ವಂದನೆಗಳು 2021…

ವಂದನೆಗಳು 2021…

ಪ್ರತೀ ವರ್ಷ ಸುಂದರ ಹಾಗೂ ಕಹಿ ನೆನಪುಗಳೊಂದಿಗೆ ವರ್ಷಗಳನ್ನು ಬೀಳ್ಕೊಟ್ಟು, ಹೊಸವರ್ಷವನ್ನು ಸ್ವಾಗತಿಸುತ್ತಿದ್ದೆವು. ಕಳೆದೆರಡು ಬಾರಿಯಿಂದ ಹಳೆಯ ನೆನಪುಗಳು ಎಂದೂ ನೆನಪಿಸಿಕೊಳ್ಳಬಾರದಷ್ಟು ಕೆಟ್ಟದಾಗಿದ್ದವು. ಪ್ರಕೃತಿ ವಿಕೋಪಗಳ ಜೊತೆಗೆ, ಕಾಣದ ಮಹಾಮಾರಿಗೆ ಬಾಳಿಬದುಕುವವರನ್ನು ತಿಂದು ತೇಗಿದೆ. ಆರ್ಥಿಕ ಸ್ಥಿತಿಯನ್ನೇ ಬುಡಮೇಲು ಮಾಡಿದೆ, ಪ್ರಕೃತಿಯಲ್ಲಿನ ಗಾಳಿಸೇವನೆಗೂ ನಿಷೇಧವನ್ನಿರಿಸಿದೆ, ಸತ್ತ ಬಂಧುಗಳ ಸಂತೈಕೆಗೂ ತಡೆಹಾಕಿದೆ, ತಬ್ಬಿ ಸಂತೈಸುತ್ತಿದ್ದ ಆತ್ಮೀಯತೆಯನ್ನೂ ಕೊಂದೆ, ಸತ್ತವರ ಅಂತ್ಯಸಂಸ್ಕಾರಕ್ಕೂ ಹೋಗದಂತೆ ತಡೆದು ನಿಲ್ಲಿಸಿದೆ, ಮಕ್ಕಳ ಆಟದ ನೆಮ್ಮದಿ ಕಸಿದೆ, ಎಷ್ಟೋ ಮಕ್ಕಳ ಕರುಳ ಕಸಿದು ಅನಾಥವಾಗಿಸಿದೆ, ಅವರ ವಿದ್ಯಾಭ್ಯಾಸದ ಏಳಿಗೆ ಕಸಿದೆ, ನನಗೆ ನಿನ್ನ ಬಗ್ಗೆ ದೂರುವುದೊಂದೇ ಕೆಲಸವಲ್ಲ, ಪ್ರತೀ ಹೊಸ ವರ್ಷ ಏನಾದರೂ ಒಳ್ಳೆಯದು ತರಬಹುದು ಎಂಬ ನಂಬಿಕೆಯಲ್ಲಿ ನಾನಿದ್ದೆ. ನಂಬಿಕೆಗಳು ಪಾತಾಳಕ್ಕಿಳಿಯಿತು. ದಯಮಾಡಿ ನಿನ್ನ ಸಂಗಡವೇ ಕೊರೋನದಂತಹ ಅನೇಕ ಜೀವಿಯನ್ನು, ಭಯದ ಬದುಕನ್ನು ಹೊತ್ತೊಯ್ದು ಸುರಕ್ಷತೆಯ ಬದುಕನ್ನು ಮಾತ್ರ ಉಳಿಸಿಹೋಗು. ನಿನ್ನ ಸಹೋದರ (2022) ನಾದರೂ ಎಲ್ಲರ ಚಿತ್ತದಲ್ಲಿ ಅಚ್ಚಳಿಯದೆ ಉಳಿದುಕೊಂಡು, ಸುಖ ಸಂತೋಷಗಳನ್ನು ನೀಡಲಿ ಎಂದು ನಾನು ಆಶಿಸುವೆ. ದಯವಿಟ್ಟು ಹೋಗಿಬಿಡು. ಮತ್ತೆಂದೂ ಮರಳಿ ಬಾರದಂತೆ. 

-ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ

ಚಿತ್ರ ಕೃಪೆ: ಇಂಟರ್ನೆಟ್ ತಾಣ