'ರಾಜ 'ಕಾರಣ.....!?

'ರಾಜ 'ಕಾರಣ.....!?

ಸೃಷ್ಟಿಕರ್ತನ ಗೋಲಾಕಾರದ ಭೂಮಿಯ ಮೇಲೆ ಮೂಡಿದ ನೆಲವನ್ನು, ರೇಖೆಗಳಿಂದ ಬೇರ್ಪಡಿಸಿ ಮಾನವ ದೇಶವನ್ನು ಕಟ್ಟಿದ. ದೇಶಕ್ಕಾಗಿ ಒಬ್ಬ ರಾಜ ಮತ್ತು ಅವನ ವ್ಯವಸ್ಥೆ. ಆ ವ್ಯವಸ್ಥೆಯಲ್ಲಿ ಎಲ್ಲರೂ ಸಮನಂತೆ. ಬಡವ, ಶ್ರೀಮಂತ, ಪುರುಷ, ಮಹಿಳೆ ಎನ್ನುವ ಭೇಧ ಭಾವವಿಲ್ಲದೆ.  ರಾಜನನ್ನು ಬಿಟ್ಟು..!!  ಇಂತಹ ರಾಜರನ್ನು, ಅವರ ಆ ಕೆಟ್ಟ ರಾಜಕಾರಣವನ್ನು ಹಲವು ಮಾನವರು ವಿರೋದಿಸಿದ್ದಾರೆ. ಸ್ವಾತಂತ್ರ್ಯಕ್ಕಾಗಿ ತಮ್ಮ 24ನೇ ವಯಸ್ಸಿಗೆ ಪ್ರಾಣತ್ಯಾಗ ಮಾಡಿದ್ದಾರೆ. ಆದರೆ, ಏನಕ್ಕೆ?! ಅಂತಹ ರಾಜಕಾರಣ ಹಾಗು ರಾಜಕಾರಣಿಗಳು ಮತ್ತೆ ಮತ್ತೆ ಬರುತ್ತಲೇ ಇದ್ದಾರೆ, ಜನರು ನೋಡುತ್ತಲೇ ಇದ್ದಾರೆ.ಹೀಗೊಂದು ಸನ್ನಿವೇಶ.......

.

.

ಎಡೆಬಿಡದೆ ಬಡಿಯುತ್ತಿದ್ದ ಅಲಾರ್ಮ್ ನ ತಲೆಯ ಮೇಲೊಂದು ಜೋರಾಗಿ ಚೆಚ್ಚಿ, ಭಗತ್ ಮೇಲೆದ್ದ. ಕೈಯ  ಅಸ್ತಗಳನ್ನೊಮ್ಮೆ ನೋಡಿ, ಹಾಗೆ ಮುಗುಳ್ನಕ್ಕು ಆಫೀಸಿಗೆ ರೆಡಿ ಆಗಿ, ಅಮ್ಮ ಮಾಡಿಟ್ಟಿದ್ದ ತಿಂಡಿಯನ್ನು ತರಾತುರಿಯಲ್ಲಿ ತಿಂದು, ಟೀ ಅನ್ನೂ ಕುಡಿಯದೆ ಓಡಲಾರಂಬಿಸಿದ. ಬಲಗೈಯಲ್ಲಿ ಕಪ್ಪಾದ ಲ್ಯಾಪ್ಟಾಪ್ ಬ್ಯಾಗ್,ಎಡಗೈಯಲ್ಲಿ ಅದೇ ಬಣ್ಣದ ಕೋಟು, ಕುತ್ತಿಗೆಯ ಸುತ್ತ ಕಾಫಿ ಬಣ್ಣದ ಟೈ. "ಯಾಕೊ ಅಸ್ಟ್ ಬೇಗ ಹೋಗ್ತಾ ಇದ್ದೀಯ.. ಟೀ ಮಾಡ್ತಿನಿ ತಾಳು" ಎಂದ ಅಮ್ಮನ ಮಾತಿಗೆ "ಇವತ್ತು ರಾಜಕಾರಣಿ ಗಳ ಇಂಟರ್ವ್ಯೂ ಇದೆ .. ಟೈಮ್ ಆಯ್ತು!! ಪ್ರೋಗ್ರಾಮ್ 11.30 ಕ್ಕೆ ಲೈವ್ ಇದೆ, ನೋಡು" ಅನ್ನುತ ತನ್ನ ಕಾರಿನೆಡೆಗೆ ಓಡಿದ...

ಆಫೀಸಿಗೆ ಬಂದವನೆ ಭಗತ್ ತನ್ನ ಪ್ರೊಗ್ರಾಮ್ ಪ್ರೋಡುಸೆರ್ ರೂಮಿನ ಬಳಿ ಹೋಗಿ ಡೋರ್ ಅನ್ನು ತಟ್ಟಿದ." ಕಂ-ಇನ್ " ಅಂದ ಪ್ರೋಡುಸೆರ್, ಭಗತ್ನನ್ನು ಕಂಡು " ಒಹ್ ಭಗತ್!! ಗುಡ್ ಮಾರ್ನಿಂಗ್ ಮ್ಯಾನ್.. ಕಮ್ ಟೇಕ್ ಯುವರ್ ಸೀಟ್ .. ಐ ವಾಸ್ ವೈಟಿಂಗ್ ಫಾರ್ ಯು”

" ಮಾರ್ನಿಂಗ್ ಸರ್.. ಥಾಂಕ್ ಯು " ಅನ್ನುತ ಭಗತ್ ಪ್ರೋಡುಸೆರ್ನ ಮುಂದೆ ಕೂತ.ತನ್ನ ಬಳಿ ಇದ್ದ ಹತ್ತಿಪ್ಪತು ಹಾಳೆಗಳನ್ನು ನೋಡಿದ ಪ್ರೋಡುಸೆರ್ ನಂತರ ಅವುಗಳನ್ನು ಭಗತ್ನ ಮುಂದಿಟ್ಟ.

" ಸೀ ಭಗತ್.. ಇವು ಇವತ್ತಿನ ರಾಜಕಾರಣಿಗಳ  ಬಯೋ ಡಾಟಾ...ಹಾಗೆ ಒಮ್ಮೆ ನೋಡು….. ಆಮೇಲೆ, ಪ್ರೋಗ್ರಾಮ್ ಇಂಟೆರೆಸ್ಟಿಂಗ್ ಆಗಿ ಬರಬೇಕು.. ಐ ನೀಡ್ ಅ ವೆರಿ ಗುಡ್ TRP ದಿಸ್ ಟೈಮ್.. MLAಗಳ ಮದ್ಯೆ ಜಗಳ ಹತ್ತಬೇಕು.. ಜನರಿಂದ vulgar ಪದಗಳ  ಬಳಕೆ ಆಗಬೇಕು.. ವ್ಯೂವರ್ ಕಣ್ ಮುಚ್ಚದೆ TV ನೋಡಬೇಕು!!"

"ಸರ್, ಹೌ ಅಬೌಟ್ ದಿ topic?" ಭಗತ್ ಕೇಳಿದ.

" ಕಮ್ ಆನ್ ಭಗತ್!! ಡು ವಿ ರಿಯಲಿ ನೀಡ್ ಎನಿ ಅದೆರ್ topic ದನ್ ದೀಸ್ politicians?? ಜನರೇ ಅದಕ್ಕೆ topic ಹುಡ್ಕತಾರೆ, ಡೊಂಟ್ ವರಿ " ಎಂದು ನಗಲಾರಂಬಿಸಿದ. "ಓಕೆ ಸರ್"  ಅನ್ನುತ ಆತನ ನಗುವಿಗೆ ಮೌನದ ಪ್ರತಿಕ್ರಿಯೆ ನೀಡಿ ಭಗತ್ ಮೇಲೆದ್ದು ಹೊರಬಂದ.

"ಏನ್ ಬಾಸ್... ಆಲ್ ಪ್ರಿಪೇರ್ಡ್ ಫಾರ್ ದಿ ಬ್ಯಾಟಲ್ ಹ?? " ಎನ್ನುತ ತನ್ನ ಸಹೋದ್ಯೋಗಿ ಕೇಳಿದ ಪ್ರೆಶ್ನೆಗೆ ಏನೂ ಉತ್ತರಿಸದೆ ಕಾಫಿ ಮಷೀನ್ ಬಳಿಗೆ ಓದ. ಏನೂ ಉತ್ತರಿಸದೆ ಓದ ಭಗತ್ನನ್ನು ನೋಡಿ ಆತನೂ ಅವನ ಹಿಂದೆ ಬಂದ.

"ಏನಪ್ಪಾ ಹೀರೋ.. ರಾಜಕಾರಣಿ ಇಂಟರ್ವ್ಯೂ ಅಂತ ನೋಡೂ ನೋಡದೆ ಹೋಗ್ತಾ ಇದ್ದೀಯ! ಏನ್ ಸಮಾಚಾರ " ಆತ ಕೇಳಿದ.

"ಇಲ್ಲಪ್ಪ..ಹಾಗೇನಿಲ್ಲ!"

"ಇಬ್ಬರೂ ಯಂಗ್ ರಾಜಕಾರಣಿಗಳು... ಬಿಸಿ ರಕ್ತ…ಜನರು ಕೇಳುವ ಪ್ರೆಶ್ನಗೆ ಖಂಡಿತ ಕೆರಳ್ತಾರೆ..ಫೈಟ್ ಮಾಡಿದ್ರು ತಪ್ಪೇನಿಲ್ಲ.. ನಿಂದ್  ಚಾನ್ಸ್  ಬಿಡಪ್ಪ.. ಒಳ್ಳೆ TRP ಬರೋ ಪ್ರೋಗ್ರಮ್ಮೆ ಸಿಕ್ಕಿದೆ..ಅಲ್ಲದೆ ಮ್ಯಾನೇಜರ್ ಗೆ ಇಂತ ಪ್ರೋಗ್ರಾಮ್ ಗೆಲ್ಲ ನೀನೆ ಬೇಕಂತೆ...ಗುಡ್..''

