.mishrikoti
ನಾನು ಒಪೇರಾ ಬ್ರೌಸರ್ ಹಾಕಿ ನೀವ್