ವಿಜ್ಜಾಚರಣ ಸಂಪನ್ನ - ಭಗವಾನ್ ಬುದ್ಧನ ಕುರಿತಾದ ಒಳ್ಳೆಯ ಅಧ್ಯಯನ

ವಿಜ್ಜಾಚರಣ ಸಂಪನ್ನ - ಭಗವಾನ್ ಬುದ್ಧನ ಕುರಿತಾದ ಒಳ್ಳೆಯ ಅಧ್ಯಯನ

ಬರಹ

ವಿಜ್ಜಾಚರಣ ಸಂಪನ್ನ ಅಂದರೆ ಜ್ಞಾನ ಮತ್ತು ಆಚರಣೆಗಳಿಂದ ಕೂಡಿದ ಎಂದರ್ಥ. ಈ ಪುಸ್ತಕ ಬುದ್ಧನ ಕುರಿತು ಪ್ರಚಲಿತ ವಿಷಯಗಳನ್ನಾಧರಿಸದೆ , ಪಾಲಿ ಭಾಷೆಯಲ್ಲಿರುವ ಬೌದ್ಧ ಸಾಹಿತ್ಯ ಮೂಲಗಳನ್ನು ಅಧ್ಯಯನ ಮಾಡಿ ಬರೆದಿರುವ ಪುಸ್ತಕ . ಉದಾಹರಣೆಗೆ ಎಲ್ಲರೂ ನಂಬಿಕೊಂಡಿರುವಂತೆ ರಾಜಕುಮಾರ ಸಿದ್ಧಾರ್ಥ ಒಬ್ಬ ರೋಗಿ , ಹಣ್ಣು ಹಣ್ಣು ಮುದುಕ, ಮತ್ತು ಒಂದು ಶವಯಾತ್ರೆಯನ್ನು ನೋಡಿ ಸಂಸಾರವನ್ನು ತ್ಯಜಿಸಿದ ಘಟನೆ ನಿಜಕ್ಕೂ ಅವನ ಜೀವನದಲ್ಲಿ ನಡೆದದ್ದೇ ಅಲ್ಲ ; ಅದು ಬೇರೆ ಯಾರೋ ಸನ್ಯಾಸಿಗೆ ಸಂಬಂಧಿಸಿದ್ದು ರಾಜಕುಮಾರ ಸಿದ್ದಾರ್ಥನಿಗೆ ಆರೋಪಿಸಲ್ಪಟ್ಟು , ಅಸಂಖ್ಯ ಕಲಾವಿದರಿಗೆ , ಕವಿಗಳಿಗೆ ವಸ್ತುವಾಗಿದೆ.
ಅವನ ತಿಳುವಳಿಕೆ , ಜ್ಞಾನವನ್ನು ಪಡೆದ ರೀತಿ, ನಡೆಸಿದ ಚರ್ಚೆಗಳು , ಮುಖ್ಯ ಉಪದೇಶಗಳೆಲ್ಲ ಇಲ್ಲಿ ಚೆನ್ನಾಗಿ ಬಂದಿವೆ. ಬುಧ್ಧ ದೇವರ ವಿಷಯದಲ್ಲಿ , ಸೃಷ್ಟಿಯ ಕುರಿತು ಮೌನವನ್ನು ಧರಿಸುತ್ತಾನೆ. ಮನುಷ್ಯ ಜೀವನದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅವು ಅಪ್ರಸ್ತುತ ಎಂದು ಅವನ ವಿಚಾರ. ಅವನ ಮುಖ್ಯ ಉಪದೇಶ ಒಂದು ಬೆಟ್ಟದ ಮೇಲೆ ಕೊಟ್ಟದ್ದು . ಅದರಲ್ಲಿ ಅವನು ಹಿರಿಯರೊಂದಿಗೆ , ಕಿರಿಯರೊಂದಿಗೆ , ನೆರೆಹೊರೆಯವರೊಂದಿಗೆ , ಒಡೆಯನೊಂದಿಗೆ, ಸೇವಕರೊಂದಿಗೆ , ಹೆಂಡತಿ ಮಕ್ಕಳೊಂದಿಗೆ , ತಂದೆ ತಾಯಂದಿರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದು ಹೇಳುತ್ತಾನೆ. ದೇಹವನ್ನು ಅತಿಯಾಗಿ ದಂಡಿಸುವದೂ ಒಳ್ಳೆಯದಲ್ಲ ; ಅತಿ ಭೋಗವೂ ಒಳ್ಳೆಯದಲ್ಲ; ಮಧ್ಯಮಮಾರ್ಗವೇ ಸರಿಯಾದದ್ದು ಎಂದು ತಥಾಗತ ಬುಧ್ಧನ ಉಪದೇಶ.

ಈ ಪುಸ್ತಕ ಕಾವ್ಯಾಲಯ ಪ್ರಕಾಶನದ ಪ್ರಕಟಣೆಯಾಗಿದ್ದು , ಈಗ ಮುದ್ರಣದಲ್ಲಿಲ್ಲ . ಇದು ಬಹುಶ: ಇಂಗ್ಲೀಷ್ ಪುಸ್ತಕದ ಕನ್ನಡ ಅನುವಾದವಾಗಿದ್ದು , ಲೇಖಕರ ಹೆಸರು ನೆನಪಿನಲ್ಲಿಲ್ಲ. ಅನೇಕ ವರ್‍ಷಗಳ ಹಿಂದೆ ವಾಚನಾಲಯವೊಂದರಲ್ಲಿ ಓದಿದ್ದು ಆ ಪುಸ್ತಕವನ್ನು ಅಂಗಡಿಗಳಿಗೆ ಹೋದಾಗಲೆಲ್ಲ ಕೇಳುತ್ತಿದ್ದೇನೆ. ಇನ್ನೂವರೆಗೆ ಸಿಕ್ಕಿಲ್ಲ