ಭಗತ್ ನ ಕೈಲಿದ್ದ ಪ್ಲಾಸ್ಟಿಕ್ ಟೀ ಗ್ಲಾಸ್,  ಕೈ ಮುಷ್ಟಿಯ ಗಟ್ಟಿ ಹಿಡಿತಕ್ಕೆ ನರಳಿತು. ಅದರಲ್ಲಿದ್ದ ಕಾಫಿ ಹೊರಬಂದು ಕೈಯ ಮೇಲೆ ಅರಿದು ನೆಲದ ಮೇಲೆ ಬೀಳತೊಡಗಿತು! ಕೈಮುಷ್ಟಿ ಇನ್ನು ಬಿಗಿಯಾಗ ತೊಡಗಿ, ಕೈ ನಡುಗ ತೊಡಗಿತು."ಹೇಯ್ ಭಗತ್ !! ಮ್ಯಾನ್!....." ಸಹೋದ್ಯೋಗಿ ಕೂಗಾಲಾರಂಬಿಸಿದ. ಪಕ್ಕದ ಫ್ಲೋರ್ನ  ಕೆಲ ಸಹೋದ್ಯೋಗಿಗಳು ಕಾಫಿ ಮಷೀನ್ ಕಡೆ ತಿರುಗಿದರು.

"Sorry man.. I was just" ಅನ್ನುತ ಭಗತ್ ಕೈಯನ್ನು ತನ್ನ ಕರ್ಚಿಪಿನಿಂದ ಒರೆಸತೊಡಗಿದ."ಯಾಕೋ ?  ಪ್ರೋಗ್ರಾಮ್ ಇಷ್ಟ ಇಲ್ವಾ?? ಅಲ್ಲ್ಲಾ ಮಾರೆಯ, ಆಫೀಸ್ ಅಲ್ಲಿ ಇರೋ ಪ್ರತಿಯೋಬ್ರು ಈ ಪ್ರೋಗ್ರಾಮ್ ಬೇಕು ಅಂತ ಮ್ಯಾನೇಜರ್ಗೆ ಫೋರ್ಸ್ ಮಾಡ್ತಾ ಇದ್ದಾರೆ..ಅವ್ರು ನೋಡಿದ್ರೆ ನಿನ್ನ ಬಿಟ್ಟು ಬೇರೆ ಯಾರಿಗೂ ಕೊಡಲ್ಲ ಅಂತ ಬೇರೆ .. ಏನೋ ಪ್ರಾಬ್ಲಮ್ ನಿಂದು?"

"No Man .. Not Like that . . ಎಲ್ರಿಗೂ  ಜಗಳ ಬೇಕು.. TRP ಬೇಕು.. Finally ಸಕ್ಕತ್ತ್ ದುಡ್ಡ್ ಬೇಕು... ಅಲ್ಲಾ, ಈ ರಾಜಕಾರಣಿಗಳೇ ನಾಳೆ ನಮ್ಮ, ನಮ್ಮ ಮಕ್ಕಳ ಭವಿಷ್ಯ. ದೇಶದ future ಇವರ ಕೈಯಲ್ಲಿದೆ. ಇಂತಹವರನ್ನು ಜಗಳಕ್ಕೆ ಬಿಟ್ಟು ಮಜಾ ನೋಡುವ ನಾವೆಷ್ಟು ಒಳ್ಳೆಯ ರಿಪೋರ್ಟರ್ಸ್?! ಎಲ್ಲಿಯವರೆಗೂ ಈ ರೀತಿ ಪ್ರೊಗ್ರಮ್ಸ್ಗಳು ನಡೆಯುತ್ತಾವೆಯೋ , ಅಲ್ಲಿಯವರೆಗೂ ಜನರಿಗೆ ವ್ಯವಸ್ಥೆಯ ಮೇಲೆ,ನಮ್ಮ ಮೇಲೆ ನಂಬಿಕೆ ಬರೋಲ್ಲ.. ನೋ ವೇಸ್..." ಅನ್ನುತ ಭಗತ್ ಸ್ಟುಡಿಯೋದ ಒಳಗೆ ಹೋದ.

