ಲೇಖನಗಳಿಗೆ ಆಹ್ವಾನ!

ಲೇಖನಗಳಿಗೆ ಆಹ್ವಾನ!

ಬರಹ

ಡಾ.ಸಿ.ಆರ್.ಚಂದ್ರಶೇಖರ್ ಅವರು ಪ್ರಮುಖ ವೈದ್ಯಕೀಯ ಲೇಖಕರು. ಮನೋಶಾಸ್ತ್ರಜ್ಞರು. ಕನ್ನಡದಲ್ಲಿ ೧೫೦ ವೈದ್ಯಕೀಯ ಪುಸ್ತಕಗಳನ್ನು ಬರೆದವರು. ಇದು ಭಾರತೀಯ ಭಾಷೆಗಳ ಮಟ್ಟಿಗೆ ಒಂದು ದಾಖಲೆಯೇ ಸರಿ.

ಈಗ ಡಾ.ಸಿ.ಆರ್.ಸಿ ಅವರಿಗೆ ೬೦ ವರ್ಷಗಳು ತುಂಬಲಿವೆ. ಈ ಒಂದು ಸಂದರ್ಭದಲ್ಲಿ ಅವರ ಅಭಿಮಾನಿಗಳು, ಸಿ.ಆರ್.ಸಿ ಅವರಿಗೆ ಸನ್ಮಾನ ಮಾಡಲಿರುವರು ಹಾಗೂ ಒಂದು ಸ್ಮರಣ ಸಂಚಿಕೆಯನ್ನು ತರಲಿರುವರು. ಇದರಲ್ಲಿ ವೈದ್ಯರು ಹಾಗೂ ವೈದ್ಯೇತರರು ಲೇಖನಗಳನ್ನು ಬರೆಯಲು ಅವಕಾಶವಿದೆ. ಸಮಾರಂಭದ ವಿವರಗಳು ಹೀಗಿವೆ.

ದಿನಾಂಕ: ೧೪ ಡಿಸೆಂಬರ್ ೨೦೦೮. ಭಾನುವಾರ

ಸಮಯ: ಬೆಳಿಗ್ಗೆ ೧೦.೦೦ - ಸಂಜೆ ೬.೦೦ ಗಂಟೆ.

ಸ್ಠಳ: ಆರ್.ವಿ.ದಂತ ವಿದ್ಯಾಲಯ ಸಭಾಂಗಣ, ಜೆಪಿ ನಗರ, ಬೆಂಗಳೂರು.

ಜನಸಾಮಾನ್ಯರಿಗೆ:

  • ಸಿ.ಆರ್.ಸಿ ಅವರು ಬರೆದಿರುವ ೧೫೦ ಪುಸ್ತಕಗಳಲ್ಲಿ ಯಾವುದಾದರೊಂದು ಪುಸ್ತಕವನ್ನು ಕುರಿತು ಒಂದು ಪುಟದ ಒಳಗೆ ಒಂದು ವಿಮರ್ಶಾ ಲೇಖನವನ್ನು ಬರೆದು ಕಳುಹಿಸಿ.
  • ಉತ್ತಮ ೫೦ ಲೇಖನಗಳಿಗೆ ತಲಾ ರೂ.೧೦೦/- ಬಹುಮಾನ ಹಾಗೂ ಲೇಖನವನ್ನು ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು.
  • ಬಹುಮಾನಗಳನ್ನು ಸಮಾರಂಭದಂದು ನೀಡಲಾಗುವುದು.

ವೈದ್ಯ ಸಾಹಿತಿಗಳಿಗೆ:

  • `ವೈದ್ಯಸಾಹಿತಿಯಾಗಿ ನನ್ನ ಅನುಭವ`- ಒಂದು ಪುಟದ ಲೇಖನ.
  • ವೈದ್ಯಲೇಖಕರ ಹೊಸ/ಹಳೆಯ ಒಂದು ಲೇಖನ: ಪದಮಿತಿ ೫೦೦ ಶಬ್ಧಗಳು ಮಾತ್ರ.

      ಜನಸಾಮಾನ್ಯರು ಹಾಗೂ ವೈದ್ಯರು ತಮ್ಮ ಲೇಖನಗಳನ್ನು ಆಗಸ್ಟ್ ೧೫, ೨೦೦೮ ರ ಒಳಗೆ ನನಗೆ ಕಳುಹಿಸಿಕೊಡಬೇಕಾಗಿ ಪ್ರಾರ್ಥನೆ.

ವಿಳಾಸ:

naasomeswara@yahoo.com

naasomeswara@gmail.com

Dr.N.Someswara, `Janani` AD-5-186, KHB, SFS-407, II Main, III Cross,

Yelahanka New Town.

Bangalore-560 064.

Mobile: 98804 65661.