ರಾಧೆಕೃಷ್ಣರ ಪ್ರಣಯ

ರಾಧೆಕೃಷ್ಣರ ಪ್ರಣಯ

ಕವನ

ಬಾರೊ ಶ್ಯಾಮ ತೋರೊ ಪ್ರೇಮ

ತೂಗು ಮಂಚ ಕಾದಿದೆ

ಸೇರೊ ಹೃದಯ ನೀನೆ ಒಡೆಯ

ಬಾಹು ಬಂಧ ಬಯಸಿದೆ

 

ಮುರಳಿ ಗಾನ ನುಡಿಸಿ ಗೊಲ್ಲ

ಗಾನಸಿಂಚನ ನೀಡೆಯ

ತರುಣಿ ನಾನು ತಾರೊ ಕರುಣೆ

ಒಲವ ಅಮೃತ ಸುರಿಸೆಯ

 

ಯಮುನೆ ತೀರ ಮಧುರ ಚೋರ

ನಮ್ಮ ಪ್ರಣಯ ರಾಗಕೆ

ಲಲನೆ ರಾಧೆ ಕೂಗಿ ಕರೆಯೆ

ಮುದದಿ ಬಂದ ಸನಿಹಕೆ

 

ರಾಧೆ ಕೃಷ್ಣ ಕೂಡಿಕೊಂಡು

ತೂಗುಯ್ಯಾಲೆ ಹಾಡಲು

ಬಾನಿನಲ್ಲಿ ಸುರರುಯೆಲ್ಲ

ಪುಷ್ಪ ಮಳೆಯ ಸುರಿದರು

 

ಲೋಕಪಾಲ ಗೋಪಿಲೋಲ

ರಾಧೆಗೊಲಿದು ನಿಂದನು

ನಾಕದಲ್ಲಿ ಹೃದಯದೇವಿ

ಸುಖದಿ ತೇಲಿ ಹೋದಳು ||

-*ಶ್ರೀ ಈರಪ್ಪ ಬಿಜಲಿ* 

 

ಚಿತ್ರ್