ಅಷ್ಟರಲ್ಲಾಗಲೇ ಜನರು ಬಂದು ತಮ್ಮ ತಮ್ಮ ಜಾಗದಲ್ಲಿ ಬಂದು ಕುಳಿತ್ತಿದ್ದರು. ಅವರ ಕೆಲ ದೂರದಲ್ಲಿ ಪ್ರೊಗ್ರಾಮ್ ನಿರೂಪಣೆ ಮಾಡುವ ಸ್ಟೇಜ್. ಅದರ ಎರಡೂ ಕಡೆ ಒಬ್ಬೊಬ್ಬ ರಾಜಕಾರಣಿ ನಿಲ್ಲಲು ಒಂದು ಸಣ್ಣ ಸ್ಟಾಂಡ್. ಒಂದು ಸಣ್ಣ ಕೋರ್ಟ್ ನ ವಾತಾವರಣ. ಜನತೆಗೆ ಹೇಗೆ ಮಾತಾಡಬೇಕು, ಹೇಗೆ ನಿಲ್ಲಬೇಕು, ಅದು, ಇದು, ಅಂತ ಕೆಲ ಹುಡುಗಿಯರು ಹೇಳಿಕೊಡುತ್ತಿದ್ದರು. ಇದ್ದಕ್ಕಿದ್ದಂತೆ ರಾಜಕಾರಣಿಗಳು ಹಾಗೂ ಅವರ ತಂಡ ಧಿಡಿರನೆ ಎಂಟ್ರಿ ಕೊಟ್ಟಿತು. ವಿಲನ್ ತನ್ನ ಸಹಚರರೊಟ್ಟಿಗೆ ಕೊಡುವ ಎಂಟ್ರಿಯೂ ಇವರ ಮುಂದೆ ಶೂನ್ಯ.ಇಬ್ಬರೂ ರಾಜಕಾರಣಿಗಳು ಬೇರೆ ಬೇರೆ ಪಕ್ಷದವರಾದ್ದರಿಂದ  ಎರಡೂ ಗುಂಪುಗಳ ನಡುವೆ ಅಂತ ಜಾಸ್ತಿ ಇತ್ತು. ಪ್ರೋಗ್ರಾಮ್ ಪ್ರೋಡುಸೆರ್ ಇಬ್ಬರಿಗೂ ತಮ್ಮ ತಮ್ಮ ಜಾಗವನ್ನು ತೋರಿಸಿ ಮೈಕ್, ಶೋ ಟೈಮ್, ಎಲ್ಲವನ್ನು ಹೇಳತೊಡಗಿದ. ರಾಜನ ಮುಂದೆ ಗುಲಾಮನಂತೆ, ಬಗ್ಗಿ ಪ್ರೋಡುಸೆರ್ ಅವರೊಟ್ಟಿಗೆ ಸಂಭಾಷಿಸುತ್ತಿದ್ದ. ಪ್ರೋಗ್ರಾಮ್ ಶುರುವಾಗಲು ಇನ್ನು ಕೆಲವೇ ನಿಮಿಷಗಳು ಬಾಕಿ ಇದ್ದವು. ಇಲ್ಲಿಯವರೆಗೂ ತಮನ್ನು ಮಾತನಾಡಿಸದ ಭಗತ್ನನ್ನು ಇಬ್ಬರೂ ಒಮ್ಮೆ ತಮ್ಮ ವಕ್ರ ದೃಷ್ಟಿಯಲ್ಲಿ ನೋಡಿದರು. ಬಿಳಿ ಕುರ್ತ ಪೈಜಾಮ ದರಿಸಿದ್ದ ಒಬ್ಬ MLA ಭಗತ್ ನ  ಬಲಕ್ಕೆ ಮತ್ತು ಅದೇ ಕುರ್ತ ಪೈಜಾಮದ ಮೇಲೆ ಕೇಸರಿ ಕೋಟು ಧರಿಸಿ, ಬಿಳಿಯ ಗಡ್ಡದ ಇನ್ನೊಬ್ಬ ಎಡಕ್ಕೆ ಇದ್ದ ಸ್ಟಾಂಡ್ ಅಲ್ಲಿ ಬಂದು ನಿಂತರು.   

ಪ್ರೊಗ್ರಾಮ್ ಸರಿಯಾಗಿ  11.30ಕ್ಕೆ ಶುರುವಾಹಿತು. ಭಗತ್ನ ಅಮ್ಮ ಅಕ್ಕ ಪಕ್ಕದ ಮನೆಯವರನ್ನೆಲ್ಲ ಕರೆದು ಕೂತಿದ್ದಳು. ಅಂದುಕೊಂಡಹಾಗೆ ಜನರ ದ್ವನಿ ಜೋರಾಗ ತೊಡಗಿತು. ಈ ದ್ವನಿ ಕೇವಲ ಕ್ಯಾಮರದ ಮುಂದೆ ಎಂದು ಗೊತ್ತಿದ್ದ ಭಗತ್ ಗೆ ತೀರಾ ಹೊಸತೇನು ಕಾಣಲಿಲ್ಲ. ಇಂತಹ ಬಹಳ ಪ್ರೋಗ್ರಾಮ್ಗಳನ್ನು ನಡೆಸಿಕೊಟ್ಟಿದ್ದ ಭಗತ್ ಗೆ ರಾಜಕಾರಣಿಗಳ ಹಾಗೂ ಜನತೆಯ 'ಸ್ಟೇಜ್ ಡ್ರಾಮಾ' ಚೆನ್ನಾಗೇ ಗೊತ್ತಿತ್ತು. ಜನರ ಎಲ್ಲಾ ಪ್ರೆಶ್ನೆಗಳಿಗೂ "ಇದ್ರ ಬಗ್ಗೆ ಖಂಡಿತಾ ಗಮನವರಿಸುತ್ತೇನೆ.." ... "ಈ ದುರ್ವ್ಯವಸ್ಥೆಗೆ ಮುಂದಿರುವ MLA ಪಕ್ಷವೇ ಕಾರಣ" ಅನ್ನುತ ಸ್ಟ್ಯಾಂಡರ್ಡ್ ಉತ್ತರ ಕೊಡುತ್ತಾ ಒಬ್ಬರು ಮತ್ತೊಬ್ಬರನ್ನು ಆರೋಪಿಸತೊಡಗಿದರು.ಕ್ಯಾಮರ ಹಿಂದೆ ನಿಂತಿದ್ದ producer, ಜಗಳ ಕಿತ್ತಾಟ ಜಾಸ್ತಿ ಆದಂತೆಲ್ಲ Thumbs Up ಮಾಡಿ TRP ಜಾಸ್ತಿ ಆಗುತ್ತಿದೆ ಅನ್ನುವುದನ್ನು ಸೂಚಿಸುತ್ತಿದ್ದ.   

