ರಾಮಾನುಗ್ರಹವಾಗಲಿ!
ಹೈಕೋರ್ಟ್ ಪೀಠದ ಅಯೋಧ್ಯೆ ತೀರ್ಪಿನ ಮೂಲಕ, ನ್ಯಾಯಾಂಗವೇ ತನ್ನ ನಂಬಿಕೆ ಉಳಿಸಿಕೊಂಡಂತಾಗಿದೆ. ಒಣ ತರ್ಕ, ಸೃಷ್ಟ್ಯ ಸಾಕ್ಷ್ಯಾಧಾರದ ಮೇಲೆ ಮಾತ್ರಾ ಕೆಲಸ ಮಾಡುತ್ತದೆಂಬ ಪೂರ್ವಗ್ರಹವನ್ನು ನೀಗಿ, ತನ್ನ ಹೃದಯವಂತಿಕೆನ್ನೂ ಅದು ಕಾಣಿಸಿಕೊಟ್ಟಿದೆ! ಕಾತರ, ಆತಂಕಗಳಿಂದ ಕಂಗಾಲಾಗಿದ್ದ ಜನ ಬಹುಶಃ ಇಂಥಾ ಚೇತೋಹಾರೀ ಫಲಿತಾಂಶವನ್ನು ನಿರೀಕ್ಷಿಸಿಯೇ ಇರಲಿಲ್ಲವೇನೋ?!
ಸುನ್ನಿ ವಕ್ಫ್ ಮಂಡಲಿ ಮತ್ತು ಹಿಂದೂ ಮಹಾಸಭಾ ಸುಪ್ರೀಂ ಕೋರ್ಟಿಗೆ ಹೋದರೆ ಹೋಗಲಿ. ನ್ಯಾಯಾಂಗದಿಂದಲೂ ನೆಮ್ಮದಿ ನಿರೀಕ್ಷಿಸಬುದೆಂಬ ಅನುಭವ ಪಡೆದಿರುವ ಮಹಾಜನತೆ ವಿಚಲಿತರಾಗಬೇಕಾದ್ದಿಲ್ಲ. ಈ ನಾವೀನ್ಯಪೂರ್ಣ ತೀರ್ಪಿನಿಂದ, ಬಹುಸಂಖ್ಯಾತ ಜನಾಂಗಕ್ಕೆ ಸಾಮಾಜಿಕ ನ್ಯಾಯ, ಆ ಮೂಲಕ ರಾಷ್ಟ್ರ ಸಮುದಾಯಕ್ಕೆ ರಾಜಕೀಯ, ಸಾಮಾಜಿಕ, ಆರ್ಥಿಕ ಸಮತೋಲನ ಒದಗಿಸುವಲ್ಲಿ, ಇತರ ಪಾಲುದಾರರಾದ ಬಾಬರ್ ಪ್ರತಿನಿಧಿ ಸಮಾಜ ಮತ್ತು ಬೈರಾಗಿಗಳ ಅಖಾಡಾಕ್ಕಿಂತಾ, ರಾಮಲಾಲಾ ವಿರಾಜಮಾನ್ ಸಂಘಟನೆಗೆ - ಅಂದರೆ ಹಿಂದೂ ಸಂಘಟನೆಗೆ - ಈ ತೀರ್ಪು, ಅನೇರವಾಗಿ, ವಿಶೇಷ ಜವಾಬ್ದಾರಿ ಒಪ್ಪಿಸಿದಂತಾಗಿದೆ.
ಹಿಂದೂ ಸಮುದಾಯದ ಕಳಂಕವೆನ್ನಲಾಗುವ, ಅದು Practical ಸಹ ಆಗಿರುವ ತರ-ತಮ ಭೇದದ ಜಾತಿಪದ್ಧತಿಗೆ ಇಲ್ಲಿ ಅವಕಾಶ ಕಲ್ಪಿಸಬಾರದು. ಪೂಜೆಗೆ ವೈಖಾನಸ, ಪಾಂಚರಾತ್ರ ಇತ್ಯಾದಿ ಯಾವುದಾದರೂ ಒಂದೇ ಆರ್ಷೇಯ ಅಗಮವನ್ನು ಸರಾಸಗಟಾಗಿ ಸ್ವೀಕರಿಸದೆ ಎಲ್ಲದರ Common minimum ಆಚರಣೆ ಜಾರಿಯಾಗಬೇಕು.
ಶ್ರೀರಾಮನ ಪ್ರೇರಣೆಯಿಂದಲೇ ಕೋರ್ಟ್ ನೀಡಿರುವ ಈ ಸದ್ಬುದ್ಧಿಯ ಆದೇಶ ಯಥಾರ್ಥವಾಗಿ ಸಾರ್ಥಕವಾಗಬೇಕಾದರೆ, ಹೇಯ ರಾಜಕಾರಣಿಗಳು ಕಿಂಚಿತ್ತೂ ಇದರ ದುರ್ಲಾಭ ಪಡೆಯದಂತೆ, ಮೂರೂ ಫಲಾನುಭವೀ ಸಂಘಟನೆಗಳು ಸಾಹಸ, ಸದ್ವಿವೇಕ ತೋರಬೇಕು. ಹೀಗೆ ತನ್ನ ನಾಡಿನಲ್ಲಿ ಶಾಂತಿ, ಸಾಮರಸ್ಯ, ಸಂವೃದ್ಧ್ದಿಗಳು ನೆಲೆಗೊಳ್ಳುವುದಕ್ಕೂ ಶ್ರೀ ರಾಮಚಂದ್ರ ಭಗವಂತನೇ ಅನುಗ್ರಹ ನೀಡಬೇಕಲ್ಲವೇ?