ಲೇಖನಗಳಿಗೆ ಆಹ್ವಾನ

ಲೇಖನಗಳಿಗೆ ಆಹ್ವಾನ

ಬರಹ

ಡಾ.ಸಿ.ಆರ್.ಚಂದ್ರಶೇಖರ್ ಅವರು ನಾಡಿನ ಖ್ಯಾತ ಮನೋವೈದ್ಯರು. ನಿಂ‍ಹಾನ್ಸ್ ನಲ್ಲಿ ಕೆಲಸ ಮಾಡುತ್ತಿರುವರು. ಕನ್ನಡದಲ್ಲಿ ೧೩೦ ಕ್ಕೂ ಹೆಚ್ಚು ವೈದ್ಯಕೀಯ ಪುಸ್ತಕಗಳನ್ನು ಬರೆದವರು. ಅವರಿಗೆ ಈ ಡಿಸೆಂಬರ್ ತಿಂಗಳಿನಲ್ಲಿ ೬೦ ವರ್ಷಗಳಾಗಲಿವೆ.  ಈ ಸಂದರ್ಭದಲ್ಲಿ ಒಂದು ಗ್ರಂಥವನ್ನು ಸಮರ್ಪಿಸುತ್ತಿದ್ದೇವೆ. ಈ ಗ್ರಂಥಕ್ಕೆ ನಿಮ್ಮಿಂದ ಲೇಖನಗಳನ್ನು ಆಹ್ವಾನಿಸುತ್ತಿದ್ದೇವೆ. ವಿವರಗಳು ಇಂತಿವೆ.

೧. ಸಾರ್ವಜನಿಕರಿಗಾಗಿ:

-ಡಾ.ಸಿ.ಆರ್.ಸಿ ಅವರು ಬರೆದಿರುವ ಯಾವುದಾದರು ಒಂದು ಪುಸ್ತಕವನ್ನು ಕುರಿತು ೫೦೦ ಶಬ್ಧ ಮಿತಿಯಲ್ಲಿ ಲೇಖನ

-ಆಯ್ಕೆಯಾಧ ೫೦ ಲೇಖನಗಳನ್ನು ಪ್ರಕಟಿಸಲಾಗುವುದು ಹಾಗೂ ಅವರನ್ನು ವೇದಿಕೆಯ ಮೇಲೆ ಕರೆಸಿ ಬಹುಮಾನವನ್ನು ನೀಡಲಾಗುವುದು.

೨. ವೈದ್ಯ ಲೇಖಕರಿಗಾಗಿ:

-ವೈದ್ಯ ಲೇಖಕರು ತಾವು ಬರೆದಿರುವ/ಪ್ರಕಟವಾಗಿರುವ ೨ ಪುಟ ಮಿತಿಯ ಒಂದು ಉತ್ತಮ ಲೇಖನವನ್ನು  ಕಳುಹಿಸಬೇಕು.

-ಜೊತೆಗೆ, ಒಂದುಪುಟ ಮಿತಿಯ ‘ವೈದ್ಯ ಸಾಹಿತಿಯಾಗಿ ನನ್ನ ಅನುಭವ‘ ಎಂಬ ವಿಷಯಧ ಬಗ್ಗೆ ಬರೆದು ಕಳುಹಿಸಬೇಕು.

-ನಿಮ್ಮ ಪೂರ್ಣ ಹೆಸರು, ಹುಟ್ಟಿದ ದಿನಾಂಕ, ಹುಟ್ಟಿದ ಊರು, ಬರೆದ ಪುಸ್ತಕಗಳ ಸಂಖ್ಯೆ ಹಾಗೂ ಇತ್ತೀಚಿನ ಭಾವಚಿತ್ರವನ್ನು ಕಳುಹಿಸಿ ಕೊಡಬೇಕು.

ನಿಮ್ಮ ಬರಹಗಳನ್ನು ನನಗೆ ೨೫.೦೯.೦೮ರೊಳಗೆ ಕಳುಹಿಸಿಕೊಡಿ.

naasomeswara@yahoo.com

ಕಾರ್ಯಕ್ರಮ ವಿವರ:

ದಿನಾಂಕ: ೧೪.೧೨.೦೮

ಸ್ಠಳ: ಆರ್.ವಿ.ದಂತ ಮಹಾವಿದ್ಯಾಲಯ ಸಭಾಂಗಣಾ

ಸಮಯ: ಬೆಳಿಗ್ಗೆ ೯.೦೦ ಗಂಟೆಯಿಂದ ಸಂಜೆಯವರಿಗೆ

ಪರಿಣತರಿಂದ ಉಪನ್ಯಾಸಗಳಿರುತ್ತವೆ.

ಹೆಚ್ಚಿನ ವಿವರಗಳಿಗೆ ನನಗೆ ಮೇಲ್ ಮಾಡಿ ಇಲ್ಲವೇ ದೂರವಾಣಿಸಿ.

೯೮೮೦೪ ೬೫೬೬೧

ನಿಮ್ಮವ

ನಾಸೋ