ಗುಂಪಿನ ಮಧ್ಯದಿಂದ ಎದ್ದ ಒಬ್ಬ 16 ವರ್ಷದ ಹುಡುಗ ಮೈಕ್ಅನ್ನು ಕೇಳಿ ಪಡೆದ. "ಸಾರ್.. ನಾನು ಪಕ್ಕದ ಊರಿನವನು..ಕೆಲ ತಿಂಗಳ ಹಿಂದೆ ಚುನಾವಣೆಗೆ ಮತ ಕೇಳಲು ನಮ್ಮ ಮನೆಗೆ ಇಬ್ಬರೂ ಬಂದಿದ್ದೀರಿ..ನೆನಪಿದೆಯಾ ಸರ್??" ಆತನ ಪ್ರೆಶ್ನೆಗೆ ನಗುತ್ತಲೇ  " ಹಾಂ ಕಂದ,.. ಹೇಗಿದ್ದೀಯ?.. ಅಪ್ಪ ಅಮ್ಮ ಎಲ್ಲಾ ಚೆನ್ನಾಗಿದ್ದಾರ..?" ಎಂದು ಬಿಳಿ ಕುರ್ತ ಪೈಜಾಮ ದರಿಸಿದ್ದ ರಾಜಕಾರಣಿ ಕೇಳಿದ. ತುಸು ಹೊತ್ತು ಸುಮ್ಮನಾದ ಹುಡುಗ, ಬಿಕ್ಕಳಿಸತೊಡಗಿದ. ಆ ಸಣ್ಣ ವಯಸ್ಸಿಗೆ ಇದ್ದ ಪ್ರಭುದ್ದತೆ ಆತ ಅಳುವನ್ನು ತಡೆವುದರಲ್ಲಿ ಕಾಣುತಿತ್ತು."ಯಾಕಪ್ಪ .. ಏನಾಯಿತು..ಎದರಬೇಡ. ದೈರ್ಯವಾಗಿ ಪ್ರೆಶ್ನೆ ಕೇಳು" ಭಗತ್ ಆತನ ಬಳಿ ಹೋದ. ಸ್ವಲ್ಪ ಕ್ಷಣಗಳ ನಂತರ ಆ ಹುಡುಗ ಮುಂದುವರೆಸಿ " ಸಾರ್, ನೀವು ಚುನಾವಣೆಗೆ ಬಂದ ಕೆಲ ಹಿಂದಿನ ದಿನವಷ್ಟೇ ನನ್ನ ತಂದೆ ತೀರಿಕೊಂಡಿದ್ದರು..ನೀವುಗಳು ಬಂದು ನನ್ನ ಹೆಗಲ ಮೇಲೆ ಕೈ ಹಿಟ್ಟು ಸಮಾದಾನ ಮಾಡಿ, ಕಣ್ಣೀರೂ ಹಾಕಿ, ನನ್ನ ಅಮ್ಮನಿಗೆ ಒಂದು ಕೆಲಸ ಕೊಡಿಸಿ , ನನ್ನ ಓದಿಗೆ ಸ್ಕಾಲರ್ಷಿಪ್ ಕೊಡಿಸ್ಥಿನಿ ಅಂತ ಹೇಳಿ, ಇವಾಗ ಅಪ್ಪ ಅಮ್ಮ ಹೇಗಿದ್ದಾರೆ ಅಂತ ಕೇಳ್ತಾ ಇದ್ದೀರಾ ಸಾರ್.." ಆತನ ಕಣ್ಣಿಂದ ಇನ್ನೊಂದು ಹನಿ ಹೊರಬಿದ್ದಿತು. ಪಟಾರನೆ ಕೆನ್ನೆಗೆ ಹೊಡೆದ ಹಾಗೆ ರಾಜಕಾರಣಿಯ ಮುಖ ಬಾಡಿತು. 

"ಇದ್ರ ಬಗ್ಗೆ ಖಂಡಿತಾ ಗಮನ ಹರಿಸುತ್ತೇನೆ.." ಅನ್ನುತ ಆತ ಸುಮ್ಮನಾದ. ಆತನ ಕುತ್ತಿಗೆಯನ್ನು ಹಿಡಿದು ಒರ ಎಸೆಯುವ ಮನಸ್ಸಾದರೂ ಭಗತ್ ಯಾಕೋ ಸುಮ್ಮನಾದ.

ಅಷ್ಟರೊಳಗೆ ಒಂದು ಹೆಂಗಸು ಮೇಲ್ದೆದ್ದು,  ಬಿಳಿ ಕುರ್ತ ಪೈಜಾಮದ ಮೇಲೆ ಕೇಸರಿ ಕೋಟು ಧರಿಸಿದ್ದ ರಾಜಕಾರಣಿ ಅನ್ನು ಉದ್ದೇಶಿಸಿ " ಸಾರ್.. ನೀವು ಅಂದು ನಮ್ಮ ಊರಿಗೆ ಬಂದು ನಿಮ್ಮ ಪಂಗಡದ ಜನರನ್ನು ಉದ್ದೇಶಿಸಿ ಮಾತಾಡಿ ಈ ದೇಶದ ಒಳಿತು ನಿಮ್ಮ ಪಂಗಡದ ಜನರಿಂದ ಮಾತ್ರ ಸಾದ್ಯ! ಬೇರೆಯವರೆಲ್ಲ ಇಲ್ಲಿ ಇರಲು ಅರ್ಹರಲ್ಲ ಅಂದಿರಿ. ಅದರ ಪರಿಣಾಮ ಇವತ್ತು ನಾವು ಇದ್ದೂ ಸತ್ತಂತೆ ಬದುಕುತ್ತಿದ್ದೀವಿ ಸಾರ್. ನೂರಾರು ವರ್ಷ ಸಹೋದರಂತೆ ಬದುಕ್ಕಿದ್ದ ಜನ ನಮ್ಮನ್ನು ವೈರಿಗಳಂತೆ ಕಾಣಲಾರಂಬಿಸಿದ್ದರೆ. ಮೊನ್ನೆ ನಡೆದ ಗಲಾಟೆಯಲ್ಲಿ ನನ್ನ ಗಂಡನ ಕೈ ಕಾಲು ಎರಡನ್ನೂ ಮುರಿದಿದ್ದಾರೆ. ಮನೆಯ ಹೆಣ್ಣು ಮಕ್ಕಳು ಹೊರ ಬರದೆ ತಿಂಗಳುಗಳೇ ಕಳೆದಿವೆ!! ಆಡಿ ಬೆಳೆದ ಊರೇ ಅವರಿಗೆ ಜೈಲಾಗಿ ಹೋಗಿದೆ… ನಾನೀಗ ಏನು ಮಾಡಲಿ” ಅನ್ನುತ ತನ್ನ ದುಪಟ್ಟದಿಂದ ಕಣ್ಣನ್ನು ಅದುಮಿದಳು. ಏನು ಹೇಳಬೇಕು ಅಂತ ತೋಚದ ಆತ "ತಂಗಿ ಹೆದರಬೇಡ..ಇದ್ರ ಬಗ್ಗೆ ಖಂಡಿತಾ ಗಮನ ಹರಿಸುತ್ತೇನೆ.." ಅಂತ ಇನ್ನೊಬ್ಬ ರಾಜಕಾರಣಿ ಹೇಳಿದ ಮಾತನ್ನೇ ಹೇಳಿದ.....

"ನಿಜವಾಗ್ಲೂ ಈಕೆ ನಿಮ್ಮ ತಂಗಿಯಾಗಿದ್ರೆ ನೀವು ಈ ಮಾತನ್ನು ಹೇಳ್ತಾ ಇದ್ರಾ ಸರ್??" ಭಗತನ ಆ ದ್ವನಿಗೆ ಇಬ್ಬರೂ ರಾಜಕಾರಣಿಗಳು ಕಣ್ಣಿನ ಉಬ್ಬನ್ನು ಮೇಲೆ ಮಾಡಿ ನೋಡಿದರು. ಆವರು ಉತ್ತರಿಸುವುದರೊಳಗೆ, "ಇಂತಹ ನೀವುಗಳು ನಮ್ಮ ದೇಶದ ನಾಯಕರು!! ಹುಟ್ಟುವಾಗಲೇ ಚಿನ್ನದ ಚಮಚವನ್ನು ಬಾಯಲ್ಲಿ ಹಿಟ್ಟು ಹುಟ್ಟಿರುವ  ನಿಮಗೆ ಬಡವರ ಆಕ್ರಂದನ ಹೇಗೆ ತಿಳಿಯುತ್ತೆ. ಅಪ್ಪನಿರದ ಮನೆ ಏನಂತ ಗುಂಡು,ತುಂಡು ಅಂತ 5 ಸ್ಟಾರ್ ಹೋಟೆಲ್ನಲ್ಲಿ ಮಲಗುವ ನಿಮಗೇನು ಗೊತ್ತು..ಹೆಣ್ಣು ಮಕ್ಕಳಿರುವ ಬಡ ಕುಟುಂಬದ ಭಾದೆ ಜನರ ದುಡ್ಡನ್ನು ತಿಂದು ತೇಗುವ ನಿಮಗೆನಾದ್ರು ಗೊತ್ತಾ?! ಅದೆಷ್ಟು ದುಡ್ಡು ಬೇಕು ಅಂತ ಚುನಾವಣೆ ಮೊದ್ಲೇ ಹೇಳ್ಬಿಡಿ ಸರ್.. ನಿಮಗೆ ಮೊದ್ಲೇ ಅದನ್ನು ಕೊಟ್ಟು ಒಬ್ಬ ಬಡ ಕುಟುಂಬದಿಂದ ಬಂದ ನಾಯಕನನ್ನು ನಾವೇ ಆರಿಸುತ್ತಿವಿ" ಭಗತ್ ನ ಕಣ್ಣು ರಾಜಕಾರಣಿಗಳನ್ನೇ ದುರುಗುಟ್ಟು ನೋಡತೊಡಗಿದವು. ಮೊದಲ ಬಾರಿಗೆ TRP ಇಷ್ಟು ಜಾಸ್ತಿ ಆಗಿತ್ತು. Producer ಮುಖದಲ್ಲಿ ಖುಷಿಗಿಂತ ಭಯದ ಛಾಯೆ ಎದ್ದು ಕಾಣುತಿತ್ತು. ರಾಜಕಾರಣಿಗಳು ಒಬ್ಬರನ್ನೊಬ್ಬರು ನೋಡತೊಡಗಿದರು. ಅವರ ಗುಂಪು ಭಗತ್ ನನ್ನು ಅಲ್ಲೇ ಹೊಡೆದುರುಳಿಸುವ ಹಾಗೆ ಕಾಣುತ್ತಿತ್ತು.

