ವಿದಾಯ
ಬರಹ
ವಿದಾಯ:
ವಿದಾಯ ಗೆಳತಿ ನನ್ನೆದೆಯ ಒಡತಿ,
ನಿನ್ನ ಮಡಿಲ ತೂಲಿಕೆಯ ಈ ಕೊನೆಯ ಕ್ಷಣಗಳೇ ಧನ್ಯ.
ಆ ಪ್ರೀತಿ ಕಣ್ಗಳ ನೋಡಿ ಮಡಿವುದೇ ಪುಣ್ಯ.
ಜೀವನವೆಂಬ ಗುಡಿಗೆ ನೀ ಬೆಳಕಾಗಿ ಬಂದೆ,
ಆನಂದ ನನದಾಗಿ ಹೊನಲಲ್ಲೆ ಮಿಂದೆ.
ಹೃದಯವೆಂಬ ರಂಗಕೆ ನೀ ಇಂಪಾಗಿ ಬಂದೆ,
ಸಂತೊಷ ಮನ ತುಂಬಿ ಸಿಹಿಯನ್ನೆ ಸವಿದೆ.
ಆದರೆ ಈಗ ಬೆಳಕು ಸರಿದು ಅಂಧತೆ ಕವಿದಿದೆ,
ಇಂಪು ಮುನಿದು ಮೌನರಾಗ ಹಾಡಿದೆ.
ಗೆಳತಿ ಆದರೂ ನೀನೇಕೆ ಬಾರದೆ ಹೋದೆ?
ಕ್ಷಮಿಸು ಗೆಳತಿ ನಿನಗೀಯಲು ಉಳಿದಿರುವುದು ಈ ವಿದಾಯ ಒಂದೆ.