ಲಾಟರಿಯ ಗುಟ್ಟು ಜಾಲಾಡಿದಾಗ-ರಘೋತ್ತಮ್ ಕೊಪ್ಪರ

ಲಾಟರಿಯ ಗುಟ್ಟು ಜಾಲಾಡಿದಾಗ-ರಘೋತ್ತಮ್ ಕೊಪ್ಪರ

ಬರಹ

ಲಾಟರಿಯ ಗುಟ್ಟು ಜಾಲಾಡಿದಾಗ-ರಘೋತ್ತಮ್ ಕೊಪ್ಪರ
ಮೊದಲು ನನ್ನ ಬರಹಕ್ಕೆ ಉತ್ತರಿಸಿದ ಸಂಪದ ಮಿತ್ರರಿಗೆ ಧನ್ಯವಾದಗಳು. ನಿಮ್ಮೆಲ್ಲರ ಅಭಿಪ್ರಾಯವನ್ನು ಓದಿದಾಗ ಮತ್ತೆ ಅವರಿಗೆ ಮೇಲ್ ಕಳಿಸಿದೆ. ನನ್ನ ಹಣ ನಾ ಹೇಗೆ ಪಡೆಯಲಿ, ಬೇಗ ನನ್ನ ಅಕೌಂಟ್ ಗೆ ಜಮಾ ಮಾಡಿ ಬಿಡಿ ಅಂದೆ. ಆಗ ಅವರ ಮೇಲ್ ಕೂಡ ಶೀಘ್ರವೇ ಬಂದಿತು. ಅದನ್ನು ಕೋರಿಯರ್ ಮೂಲಕ ಕಳಿಸುತ್ತೇವೆ, ನಿಮ್ಮ ಅಡ್ರೆಸ್ಸು ಕೊಡಿ ಅಂತ ಬರೆದಿದ್ದರು. ಆಗ ನಾನು ಮೊದಲು ನಿಮ್ಮ ರೂಲ್ಸ್ ಗಳ ಬಗ್ಗೆ ತಿಳಿಸಿ ಎಂದು ಉತ್ತರಿಸಿದೆ. ಆಗ ಬಂತು ನೋಡಿ ಮೇಲ್ ನಾನು ಕೇವಲ ೪೨ಸಾವಿರ ರೂ ಗಳನ್ನು ತುಂಬಿದರೆ ಆ ಕೋರಿಯರ್ ಪಡೆದುಕೊಳ್ಳ ಬಹುದಂತೆ, ಅತಿ ಬೇಗ ಬೇಕೆಂದರೆ ೫೩ ಸಾವಿರ ತುಂಬಿದರೆ ಒಂದು ವಾರದಲ್ಲಿ ಕಳಿಸುತ್ತಾರಂತೆ ಅಂತ ಇತ್ತು. ಆಗ ನಾನು ಇಲ್ಲ ನನ್ನ ಪೇಪಾಲ್ ಅಕೌಂಟ್ ಗೆ ಜಮಾ ಮಾಡಿ ಎಂದೆ. ಮತ್ತೆ ಅವರು ಇಲ್ಲ ನಮ್ಮ ರೂಲ್ಸ್ ಪ್ರಕಾರ ಕೋರಿಯರ್ ಮೂಲಕವೆ ಪಡೆದುಕೊಳ್ಳಬೇಕು ಅಂದರು. ನನ್ನ ಹಣ ನಾನು ಹೇಗೆ ಬೇಕೊ ಹಾಗೆ ಪಡೆದುಕೊಳ್ಳೊ ಅವಕಾಶವಿಲ್ಲವೇ ಎಂದೆ. ಸರಿಯಾಗಿ ವಿಚಾರಿಸಿದಾಗ, ಆ ಮೇಲ್ ಅಡ್ರೆಸ್ಸ್ ನಲ್ಲಿರುವ ಕಂಪನಿಯೇ ಇಲ್ಲ, ಮೈಕ್ರೊಸಾಫ್ಟ್ ನಂತಹ ಕಂಪನಿಯ ಹೆಸರನ್ನು ಬಳಸಿಕೊಂಡು ವಂಚಿಸುವ ಜಾಲವೆಂದು ತಿಳಿಯಿತು. ಈಗ ನಾನು ಗ್ರಾಹಕರ ವೇದಿಕೆಗೆ ಹೋಗುತ್ತೇನೆ ಎಂದು ಹಾಗೇ ಒಂದು ಮೇಲ್ ಹಾಕಿದ್ದೇನೆ, ಎರಡು ದಿನವಾದರೂ ಉತ್ತರ ಬಂದಿಲ್ಲ. ಆದರೂ ಕೆಲವು ಕ್ಷಣವಾದರೂ ನನ್ನನ್ನು ಮಿಲಿಯನಿಯರ್ ಮಾಡಿದ ಆ ಪುಣ್ಯಾತ್ಮರಿಗೆ ನನ್ನ ಧನ್ಯವಾದಗಳು. ಕನಸನ್ನು ಮಾರುವವರಲ್ಲಿ ಇವರೊಬ್ಬರು ಎಂದರೆ ಅದನ್ನು ನಂಬಿ ಹಣ ಕಳೆದುಕೊಂಡವರು ನನ್ನನ್ನು ಬೈತಾರೆ, ಆದರೆ ಆ ಮೇಲ್ ಗಳನ್ನು ನಾನು ಡಿಲೀಟ್ ಮಾಡಿಲ್ಲ, ಆಗಾಗ ನೋಡಿ ಸವಿ ಸವಿ ಕನಸು ಆಗಲಿಲ್ಲ ನನಸು ಎಂದು ಹಾಡುತ್ತಿರುತ್ತೇನೆ.