ವಸಂತ ಆಸ್ವಾದ
ಕವನ
ಪುಲ್ಲವಿತ ಪ್ರಕಟಿತ ಪರಿಮಳಿತ ಪ್ರಭಾವ
ನಲಿವು ಧಾತ್ರಿಗೆ ತುಂಬಿ ರಸಭಾವ
ರಸಕಾವ್ಯ ರಸರಮ್ಯ ಅಗಣಿತ ಅನುಭಾವ
ಅನುರಣಿಸಿ ಆನಂದವ ವಸಂತ ಸಂಭವ.
ಹೊಸ ಚಿಗುರು ಹೊಸ ಹುರುಪು ಹೊಸತು ತಂಪು
ಗಾಯನಕೆ ಕೋಗಿಲೆಯ ಗಾನವೇ ಇಂಪು
ಗಾಂಧಾರಿ ಕಂಗಳಿಗೂ ಕಾಣುವ ಆಸೆ
ಇಳೆಯಿನ್ನು ಕುಲವಧುವು ಕನಸಲ್ಲ ಸೊಗಸೆ.
ಮನ್ಮಥನ ಮೋಡಿಯಿದು ಅಂದದ ಅನುರಣನ
ಮಧು ಭರಿತ ಪುಷ್ಪಗಳ ಸೆಳೆವ ಗಮನ
ತಾನೇ ಗೀತವಾಗಿದೆ ನಲಿವಲಿ ಪಸರಿಸಿ
ರಸ ಮನ ಹಿಗ್ಗಿದೆ ಅಂದವ ಆಸ್ವಾದಿಸಿ.
ತಾ ನಲಿದು ಜಗಕೆ ನಲಿವನೀವ ಕಾಲ
ಮರೆಸಿ ಬದುಕ ಕಹಿಯ ಸಾಲ
ಮೋಡ ಕರಗಿ ಮಳೆಯು ಸುರಿವಂತೆ
ಬೋಳಾದ ಮರದಿ ಹೂವೆಲೆ ಚಿಗರೆಯಂತೆ.
-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್