 ಭಗತ್ ಮುಂದುವರೆಸಿ "ನಿಮಂತಹ ರಾಜಕಾರಣಿಗಳೇ ದೇಶವನ್ನು ಒಡೆದಿರುವುದು.ನಿಮ್ಮ ಜಾತಿ ನಿಮ್ಮ ಪಂಗಡ.. ಥೂ!..ಬದುಕಲು ಬೇಕಾಗಿರುವುದು ಗಾಳಿ,ಬೆಳಕು ಮತ್ತು ನೀರು.. ನಿಮ್ಮ ಆವಿಷ್ಕಾರ, ನಿಮ್ಮ technology ನಮ್ಮನ್ನು ಇನ್ನೂ ಮತಿಹೀನರನ್ನಾಗಿಸಿದೆ..

“ಮಿಸೈಲ್ ಅಂತೆ, ನಿಮ್ಮ ಸರ್ಕಾರದ ಆವಿಷ್ಕಾರ!!.. ಮುಂದೊಂದು ದಿನ ಅದನ್ನು ಯಾರ್ ಮಾಡಿದ್ರೋ,ಯಾರ್ ಮಾಡ್ಸಿದ್ರೋ, ಯಾರಿಗಾಗಿ ಮಾಡ್ಸಿದ್ರೋ ಎಲ್ಲಾ, ಎಲ್ಲರೂ ಅದೇ ಮಿಸೈಲ್ ನಿಂದ ಸಾಯುತ್ತಾರೆ!! ಯಾರೂ ಮಾಡಿದ್ ತಪ್ಪಿಗೆ ಮತ್ತ್ಯಾರೋ ಯಾಕ್ರಿ ಸಾಯಬೇಕು??! ಜೀವನ ನಿಮ್ಮನ್ ಕೇಳಿ ಪಡಕೊಂಡಿದ್ದ?! ಬದುಕೋಕೆ ನಮ್ಗೆ ಒಂದ್ ಒಳ್ಳೇ ಸಮಾಜ ನಿರ್ಮಿಸಿ ಕೊಡಿ. ಸಾಕು!”  Procucer ತನ್ನ ಎರಡೂ ಕೈಗಳನ್ನು ತಲೆ ಮೇಲೆ ಇರಿಸಿದ್ದ. ಪ್ರೋಗ್ರಮಂ ನೋಡುವವರ ಸಂಖ್ಯೆ ದಾಖಲೆಯ ಏರಿಕೆ ಕಂಡಿತ್ತು!

"ನಾವು ಸಮಾಜ ಸೇವಕರು.. ಇದನ್ನು ಮಾಡೋದು ನಮ್ಮ ಕರ್ತವ್ಯ!" ರಾಜಕಾರಣಿಗಳ ಗುಂಪಿನಿಂದ ಒಬ್ಬ ಮಾತಾಡಿದ. ಕಾರ್ಯಕ್ರಮ ಲೈವ್ ಆಗಿ ಪ್ರಸಾರ ಆಗುತ್ತಿದ್ದರಿಂದ ರಾಜಕಾರಣಿಗಳ ದ್ವನಿ ಕ್ಷೀಣಿಸಿತ್ತು!

