ರೊಮ್ಯಾಂಟಿಕ್ ಜರ್ನೀ....
ಎ
" ಎನಿದೆಯಪ್ಪ ಕುಡೀಲಿಕ್ಕೆ, ಏನಾದ್ರೂ ಕೋಲ್ಡ್ ಡ್ರಿಂಕ್ಸ್ ? " ಕೇಳಿದ ಪ್ರಶ್ನೆಗೆ ಅಂಗಡಿ ಹುಡುಗ ತಟ್ಟನೆ " ಕುಡೀಲಿಕ್ಕೆ ಏನು ಇಲ್ಲ ಸರ್ , ಬೇಕಾದ್ರೆ ತುಂಬಾ ಕೋಲ್ಡ್ ಆದ ಐಸ್ ಕ್ರೀಮ್ ಇದೆ " ಅಂದ. ಮೈಸೂರು ರಸ್ತೆಯಲ್ಲಿ ಸುಮಾರು ಇಪ್ಪತ್ತು ಕಿಲೋ ಮೀಟರ್ ಕ್ರಮಿಸಿ ಎದುರಿಗೆ ಸಿಕ್ಕ ಜಾನಪದ ಲೋಕ ಊರಿನ ರಸ್ತೆಯ ಪಕ್ಕಕ್ಕಿದ್ದ
ಚಿಕ್ಕ ಅಂಗಡಿಯಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಗಾಗಿ ನಿಂತಿದ್ದೆವು. "ಆಯಿತು ಕೊಡು ದೇವರೇ ಯಾವ್ದಾದ್ರೂ ಸರಿ " ಎಂದು ಕೇಳಿದಾಗ ಹುಡುಗ ಪಿ ಟಿ ಉಷಾ ನಾಚುವಂತೆ ಓಡಲು ಶುರುವಿಕ್ಕೀಕೊಂಡ.
"ಎಯ್ ನಿಲ್ಲೊ ಎಲ್ಲಿ ಹೊಗ್ತಿದೀಯ" ಅಂದಾಗ "ತಾಳಿ ಸರ್ , ನಮ್ಮ ಅಂಗಡೀಲಿಲ್ಲ ಎದುರಿನ ಅಂಗಡೀಲಿ ಇದೆ" ಎಂದು ಪರಾರಿಯಾದ. ಅಯ್ಯೋ ಮಾರಾಯ ಎನ್ನುತ್ತಾ ನನ್ನ ಧೃಷ್ಟಿ ಎದುರಿದ್ದ ನನ್ನ ಪ್ರೀತಿಯ
ಗೆಳೆಯನ ಕಡೆಗೆ ಬಿತ್ತು . ಕಪ್ಪು ಬಿಳುಪು ಬಣ್ಣವ ಹೊತ್ತು ಕುದುರೆಯ ವೇಗಕ್ಕೆ ಸವಾಲ್ ಹಾಕಿ ನಮ್ಮಿಬ್ಬರ ಭಾರ(!!)ವನ್ನು ಲೆಕ್ಕಿಸದೆ ಮೈಸೂರು ರಸ್ತೆ ತನ್ನದೆಯೇನೋ ಎಂಬಂತೆ ಓಡುತ್ತಿದ್ದ ಆತ,
ಜಾನಪದ ಲೋಕ ಊರಿನ ಹತ್ತಿರ ಯಾಕೋ ಸುಸ್ತಾದಂತೆ ವರ್ತಿಸಿದ. ಮೈಯೆಲ್ಲ ಬಿಸಿಯಾಗಿ, ಉಸಿರಿನ ಶಬ್ದ ಎರುಪೇರಾಗಿತ್ತು.
ಹೌದು , ಅವನು ಮಲಗಿದೆರೆ ನಮ್ಮ ಪಯಣದ ಆದಿ ಅಂತ್ಯ ಅದೇ ಎಂದು ಅರಿತು ಅವನು ನಾವು ಹತ್ತು ನಿಮಿಷದ ವಿಶ್ರಾಂತಿ ಪಡೆಯಲೆಂದೇ ಅಲ್ಲಿ ಕೂತಿದ್ದೆವು.
"ಸಾರ್ ತಗಳ್ಳೀ ಸಾರ್" ರಸ್ತೆಯ ಆಚೆ ಕಡೆ ಇಂದ ಡೌೂಡಾಸಿದ್ ಆಹುಡುಗ ಕೈಲಿದ್ದ ಎರಡು ಚಾಕೋ ಬಾರ್ ಐಸ್ ಕ್ರೀಮ್ ನ್ನು ಕೈಲಿಕ್ಕಿದ.
ಒಂದನ್ನು ಗೆಳತಿ ಜ್ಯೋತಿಗೆ ಕೊಟ್ಟು, ಮುಂದಿನ ನಮ್ಮ ಪಯಣದ ಬಗ್ಗೆ ಮಾತನಾಡುತ್ತಾ ಕುಳಿತಿದ್ದೆವು.ಚೌತಿಯ ಹೊಳವಿನ ಆ ಬಿಸಿಲು ನಮ್ಮ ಐಸ್ ಕ್ರೀಮ್ ನ್ನು ಕರಗಿಸಲು ತುಂಬಾ
ಸಮಯ ತೆಗೆದುಕೊಳ್ಳಲಿಲ್ಲ. ಪರಿಣಾಮ ಗಟ್ಟಿ ಹೊದಿಕೆಯ ಒಳಗೆ ಗಟ್ಟಿಯಾಗಿದ್ದ ಆ ಹಾಲಿನ ಹನಿಗಳು ನನ್ನ ಕಾಲಿನ ಮೇಲೆ ಬೀಳಲಾರಮ್ಬಿಸಿದವು. ಎದುರಿದ್ದ ಗೆಳತಿ ಪ್ರಪಂಚವನ್ನೇ ಮರೆತು ಆ ಬಿಸಿಲಿನಲ್ಲಿ ಕಾಶ್ಮೀರದ ತಂಗಾಳಿಯ ಅನುಭವ ಪಡೆದ ಹಾಗೆ ಮೆಲ್ಲನೆ ಐಸ್ ಕ್ರೀಮ್ ಸವಿಯುತ್ತಿದ್ದಳು.
ನನ್ನ ಜೆರ್ಕಿನಲ್ಲಿದ್ದ ಕ್ಯಾಮರ ಹೊರತೆಗೆದು ಅವಳ ಆ ಭಂಗಿ ಯನ್ನು ಕ್ಲಿಕ್ಕಿಸಿದೆ."ವ್ಹಾವ್, ಏನೋ ಇದು ನಾನು ಇಷ್ಟು ಚೆನ್ನಾಗಿದ್ದಿನಾ" ಉದ್ಗಾರಕ್ಕೆ" ಅಲ್ಲ ಅದು ಕಾಮೆರದ ಸ್ಪೆಶ್ಯಾಲಿಟೀ" ಎಂಬ ಮೋಟುಕು ಉತ್ತರ. ಸಿಟ್ಟು ಮಾಡಿಕೊಂಡ ಮುಖಾರವಿಂದಕ್ಕೆ "ಇಲ್ಲ ಮಾರಾಯ್ತಿ ನಿಜವಾಗ್ಲೂ ನೀನು ಚೆನ್ನಾಗಿದ್ದೆ" ಎಂದೆ. ಪಕ್ಕದಲ್ಲೇ ನಿಂತು ನಮ್ಮ ಫೋಟೋ ಸೆಶನ್ ಕಾಮೆಂಟ್ಸ್ ಕೇಳುತಿದ್ದ ಬಾಲಮಾಲಿಕನಿಗೆ
"ಬಿಲ್ ಎಷ್ಟಾಯ್ತು ಗುರು " ಎನ್ನಲು "ಸಾರ್ 48 ರೂಪಾಯಿ" ಯ ಉತ್ತರ. ವಾಲೆಟ್ ಎತ್ತಿ 100 ರೂ ಅವನ ಕೈಗಿಕ್ಕಿದೆ. ಹುಡುಗ ಚಿಲ್ಲರೆ ಹುಡುಕುತ್ತಿರಲು ನನ್ನ ಕಣ್ಣು ಕೆಂಪು ಮಿಶ್ರಿತ ಚಿನ್ನದಹೊದಿಕೆ ಹೊದ್ದು ಅಂಗಡಿಯ ಒಂದು ಕಡೆ ರಾರಾಜಿಸುತ್ತಿದ್ದ ಕಿಂಗ್ ಸಿಗರೇಟ್ ಪ್ಯಾಕ್ ಬಳಿ ಬಿತ್ತು.
"ಚಿಲ್ಲರೆ ತೊಗೋಳ್ಳಿ ಸಾರ್" ಎನ್ನುತ್ತಾ 52 ರ್ರೂ ನನ್ನ ಕೈಲಿಟ. ನನ್ನ ದೃಷ್ಟಿ ಗಮನಿಸಿದ್ದ ಗೆಳತಿ "ತೊಂದರೆ ಇಲ್ಲ ತಾವು ಸಿಗರೇಟ್ ಆಸ್ವಾದಿಸಬಹುದು "ಎಂಬ ಅಪ್ಪಣೆ ಕೊಟ್ಟಳು.
ಇದಕ್ಕಿಂತ ಖುಷಿಯ ವಿಷಯ ಇನ್ನೇನಿದೆ ಎನ್ನುವಥರ ಒಂದು ಸಿಗರೇಟ್ ಎತ್ತಿ ಅಗ್ನಿಸ್ಪರ್ಶ ಮಾಡಿಸಿದೆ. ಹುಡುಗನ ಕಣ್ಣು ನಮ್ಮ ಕ್ಯಾಮರ ನೋಡುತ್ತಿದ್ದವು.
ಅವನ ಫೋಟೋ ಕ್ಲಿಕ್ಕಿಸಿಕೊಳ್ಳುವ ಆಸೆ ಅರಿತ ಗೆಳತಿ ಕ್ಯಾಮರ ಕೈಗೆತ್ತಿಕೊಂಡು ನನ್ನ ಪಕ್ಕ ಕೂರಲು ತಿಳಿಸಿದಳು.
ಹಿರಿಹಿರಿಹಿಗ್ಗಿದ ಬಾಲಮಾಲಿಕ ನನ್ನಪಕ್ಕದಲ್ಲಿ ಕೂತುಕೊಂಡ. ಕ್ಲಿಚ್ಕ್ ...ಕ್ಲಿಚ್ಕ್ .....ಕ್ಲಿಚ್ಕ್ ..... ಎನ್ನುತ್ತಾ ಕ್ಯಾಮರ ತನ್ನ ಕಣ್ಣಲ್ಲಿ ನನ್ನ ಮತ್ತು ಅವ್ನ ಚಿತ್ರಗಳನ್ನು ನುಂಗಿ ಕೊಂಡಿತು.
ಅವನ ಆ ಸಂತೋಷ ಚಿತ್ರಗಳನ್ನು ಕ್ಯಾಮರ ಪರದೆಯ ಮೇಲೆ ತೋರಿಸಿದಾಗ ಇನ್ನಷ್ಟು ವೃದ್ಡಿಸಿತ್ತು.
ಪಕ್ಕಕ್ಕಿದ್ದ ಪಲ್ಸಾರ್ ಗೆಳೆಯನ ಸ್ತಿತಿಯನ್ನು ಪರೀಕ್ಸಿಸಿದಾಗ ಮುಂದಿನ ಗಾವುದ ಗಾವುದ ಪಯಣಕ್ಕೆ ರೆಡಿ ಎನ್ನುವ ಆತ್ಮ ವಿಶ್ವಾಸ ಅವನಲ್ಲಿ ಕಾಣುತಿತ್ತು.
ಗೆಳತಿಯ ಬೈಕ್ ಕಲಿಯುವ ಆಸೆ ನೆನಪಾಗಿ ಗಾಡಿಯ ಕೀಲಿಯನ್ನು ಅವಳ ಕೈಗಿತ್ತೆ. ಗೆಳೆಯನನ್ನು ಅಲುಗಾಡಿಸುವ ಶಕ್ತಿ ಅವಳ ಆ ನೀಳ ತೊಳ್ಬಲದಿಂದ ಸಾದ್ಯವಾಗಲಿಲ್ಲ.
ನಾನೇ ಗಾಡಿಯನ್ನು ರಸ್ತೆಗೆ ತೆಗೆದುಕೊಂಡು ಹೋಗಿ ಅವಳನ್ನು ಕೂರಿಸಿದೆ.ಬಾಲಮಾಲಿಕನಿಗೆ ಬೈ ಹೇಳಿ ಗಾಡಿ ಶುರು ಮಾಡಿ ಕೊಡುವುದರೊಂದಿಗೆ ಮುಂದಿನ ಪಯಣಕ್ಕೆ ನಾಂದಿ ಹಾಡಿದೆ.
ಬಾಲಮಾಲಿಕ ಮತ್ತು ಜಾನಪದ ಲೋಕ ಊರು ಗೆಳತಿಯ ಪ್ರಥಮ ಬೈಕ್ ಸವಾರಿಗೆ ಸಾಕ್ಷಿ ಆದಂತಿದ್ದರು.
ಮುಂದುವರೆಯುತ್ತದೆ.............