ವರದಕ್ಷಿಣೆ...
ಕವನ
ಬಣ್ಣ ಬಣ್ಣದ ತೋರಣ ಮನೆಗೆ ಸಿಂಗಾರ
ಮದುಮಗಳ ಕೊರಳಲ್ಲಿ ಬಂಗಾರ
ಪುಟ್ಟ ಚಿಣ್ಣರದ್ದೇ ಒಂದು ಕೂಟ
ಹಿರಿಜೀವದ ಮನಸಿನಲಿ ಚಿಂತೆಗಳ ಓಟ..
ವೈವಾಹಿಕ ಬಂಧನ ನವ ಪಯಣ
ವಧು ವರ ರ ಸಮಾಗಮ
ಬಿಗಿಯಾಗಿಸಿದೆ ಭಾಂಧವ್ಯ ವ ಮೇಳದಲಿ
ಕೆಮ್ಮುವ ಅಜ್ಜನ ಹೃದಯವು..
ಬಂಗಾರದ ನೆಪದಲ್ಲಿ ವರದಕ್ಷಿಣೆ
ಹೆಣ್ ಹೆತ್ತ ಜೀವದ ಬವಣೆ
ಸವೆಸಿದ ಬದುಕು ಮತ್ತೂ ಬರಡು
ಸುರಿಯದು ಅದಕೆ ಸಂತೃಪ್ತತೆಯ ಸೋನೆ..
ಏನೆಂದು ಹೇಳಬೇಕು ಹೆಣ್ಣು
ಭಿಕ್ಷುಕನ ಪತಿಯೆಂದೋ
ಕೊಡುಗೈ ದಾನಿಯ ಮಗಳೆಂದೋ
ಕಾಡಿಗೆಯನ್ನಳಿಸಿದೆ ಕಣ್ಣ ಹನಿ..
ಹೆಣ್ಣು ಭಾರವಲ್ಲ.. ಸಂಪ್ರದಾಯ
ಹೆಣ್ಣು ಗೊಂಬೆಯಲ್ಲ.. ಕಟ್ಟುಪಾಡು
ಹೆಣ್ಣಿನ ಸ್ವಂತಿಕೆಗೂ ಇರಲಿ ನೆಲೆ
ಕಟ್ಟದಿರಿ ಅವಳ ಆತ್ಮಾಭಿಮಾನಕ್ಕೆ ಬೆಲೆ
ಎಳೆಯದಿರಿ ವರದಕ್ಷಿಣೆಯೆಂಬ ಬರೆ..
-‘ಮೌನ ರಾಗ’ ಶಮೀರ್ ನಂದಿಬೆಟ್ಟ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