"ಹಲೋ, ಸರ್!, ಸಮಾಜಸೇವೆ ಬಹಳ ರೀತಿ ಮಾಡ್ಬಹುದು!..ಅದು ಕೇವಲ ರಾಜಕಾರಣಿಗಳಾಗಿ ಮಾತ್ರವಲ್ಲ..ಅಸ್ಟೊಂದು ಕೋಟಿ ದುಡ್ಡನ್ನು ಇಟ್ಟಿದ್ದಿರಲ್ಲ ಅದರ ಕೇವಲ 10% ದುಡ್ಡನ್ನು ಬಡವರಿಗೆ,ಅನಾಥರಿಗೆ,ವಿಧವೆಯರಿಗೆ ಹಂಚಿ.. ಸಾಕು.. ನಿಮ್ಮ ಸಮಾಜಸೇವೆಯನ್ನು  ದೇಶ ನೆನಪ್ ಇಟ್ತ್ಕೊಳ್ಳುತ್ತೆ.. ಜನ್ರ ದುಡ್ಡನ್ನೇ  ಜನ್ರಿಗೆ ಹಂಚೋದಕ್ಕೆ ನೀವಲ್ಲ, ನಮ್ಮ ಕುರಿ ಕಾಯೋ ಹುಡ್ಗನೂ ಮಾಡ್ತಾನೆ!! ಅಟ್ ಲೀಸ್ಟ್ ಅವ ನಿಯತ್ತ್ಹಾಗಾದ್ರು ಮಾಡ್ತಾನೆ.. ಚುನಾವಣೆ ಬಂದ್ರೆ ಸಾಕು ನಮ್ಮ ಪಕ್ಷ ಗೆಲ್ಲ್ಸಿ .. ನಮ್ಮ ಪಕ್ಷ ಗೆಲ್ಸಿ ಅಂತ ಮಲ್ಟಿನ್ಯಾಷನಲ್ ಕಂಪನಿ ಪ್ರಾಜೆಕ್ಟ್ ಕೇಳೋ ಹಾಗೆ ಕೇಳ್ತಿರ.. ಪಕ್ಷ ಗೆದ್ದ್ ಮೇಲೆ ಪ್ರಾಜೆಕ್ಟು ಮಾಡ್ದೆ, ಪ್ರಾಫಿಟ್ ತಗೊಂಡು ಹಾರ್ ಹೋಗ್ತಿರ.. ನಿಮ್ಮಂತವರಿಗೆಲ್ಲಾ ಈ ರಾಜಕೀಯ ಒಳ್ಳೆ business ಅಲ್ವ ಸರ್ ?? ಒಬ್ಬ 1st ಸ್ಟ್ಯಾಂಡರ್ಡ್ ಹುಡಗನ ಕೇಳಿದ್ರೆ, ನೀನ್ ದೊಡ್ಡವನಾಗಿ ಏನ್ ಆಗ್ತಿಯ ಅಂತ 'ನಾನು politician ಆಗ್ತೀನಿ' ಅಂತಾನೆ. ಯಾಕೆ ಅಂದ್ರೆ, 'ಒಳ್ಳೆ ದುಡ್ಡ್ ಮಾಡಬಹುದು ಅಂತೆ!' ಸಾಕಲ್ವ ಸರ್, ನಮ್ಮ ಫ್ಯೂಚರ್ ಜನರೇಶನ್ನ goals! ದೇಶದ ಜನತೆಯ ಕಣ್ಣು ತೆರೆಸಿದ ಪತ್ರಕರ್ತರೆ ಇಂದು ಅಧಿಕಾರದ ಆಸೆಗೆ ಅದೇ ಪಕ್ಷವನ್ನು ಸೇರಿ, ಜನರ ಕಣ್ಣನ್ನು ಪುನಃ ಮುಚ್ಚಿಸುತ್ತಿದ್ದಾರೆ!ದುಃಖದ ಸಂಗತಿ ಅಂದ್ರೆ ಮಕ್ಕಳಿಗೆ ದುಡ್ಡೇ ಜೀವನದ ಗುರಿ ಅನ್ನೋದನ್ನ ಕಲಿಸೋದು. ದೊಡ್ಡವರಾಗಿ ಅವರು ಮಾಡೋದರಲ್ಲಿ ಏನೂ ತಪ್ಲಿಲ್ಲ ಬಿಡಿ. ದುಡ್ಡಿಗಾಗಿ ಏನೂ ಬೇಕಾದರೂ ಮಾಡಬಲ್ಲರು. ದೇಶದ ಜೈಲಿನಲ್ಲಿರುವ ಕಳ್ಳರೆಲ್ಲಾ ಕಣ್ಣ ಮುಂದೆ ಕದ್ದು ಜೈಲಿನಲ್ಲಿ ಇದ್ದಾರೆ ಅಷ್ಟೆ. ಬೆನ್ನ ಹಿಂದೆ ಕದಿಯುವ ರಾಜಕಾರಣಿಗಳನ್ನು ಹಿಡಿದ್ದಿದ್ದಾರೆ ನಮ್ಮ ದೇಶದ ಜೈಲುಗಳೇ ಸಾಲುತ್ತಿರಲಿಲ್ಲ!! ಇಂಥಹ ನಿಮಗೆ ಆ ಹುಡುಗನ ನೋವಾಗಲಿ, ಆಕೆಯ ಅಳುವಾಗಲಿ ಹೇಗ್ ಅರ್ಥ ಆಗುತ್ತೆ..ಹ?!”

ನೆರೆದಿದ್ದ ಜನತೆ ಜೋರಾಗಿ ಚಪ್ಪಾಳೆ ತಟ್ಟ ತೊಡಗಿದರು. ನಗುತ್ತಾ producer ಕೂಡ  ನಾಲ್ಕು ಚಪ್ಪಾಳೆಗಳನ್ನು ಬಾರಿಸಿಯೇ ಬಿಟ್ಟ. ಇಬ್ಬರೂ ರಾಜಕಾರಣಿಗಳು ಕೆಂಪಾದ ಮುಖ ಮಾಡಿ ಹೊರ ನಡೆದರು. ಅದರಲ್ಲಿ ಒಬ್ಬ ಪ್ರೋಗ್ರಾಮ್ producer ಅನ್ನು ಕರೆದನು. ಅದೇ ರಾಜನ ಗುಲಾಮನಂತೆ producer ಆತನ ಬಳಿ ಓಡಿದನು. ಭಗತ್ ನ ಅಮ್ಮ ಗಂಡನಿಗೆ ಫೋನ್ ಮಾಡಿ ಪ್ರೋಗ್ರಾಮ್ ಬಗ್ಗೆ ಹೇಳುತ್ತಾ ಹೋದಳು. ಆಕೆಯ ಕಣ್ಣಲ್ಲಿ ಖುಷಿಯ ಹನಿಗಳು ಹೆಮ್ಮೆಯಿಂದ ತುಂಬಿದ್ದವು.......

ಮರುದಿನ ಆಫೀಸ್ ಗೆ ಬಂದ ಭಗತ್ ತನ್ನ ಡೆಸ್ಕ್ನ ಮೇಲೆ ಒಂದು ಬಿಳಿ envelope ಅನ್ನು ಗಮನಿಸಿದ. ಲ್ಯಾಪ್ಟಾಪ್ ಅನ್ನು ಪಕ್ಕಕ್ಕೆ ಇಟ್ಟು ಅದನ್ನು ಹರಿದು ಓದಿದ. Producer ಬರೆದಿದ್ದ ಲೆಟರ್ ಕೇವಲ ಒಂದೇ ಸಾಲಿನಲ್ಲಿ ಮುಗಿದಿತ್ತು,,,,

"Dear Bhagath,

I don’t have anything to say but, you have been terminated from the company.”