ರಿಲಯನ್ಸ್ ಪವರ್ ಘೋಶಿಸಿರುವ ಬೋನಸ್ ಶೇರುಗಳ ಇಂದಿನ ಬೆಲೆ?

ರಿಲಯನ್ಸ್ ಪವರ್ ಘೋಶಿಸಿರುವ ಬೋನಸ್ ಶೇರುಗಳ ಇಂದಿನ ಬೆಲೆ?

ಬರಹ

ಈ ಹಿಂದೆ ನಾನು ಚರ್ಚೆಯಲ್ಲಿ ಮೇಲ್ಕಂಡ ವಿಷಯದಲ್ಲಿ ಅನುಮಾನ ವ್ಯಕ್ತ ಪಡಿಸಿದ್ದು ನಿಜವಾಗುವ ಸಮಯ ಹತ್ತಿರವಾಗುತ್ತಿದೆ ಎನ್ನಬಹುದೇನೋ. ೪ನೇ ಜೂನ್ ೨೦೦೮ರ ಪ್ರಜಾವಾಣಿಯಲ್ಲಿ ಈ ವಿಚಾರವಾಗಿ ಪ್ರಕಟವಾಗಿರುವುದೆನೆಂದರೆ:
"ರಿಲಯನ್ಸ್ ಪವರ್ ಕಂಪನಿ ವಿತರಿಸಿದ ೩:೫ ಬೋನಸ್ ಶೇರಿಗೆ ಮುಂಚೆ ಶೇರಿನ ಬೆಲೆ ರೂ. ೪೪೦ನ್ನು ದಾಟಿತ್ತು. ನಂತರ ಕುಸಿತ ಕಂಡು ರೂ. ೪೧೫ರಲ್ಲಿತ್ತು. ಬೋನಸ್ ನಂತರದ ವಹಿವಾಟಿನಲ್ಲಿ ಶೇರಿನ ಬೆಲೆಯು ರೂ. ೨೩೫ಕ್ಕೆ ಕುಸಿದಿದೆ. ಅಂದರೆ ಬೋನಸ್ ಶೇರಿನೊಂದಿಗೆ ಹೋಲಿಸಿದರೆ ಅದು ರೂ. ೩೭೬ ಆಗುತ್ತದೆ. ಇದು ಬೋನಸ್ ವ್ಯಾಮೋಹಕ್ಕೆ ತೆತ್ತ ಬೆಲೆ"
ಇದರ ಅರ್ಥ ಕಂಪನಿಗೆ ಬಾಲಗ್ರಹದ ಪೀಡನೆ ಪ್ರಾರಂಭವಾಗಿದೆ. ಸಾರ್ವಜನಿಕರಿಂದ ಅತಿ ಹೆಚ್ಚಿನ ಹಣ ಸಂಪನ್ಮೂಲವನ್ನು ಪಡೆದು ಅವರಿಗೆ ಪ್ರತಿಫಲವಾಗಿ ನೀಡುತ್ತಿರುವುದೇನು? ಬರೀ ನಷ್ಟ. ಕಂಪನಿಗೆ ಏನು ಲಾಭ? ಏನೂ ಇಲ್ಲ, ಪ್ರೊಮೋಟರ್ ತನ್ನ ಪಾಲಿನ ಹೂಡಿಕೆಯ ಹೆಚ್ಚಿನಂಶವನ್ನು ಸಾರ್ವಜನಿಕರಿಗೆ ಬೋನಸ್ ಶೇರುಗಳ ಮೂಲಕ ನೀಡಿ, ತನ್ನ ’ಸ್ಟೇಕ್’ ಕಮ್ಮಿ ಮಾಡಿಕೊಂಡು, ಸಂಸ್ಥೆಯಿಂದ "ಪ್ರೀಮಿಯಂ ಖಾತೆ"ಯಲ್ಲಿರುವ ಹಣದಿಂದ ಆ ಮೊತ್ತವನ್ನು ತನ್ನ ಖಾತೆಗೆ ಹಿಂಪಡೆದುಕೊಂಡಿರುವ ಸಾಧ್ಯತೆಯ ಬಗ್ಗೆ ಹೂಡಿಕೆದಾರರು ಯೋಚಿಸಬೇಕು. ಅರಿತವರು ವಿವರಿಸಿಯಾರೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet