ವಿಚಾರ-ವಿ(ಮಾ)ನಿಮಯ ಭಾಗ - ೨

ವಿಚಾರ-ವಿ(ಮಾ)ನಿಮಯ ಭಾಗ - ೨

ಬರಹ

ಭಾಗ - ೨


ಯಥಾಪ್ರಕಾರ ಇಂದೂ ವಾಕಿಂಗ್ ಹೊರಟರು ರಾಯರು.


ನಮಸ್ಕಾರ ರಾಮರಾಯರಿಗೆ,
ಗುಡ್ ಮಾರ್ನಿಂಗ್ ಎಂದರು ಶೆಟ್ಟರು


ಎಲ್ಲಿ ನಮ್ಮ ದೊರೆಸಾಮಿಗಳು.


ಎಲ್ಲೋ ಚಳಯಾಗಿ ಬೆಚ್ಚಗೆ ಇನ್ನೂ ಮಲಗಿರಬೇಕು.  ವಯಸ್ಸಾಯ್ತಲ್ಲ ಎಂದರು ರಾಮರಾಯರು.


ರೀ ಸುಮ್ನೆ ಏನೇನೋ ಹೇಳ್ಬೇಡಿ, ಅವರಿನ್ನು ನಿಮ್ಮಷ್ಟು ಮುದುಕರಾಗಿಲ್ಲ , ೬೮ ಅಷ್ಟೆ.  ನಿನ್ನೆ ಸಂಜೆ ಸಿಕ್ಕಿದ್ರು.  ಯಾಕೋ ಸ್ವಲ್ಪ ಜ್ವರ ಬಂದ ಹಾಗಿದೆ.
ಆಸ್ಪತ್ರೆಗೆ ಹೋಗಬೇಕು ಅಂತಿದ್ರು.   


ಪಾಪ ಇನ್ನೇನು, ಇಬ್ಬರು ಮಕ್ಕಳು,  ಇದೇ ಊರಲ್ಲಿ ಇದ್ರೊ,  ದೊರೆಸಾಮಿಗಳು ಆಸ್ತಿ ಅಂತ ಸ್ವಂತ ಮನೆ ಮಾಡಿಲ್ಲ ಅಂತ ಬೇರೆ ಹೋದರು.
ಈಗ ಪೆನಷನ್, LIC ಹಣ ಇಟ್ಕೊಂಡು ಖಾಯಿಲೆ  ಹೆಂಡತಿನೂ ನೋಡಿಕೊಂಡಿದ್ದಾರೆ. ಎಂದರು ರಾಮರಾಯರು.


ಅಲ್ಲಾರಿ ಸ್ವಂತ ಮನೆಗೂ, ಇವರ್ ಜ್ವರಕ್ಕೊ ಎನ್ರೀ ಸಂಭಂದ.  ಆಂದರು ಶೆಟ್ಟರು.


ನಿಮಗೆ ಇದೆಲ್ಲಾ ಅರ್ಥ ಆಗಲ್ಲ ಬಿಡಿ ಶೆಟ್ರೆ.  ನಿಮ್ಮ ಮಗ ಫಾರಿನ್ ರಿಟರ್ನ್ ಡಾಕ್ಟರು.  ಮನೇಲಿ ಆಳು, ಕಾಳು.   ನೀವೂಬ್ಬರೆ,  ನಿಮ್ಮಾಕಿ ಮೂದಲೆ ಹೋಗ್ಬಿಟ್ರು ಪಾಪ ಅಂದರು ರಾಮರಾಯರು.


ಹೋಗಲಿ ಬಿಡಿ.  ಈಗ ಅದೆಲ್ಲಾ ಯಾಕೆ.  ಅಂದಹಾಗೆ ಶೆಟ್ರೆ, ನಿಮ್ಮ ಹತ್ತಿರ  LIC  ಇದೆಯ,  ಪೆನ್ಷನ್ ಏನಾದರೊ ಬರತ್ತೇನ್ರಿ ಅಂದರು ಶ್ಯಾಮರಾಯರು.


ಶೆಟ್ರಿಗೆ ಬಿಡಿ ಒಂದಷ್ಟ್ ಬಡ್ದಿ ಬರೋಹಾಗೆ ಮಾಡ್ಕೂಂಡಿರ್ತಾರೆ.   ಆಲ್ವೇನ್ರಿ  ಶೆಟ್ರೆ ಆಂದರು ರಾಮರಾಯರು.


ಆದೇನೋ ಸರಿ.  ನಾನು ಇಟ್ಕೂಂಡಿದಿದ್ದು ಒಂದು ಕಿರಾಣಿ ಅಂಗಡಿ,  ನನ್ನ ಮುಖ ನೋಡಿ ವರದಕ್ಷಿಣೆ ಅಂತ ಇವಾಗಿರೋ ಮನೆ ಕೊಟ್ಟು ಹೆಣ್ಣೂ ಕೊಟ್ರು.
ನನ್ನ ಹೆಂಡತಿಯಿಂದಲೇ ನಾನು ಮುಂದೆ ಬಂದದ್ದು.  ಅವಳುಗೆ ತಾನು ಓದದೆ ಇದ್ದರೊ ಮಗನ್ನ ಡಾಕ್ಟರ್ ಮಾಡೋ ಹಂಬಲ.  ಆದೇನು ಹುರಿದುಂಬಿಸಿದಳೊ ಏನೊ.  ನಾನು ಮಾರ್ಕೆಟ್ಟು, ಆಂಗಡಿ ಅಂತ ಇರ್ತಾ ಇದ್ದೆ.    ಕೊನೆಗೊ ಮೆರಿಟ್ ಸೀಟ್ ಗಿಟ್ಟಿಸ್ ಬಿಟ್ಟ ಮಗ.  ಆವತ್ತು ನೋಡ ಬೇಕ್ರಿ ನನ್ನಾಕಿ ಸಂತೋಷ ಮರೆಯಕ್ಕಾಗಲ್ಲ ಎಂದು ಕಣ್ಣು ವರೆಸಿಕೊಂಡರು ಶೆಟ್ರು.
ಈಗ ಸ್ವಲ್ಪ ಬಡ್ಡಿ ದುಡ್ಡು ಬರುತ್ತೆ.  ನಾನಾಯಿತು , ನನ್ನ ಪಾಡಯಿತು.  LIC ಎಲ್ಲಾ ನನಗೆ ಗೊತ್ತಿಲ್ಲ ಆಂದರು.


"ನನ್ನ ಹತ್ರ ಪಾಲಿಸಿ ಇದೆ.  ಪೆನ್ಷನ್ ಬರುತ್ತೆ.  ನಾನು ಸತ್ತ ಮೇಲೆ ೧೦ ಲಕ್ಷ ಇದ್ದವರಿಗೆ ಬರುತ್ತೆ!
ಅದ್ಕೆ ನೋಡಿ ನಮ್ಮನೇಲಿ ಹಾಯಾಗಿರೋದು" ವ್ಯಂಗವಾಡಿದರು ರಾಮರಾಯರು.   ಆದರೆ ಆ ವ್ಯಂಗದ ಹಿಂದಿನ ನೋವು ಕೆಲವರಿಗೆ ಮಾತ್ರ ತಿಳಿದಿತ್ತು.


ರಾಮರಾಯರಿಗೆ ಇಬ್ಬರು ಮಕ್ಕಳು.  ಒಬ್ಬ ಮಗ ಚಂದ್ರಶೇಖರ್- HAL ನಲ್ಲಿ ಕೆಲಸ.  ಎಲ್ಲವನ್ನೊ ವ್ಯಾವಹಾರಿಕ ದ್ರುಷ್ಟಿಯಲ್ಲೇ ನೋಡುವುದು.  ಏನಾದ್ರು ಮಾಡಿದರೆ ಅದರಿಂದ ತನಗೆ ಏನು ಲಾಭ ಎಂದು ನೋಡುವ ಆಸಾಮಿ.  ಇವನಿಗೆ ಮದುವೆಯಾಗಿ ಒಬ್ಭ ಮಗ , ಒಬ್ಬ ಮಗಳು ಇದ್ದರು.


ಮಗಳು ಸುಕನ್ಯ. M.A in literature.  ಆಂದ ಚಂದದ ಹುಡುಗಿ.  ಏನೇ ಆದರೊ, ಏನೇ ನೋಡಿದರೊ ತಾನು ಮಾಡಬೇಕು ಎನ್ನುವ ಛಲ.  ಸಾಧಿಸಿಯೇ ತೀರುವ ಹಠ.


ಗುರುರಾಜ್ ಹಿರೇಮಠ, ಒಳ್ಳೆಯ ವರ, ವಿದ್ಯಾವಂತ  P.hd in Applied Mathematics.  Pune universityಯಲ್ಲಿ ಪ್ರೊಫೆಸರ್ ಕಮ್
 H O D ಬಹಳ ಪ್ರತಿಷ್ಠಿತ ಹುದ್ದೆ.  ಈ ಅನುರೊಪವಾದ ವರನೊಂದಿಗೆ ಸುಕನ್ಯಳ ಮದುವೆಯಾಗಿತ್ತು.  ಪುಣೆಯಲ್ಲಿ ಸೆಟ್ಲ್ ಆಗಿದ್ದರು.  ಇವರಿಗೆ ಒಬ್ಬಳೇ ಮಗಳು ರಜನಿ.   ಸಂಸಾರ ಚೆನ್ನಾಗಿಯೇ ಸಾಗಿತ್ತು. ಮಗಳು ರಂಜನಿ ಎಲ್ಲದರಲ್ಲೊ ಮೆರಿಟ್ ಸ್ಟೊಡೆಂಟ್.   ಕ್ಲಾಸ್ XII ಮುಗಿಸಿ ರಜೆಗಾಗಿ ಅಮ್ಮ ಮಗಳು ರಾಮರಾಯರ ಮನೆಗೆ ಬದಿದ್ದರು. 


ಒಂದು ವಾರವೊ ಕಳೆದಿರಲಿಲ್ಲ.   ಟೆಲಿಗ್ರಾಂ ಬದಿತ್ತು.
"HEREMATT NOT WELL. START  IMMEDIATELY"  ಸುಕನ್ಯ ಆತುರವಾಗಿ ವಿಮಾನದಲ್ಲಿ ಬಂದಿಳಿದಳು.
ನೇರವಾಗಿ ಯಜಮಾನರನ್ನು ಕಾಣಳು ಆತುರವಾಗಿ ಆಸ್ಪತ್ರೆ ತೆರಳಿದಳು.


"ಡಾಕ್ಟರ್ I am Heremartt's Wife Sukanya.  What has happened to him"


"He is attacked by Paralyssis due to low sugar -  he is recovering now.  But, it was massive.  I cannot say anything now. But, now he is out of danger".


ಸುಕನ್ಯಾಗೆ ಎಲ್ಲಿಲ್ಲದ ಆಘಾತ.   ತಂದೆ ರಾಮರಾಯರಿಗೆ  ಫೋನಾಯಿಸಿ ಎಲ್ಲವನ್ನು ತಿಳಿಸಿ, ತಕ್ಷಣ ಚಂದ್ರುನ ಜೊತೆ ಮಾಡಿ ರಂಜನಿಯನ್ನು  ಕಳುಹಿಸುವಂತೆ ಕೇಳಿಕೊಂಡಳು..


ಚಂದ್ರು ನಿರಾಕರಿಸಿಬಿಟ್ಟ.   ರಾಮರಾಯರು ಆಂಗಲಾಚಿದರು, Flight ticket ನಾನೇ ಕೊಡಿಸುತ್ತೇನೆ ಹೋಗಿ ಬಾ ಸುಕನ್ಯಳಿಗೊ ಸಹಾಯವಾಗುತ್ತೆ ಎಂದು.


No Chance,  ಅಲ್ಲಿ ಹೋದರೆ ಬೇರೆ ಖರ್ಚು ಬರುತ್ತದೆ.  ನಾನುಹೋಗುವುದಿಲ್ಲ  ಎಂದಿದ್ದ ಭೊಪ. 


ಹಾಗೆಯೆ ಆಯಿತು.  ಪಾಪ ದುರದ್ರುಷ್ಟವಷಾತ್  ಸುಕನ್ಯಾಳ ಯಜಮಾನರು ೨ ವರ್ಷಗಳ ಕಾಲ ಹಾಸಿಗೆ ಹಿಡಿದುಬಿಟ್ಟರು.  ಮುಂದೆ ಸುಕನ್ನಾಳಿಗೆ ಅದೇ ಕಾಲೆಜಿನಲ್ಲ್ಲಿ
ಪ್ರೊಫೆಸರ್ ಹುದ್ದೆ ಕೊಟ್ಟರು.   ಹೇಗೋ  ಗಂಡನ ಆರೋಗ್ಯ ಮತ್ತು ಕಾಲೇಜಿನ ಕೆಲಸ ಎರಡನ್ನೂ ನಿಭಾಯಿಸಿ  ಜೇವನ ನಡೆಸಿಕೊಂಡು ಮಗಳನ್ನು Software engineer ಮಾಡಿದಳು.  ಹಿರೇಮಠ ಸ್ವಲ್ಪ ಮಟ್ಟಿಗೆ ಮಾತನಾಡಿ, ಓಡಾಡುವಂತಾದರು.   ರಂಜನಿಗೆ  ಬೆಂಗಳೂರಿನಲ್ಲಿ ಪ್ರತಿಷ್ಠಿತ SOFTWARE CO.,ಯಲ್ಲಿ ಕೆಲಸ ಸಿಕ್ಕಿತು.


 


 


ಏನೇ ಇದ್ದರೂ,  ದುಡ್ಡು ಮಾಡುವಷ್ಟು ಸಹಾಯ ಕೆಲವೊಮ್ಮೆ ಯಾವುದೂ ಮಾಡಲಾರದು ಎನ್ನುವ ಕಹಿ ಸತ್ಯದ ಅರಿವು ರಾಮರಯರಿಗೆ ಇತ್ತು.


 



                          ವಿಚಾರ-ವಿ(ಮಾ)ನಿಮಯ



ಈ ಪುಟ್ಟ ಧಾರವಾಹಿಯನ್ನು ನಾಲ್ಕು ಕಂತುಳಲ್ಲಿ ಪ್ರಕಟಿಸುತ್ತಿದ್ದೇನೆ. 
ಪ್ರತಿ ಗುರುವಾರದಂದು ಒಂದೊಂದು ಕಂತು ಪ್ರಕಟುಸುತ್ತಿದ್ದೆನೆ.  ಇದು ನನ್ನ ಎರಡನೇ ಪ್ರಯತ್ನ.
ಸಂಪದಗರಿಂದ ಪ್ರೋತ್ಸಾಹವಿರಲಿ ಎಂದು ಆಶಿಸುತ್ತೇನೆ.


ವಂದನೆಗಳು                                                        ಮಧ್ವೇಶ್                                                          



ಭಾಗ - ೧


ಶ್ಯಾಮರಾಯರು, ಬೆಳಿಗ್ಗೆ ಎದ್ದು , ವಾಕಿಂಗ್ ಹೊರಟರು,


"ಬರ್ತಾ ಹಾಲು, ಕೊತ್ತಂಬರಿ ಸೊಪ್ಪು ತನ್ನಿ, ಮರೀಬೇಡಿ, ಆಜ್ಞಾಪಿಸಿದಳು" ಸೂಸೆ ಸುಮತಿ.


"ಅಯ್ಯೊ, ನೀನು ಹೋಗಿ ಇವರಿಗೆ ಹೇಳಿದರೆ ಅದು ಬರೋ ಅಷ್ಟರಲ್ಲಿ ಪ್ರಳಯ ಆಗೋಗಿರುತ್ತೆ" ಅಂತ ಕೊಂಕಿಸಿದರು ಅತ್ತೆ ಪದ್ದಮ್ಮ.
"ಆ ವಿಚಾರ, ಈ ವಿಚಾರ ಅಂತ ಆ ತರಲೆ ರಾಮರಾಯರು, ಬೊಳಪ್ಪ ದೊರೆಸಾಮಿ, ಕುಳ್ ಶೆಟ್ಟರು ಎಲ್ಲಾ ಸೇರಿ ಯಾರ್ ಮನೆ ಏಳುಸ್ತಾರೋ
ಏನ್ ರಾಜ್ಯಭಾರದ ಮಾತೋ?! ಬರೋದ್ ಇನ್ ಹತ್ ಘಂಟೆಗೆ"
ಅಂತ ತಮ್ಮ ಯಜಮಾನರಾದ ಶ್ಯಾಮರಾಯರ ವಾಕಿಂಗ್ ಕಂ ಮೀಟಿಂಗ್ ಬಗ್ಗೆ ತಮಗೆ ಇದ್ದ ಅಭಿಪ್ರಾಯ ಒಂದೇ ಉಸಿರಲ್ಲಿ ಹೊರ ಹಾಕಿದರು.


ಇದೆಲ್ಲಾ ಒಂತರಾ ವಯಸ್ಸಾದ ಮೇಲೆ "I miss you" ಅಂತ ಹೇಳೋ ಪರಿ ಇರಬೇಕು. ಆಲ್ವಾ!
ಆದೇನೋ ನಂಗಿನ್ನು ಅಷ್ಟ್ ವಯಸ್ಸೂ ಆಗಿಲ್ಲಾ.  ನನ್ ಮಿಸೆಸ್ಸು "ಮಿಸ್ ಯು" ಅಂತ ಹೇಳೂ ಇಲ್ಲಾ!?.


ಶ್ಯಾಮರಾಯರು, ಕೊನೆಮನೆ ಶೆಟ್ರು, ಹಿಂದಿನ ಬೀದಿ ದೊರೆಸಾಮಿ, ಮುಂದಿನ ಬೀದಿ ರಾಮರಾಯರು ಎಲ್ಲಾ ಒಟ್ಟಿಗೆ ಸೀರಿ ವಾಕಿಂಗ್ ಹೋಗಿ ಅಲ್ಲೇ ಇರುವ
ಪಾರ್ಕ್ ನಲ್ಲಿ ಕೂತು ಹರಟೆ ಹೊಡೆದು ಬರುತ್ತಿದ್ದರು.


"ಅಲ್ಲಾರೀ ನೆನ್ನೆ ಏನಾಯಿತು ಆಂದರೆ,  ನಾನು ಹೇಳಿದ್ನಲ್ಲ, ಅದೇ ನಮ್ಮ ದೊಡ್ಡಪನ್ದು, ಅಂತ, ವ್ಯೆದಿಕ, ಹೋಗಿದ್ವಿ, ಆ ಪುರೋಹಿತರು ಬರೋ‌ಅಷ್ಟರಲ್ಲಿ ನಮ್ಮ ತಿಥಿ ಆಗ್ತಾ‌ಇತ್ತು!  ಅಲ್ಲಿಂದ ಬರೋವಷ್ಟ್ರಲ್ಲಿ ೩.೩೦ಘಂಟೆ" ಮಾತು ಪ್ರಾರಂಭಿಸಿದರು ರಾಮರಾಯರು..


"ಆದಕ್ಕೇ ಅಲ್ವೆ ನಾನು ಇದೆಲ್ಲಾ ರಗಳೆನೇ ಬೇಡ ಅಂತ ನಮ್ಮಪ್ಪಂದು ಅಮ್ಮಂದು ತಿಥಿ ಮಠದಲ್ಲೇ ಮಾಡೋದು.
ಈಗಿನ ಹುಡುಗರಿಗೆ ಅದೆಲ್ಲಾ ಆಸಕ್ತಿ ಇಲ್ಲಾ, ಯಾರೂ ಬರೋಲ್ಲಾ, ಅದಕ್ಕೆ,  ನಾನು ನಮ್ಮನೆಯವಳು ಹೋಗಿ ಬರ್ರೀವಿ" ಎಂದರು ರಾಮರಾಯರು.


"ಅಯ್ಯೋ ನಿಂಮ್ದು ಎಲ್ಲಾದಕ್ಕೊ ಏನಾದರೂ ಇರುತ್ತೆ,  ಶ್ಯಾಮರಾಯರು ಏನ್ ಹೇಳ್ತಾರೋ ಕೇಳ್ರಿ" ಎಂದರು ಶೆಟ್ಟರು.


ಮುಂದುವರೆಸಿದರು ಶ್ಯಾಮರಾಯರು,
"ಮನೆಗೆ ಬಂದ್ವಿ,  ಬೀಗದ ಕೀ ಇಲ್ಲಾ ಕಣ್ರಿ, ನಮ್ ಪದ್ದುನೋ ಶುರು ಹಚ್ಚಿದಳು, ಬೀಗದ ಕೀ ಎಲ್ ಬಿಟ್ರಿ,  ಏಲ್ ಹೋದ್ರು ಹರಟೆ,  ಈಗ ಏನ್ ಮಾಡೋದು, ಸುಮೇರು ಬರೋ ವರೆಗೊ ಫುಟ್ ಬಾತೇ ಗತಿ" 


"ಇಲ್ಲ ಕಣೇ.  ನಾನ್ ತೊಗೊಂಡಿರಲಿಲ್ಲಾ.  ಸುಮೇರು ಹತ್ತಿರಾನೇ ಇರಬೇಕು" ಆಂದರೆ ನನ್ ಮೇಲೆ ನಂಬಿಕೆನೆ ಇಲ್ಲಾ.


"ನಿಮ್ ಮರಿವಿಗೆ ಏನ್ ಹೇಳಬೇಕು ಅಂತಾನೆ ಗೊತ್ತಾಗೊಲ್ಲ.  ಸುಮ್ನೆ ಎಲ್ಲಾದಕ್ಕೊ ಮುಂದೆ ಹೋಗ್ತಿರಾ ಸತೀಶನಿಗೆ ಗೊತ್ತಾದರೆ ಇನ್ನೇನು ರಾದ್ದಾಂತ ಕಾದಿದೆಯೋ?


"ಸುಮೇರು ಸ್ಕೂಲ್  ವ್ಯಾನ್ ಬಂತು ಇರು.  ಅವನ್ ಹತ್ರ ಇರುತ್ತೆ" ಎಂದರು ರಾಯರು.


ಸುಮೇರು ಬಂದ "ಇದ್ಯಾಕ್ ಅಜ್ಜಿ  ಹೊರಗೇ ನಿಂತಿದೀಯ ಬಾಗಿಲ್ ತೆಗಿ,   ಈಗ್ ಬಂದ್ರಾ ತಾತ ಎಂದ" ಆನ್ನೋದೆ ನನ್ನ ಮೂಮ್ಮಗ.


"ಅರೇ ಇದೇನೊ ನಿನ್ಹತ್ರಾನೂ ಇಲ್ವಾ ಕೀ" ಎಂದರು ಪದ್ದಮ್ಮ.


"ಇಲ್ಲ ಅಜ್ಜೀ" ಎಂದವನೇ ,  ಅಪ್ಪನಿಗೆ ಫೋನಾಯಿಸಿದ.
ಈಗೆಲ್ಲಾ ಎಲ್ಲರ ಬಳಿ ಮೊಬೆಲ್ ಫೋನ್  ಇವನು ಏನ್ ಹೇಳಿದನೋ, ಅವರಪ್ಪ ಏನ್ ಅರ್ಥ ಮಾಡಿಕೊಂಡನೊ,
ಅರ್ಧ ಘಂಟೆಯಲ್ಲಿ ಬೀಗ ರಿಪೇರಿ ಮಡುವವನ ಜೊತೆ ಬಂದೇ ಬಿಟ್ಟ ದೊಡ್ಡ ಮಗ ಸತೀಶ.


"ಅಯ್ಯೊ ಅಲ್ಲಾರಿ  ನೀವೆಲ್ಲೊ ಹುಡುಕಲೇ ಇಲ್ವಾ" ಎಂದರು ತರಲೆ ರಾಮರಾಯರು.


"ಹುಡುಕದೆ ಇರ್ತಾರೆಯೆ, ಅವರು ಏನ್ ಹೇಳ್ತಾರೊ ಕೇಳ್ರಿ" ಸಿಡುಕಿದರು ಶೆಟ್ಟರು.


"ಆದೇ ಹೇಳೋಣಾ ಆಂತ,  ತಿರುಗಿ ಬಸ್ ಹಿಡಿದು ಆ ತಿಥಿ ಮನೆಗೆ ಹೋದೆ"


"ಆಲ್ಲಾರಿ ಅರ್ಜ್೦ಟ್ ಇರೋವಾಗ ನಿಂಮ್ದೇನ್ ಮಂಕು ಬುದ್ದಿ ,  ಆಟೋದಲ್ಲಿ ಹೋಗೋದ್ ಬಿಟ್ಟು. ತಿರುಗಾ ಮೊಗು ತೂರಿಸಿದರು" ರಾಮರಾಯರು,


"ನಮ್ಕಡೆ, ಒಂದ್ಸಾರಿ, ತಿಥಿ ಮನೆಯಿಂದ ಬಂದ್ರೆ, ತಿರುಗಾ ಹೋಗಲ್ಲಾ ಅಲ್ಲಿಗೆ" ಎಂದರು ದೊರೆಸಾಮಿಗಳು , ಬೊಳುತಲೆ ಸವೆರುತ್ತಾ,


"ಅಯ್ಯೋ ಅದು ಸೊತಕದ ಮನೆಗೆ ರೀ,  ಈಗೇನು ಬಾಗಿಲು ಒಡೆದರೋ  ಹ್ಯಾಗೆ" ಎಂದರು ಶೆಟ್ರು.


"ಅಯ್ಯೊ ಬಾಗಿಲು ಒಡೆಯೋದು ಇರಲೀ, ನನ್ ಪುಣ್ಯ, ನನ್ ಹಿಡ್ಕೊಂಡ್ ಹೊಡೀಲಿಲ್ಲಾ!
ನನ್ನ ಮಗ ಸತೀಶ ಅದೇನ್ ಜೆನರಲ್ ಮ್ಯಾನೆಜರ್ ಕೆಲಸ ಮಾಡ್ತಾನೋ ಬ್ಯಾಂಕಲ್ಲಿ,  ಏಲ್ಲಾದಕ್ಕೊ ಟೆನ್ಷನ್ ಮಾಡ್ಕೊಂಡ್ ಕೂಗಾಡ್ತಿರ್ತಾನೆ"


ನಾನು ಕೀ ಸಿಗಲಿಲ್ಲಾ ಅಂತ ವಾಪಸ್ಸು ಬಂದೆ, ಆಷ್ಟರಲ್ಲಿ ಬೀಗ ರಿಪೇರಿ ಮಾಡೋನ್ ಏನೋ ನೋಡ್ತಿದ್ದ.  ನಾನ್ ವಿಚಾರಿಸಿದೆ,


"ಏನಪ್ಪಾ, ಕೀ ತೆಗಿಯಕಾಗುತ್ತಾ ಅಥವಾ, ಬಾಗಿಲು ಏನಾದರೊ ಒಡಿಲೇ ಬೇಕಾ ಅಂತಾ"


ನನ್ನ ಹೆಂಡತಿ ಅಷ್ಟರಲ್ಲಿ ಹಿಂದಿನಿಂದ ಗದರಿದಳು


"ಈಗ ನೀವ್ ಮಾಡಿರೋ ಘನ ಕಾರ್ಯಾನೆ ಸಾಕು,  ಬಾಗಿಲು ಏನು ಒಡೆಯೋಕೆ ಹೇಳ್ಬೇಡಿ, ತೆಪ್ಪಗೆ ಈಕಡೆ ಬಂದು ಕೊತ್ಕೊಳ್ಳಿ".
ನನ್ ಮಗ ಶುರು ಮಾಡಿದ,
"ಆಲ್ಲಾ ನನನ್ನ ಏನ್ ಅದ್ಕೊಂಡೀದೀರಿ ಎಲ್ಲಾ.  ಆಪೀಸಿನಲ್ಲಿ ಪ್ರಾಣ ಹೋಗೊ ಅಷ್ಟು ಕೆಲಸ, ಇದರಲ್ಲಿ ಈತರ ಟೆನ್ ಷನ್.
ಪಾಪ ಸುನೀತ ಬರೋ ಟ್ಯೆಮ್ ಆಯ್ತು, ಶೀ ಹಾಸ್ ಟು ಸ್ಟಾಂಡ್ ಆನ್ ರೋಡ್.
ಯಾಕಾದರೊ ಮನೇಲ್ ಇಲ್ದೆ ತಿರುಗ್ತಾ ಇರ್ತೀರೋ.  ಈಗ ನೋಡಿ how much i have to spend,  for nothing.
We cannot take chance .  Tommorrow this person can make one more duplicate key and do something"


"ಆವನು ಹೇಳೋದು ಸರೀನೆ, ಏನಾದರು ಹೆಚ್ಚುಕಮ್ಮಿ ಆದರೆ?  ಮೂನ್ನೆ ಮೂರನೆ ಕ್ರಾಸ್ ನಲ್ಲಿ ಕೊಲೆ ಆಗಲಿಲ್ವಾ" ಅಂದರು ರಾಮರಾಯರು.


"ಅಯ್ಯೋ ಮೊರನೆ ಬ್ಲಾಕ್ ನಲ್ಲಿ ರೀ, ಅದು ಆಗಿದ್ದು ದರೋಡೆ ,  ಮನೆ ಕೀ ಮಾಡಕ್ಕೆ ಬಂದವ್ನು, ದರೋಡೆಗೆ ಯಾಕ್ರಿ ಬರ್ತಾನೆ. ಸುಮ್ನೆ ಕುತ್ಕೂಳ್ರಿ", ಗುಡುಗಿದರು ಶೆಟ್ಟರು.


"ನಾನು ಅದನ್ನೇ ಹೇಳೋಣ ಅಂತಿದ್ದೆ" ಆಕಳಿಸಿದರು ದೊರೆಸಾಮಿ.


"ಅದಿರಲಿ, ಅಲ್ಲಾರಿ ಎಲ್ಲಾದಕ್ಕೊ ಹೆದರಿಕೊಂಡರೆ ಹೇಗೆ.  ಹೋಗಲಿ ಬಿಡಪ್ಪಾ,  ಬೀಗ ಛೇಂಜ್ ಮಾಡಿಬಿಟ್ರೆ ಆಯಿತು" ಎಂದೆ.


"ನೀವು ಕಳ್ಕೊಂಡ್ ಬಂದಾಗಲೆಲ್ಲಾ, ಬೀಗ ಛೇಂಜ್ ಮಾಡಕ್ಕಾಗತ್ತಾ" ಅಂತಾ ನಕ್ಕರು ರಾಮರಯರು.


ಈ ಜನ್ಮದಲ್ಲಿ ಮೂಗು ತುರೀಸೊ ಬುದ್ದಿ ಬಿಡಲ್ಲಾ ಇವರು, ಎಂದು ಆರ್ಥ ಬರೋಹಾಗೆ ಲುಕ್ ಕೊಟ್ಟರು ಶೆಟ್ಟರು.


"ಹೋಗೊಣ್ವ" ಎಂದರು ದೊರೆಸಾಮಿ,


"ಇರ್ರೀ ಪೂರ್ತಿ ಹೇಳ್ಳೇ ಇಲ್ಲಾ ಇನ್ನು" ಅಂದರು ಶೆಟ್ರು.


 ಮುಂದುವರಿಸಿದರು ಶ್ಯಾಮರಾಯರು"ಅಷ್ಟರಲ್ಲಿ ಬಾಗಿಲು ತೆಗೆದ"


"ಕೀ ಸಿಗ್ತಾ ಅಂದೆ, ರಿಪೇರಿ ಮಾಡುವವನಿಗೆ!"


"ವಿ ಹವ್ ಟು ಪೇ ೧೫೦ ರುಪೀಸ್, ಫಾರ್ ದಿಸ್ ಡೊಪ್ಲಿಕೇಟ್ ಕೀ.  ಆಲ್ ವೇಸ್ಟ್ ಆಪ್ ಟೇಮ್ ಆಂಡ್ ಮನಿ"  ಗೊಣಗಿದ ಸತೀಶ್.


ಒಳಗೆ ಫೋನ್ ರಿಂಗ್ ಆಗುತಿತ್ತು ಅರ್ಧ ಘಂಟಿಯಿಂದ.ಆಗ ತಾನೆ ಎಲ್ಲರೊ ಒಳ ಹೋದರು.


ಸುಮತಿ ಆಗಿನ್ನು ಬಂದವಳೆ ಫೋನ್ ರಿಸೀವ್ ಮಾಡಿದಳು "OKಪ,  ಧ್ಯಾಕ್ಸ್,  ನಾಳೆ ಕಲೆಕ್ಟ್ ಮಾಡ್ತಾನೆ.  NO PROBLEM"  ಅಂದವಳೆ ಮಗನಿಗೆ ಹೇಳಿದಳು.


"ಸುಮೇರು, ನೀನು ಇವತ್ತು ಬರೋವಾಗ, ಕೀ ಶಶಾಂಕನ ಮನೇಲಿ ಕಂಪ್ಯೊಟರ್ ಮುಂದೆ ಬಿಟ್ಟಿದ್ಯಂತೆ,  ಬ್ರಿಂಗ್ ಇಟ್ ಟುಮಾರೋ.  ಡೋಂಟ್ ಫರಗೆಟ್"


ಶ್ಯಾಮರಾಯರಿಗೆ ಕೇಳಿಸಿತು. ಪದ್ದಮ್ಮನ ಮುಖ ನೋಡಿ ಸುಮ್ಮನಾದರು.


ಈ ಶ್ಯಾಮರಾಯರ ನಸೀಬೆ ಹಾಗೆ.   ತಾವು ಮಾಡದಿದ್ದ ತಪ್ಪಿಗೆ, ಆನ್ನಿಸಿಕೊಳ್ಳುವುದು. ವಯಸ್ಸು ೭೦ ಆಗಿದೆಯಲ್ಲಾ ಅದಕ್ಕೆ.


೫೮ ವರ್ಷದ ವರೆಗೊ ಸರ್ಕಾರಿ ಕೆಲಸ ಮಾಡಿ ನಿವ್ರುತ್ತಿ ಪಡೆದು ದೊಡ್ಡ ಮಗನೊಂದಿಗೆ ಇದ್ದರು.
ಎರಡನೆಯವನು ಶರತ್, MBAಮಾಡಿ ಮುಂಬಯಿಯಲ್ಲಿ  ಬಹುರಾಷ್ಟ್ಟೀಯ ಕಂಪನಿಯಲ್ಲಿ ಒಳ್ಳೆಯ ಹುದ್ದೆಯಲ್ಲಿ  ಇದ್ದ.  ಮೊರನೆಯವಳು ಮಗಳು ಶ್ವೇತ. ಮದರಾಸಿಗೆ ಕೊಟ್ಟಿದ್ದರು.


ಎಲ್ಲರ ಹೆಸರೊ "ಎಸ್" ನಿಂದಲೇ ಪ್ರಾರಂಭ.   ಹೆಸರಿನಲ್ಲೇ ಎಷ್ಟು ಸಾಮ್ಯ ನೋಡಿ.  ಮನಸ್ಸಿನಲ್ಲೊ ಇರಬೇಕಲ್ಲ!?


             - ಮುಂದುವರಿಯುವುದು