‘ಇಂಡೋನೇಶಿಯಾದಲ್ಲಾಗುವ ಬದಲಾವಣೆಗಳು ಇಂಡಿಯಾದ ಮೇಲೆ ಪರಿಣಾಮ ಬೀರುತ್ತವೆಯೆ’? ಎಂಬ ಪ್ರಶ್ನೆ ಹಾಕಿದರೆ ‘ಅಲ್ಲಿಂದ ಎದ್ದ ಸುನಾಮಿ ಅಲೆಗಳು ನಮ್ಮ ದೇಶದ ತೀರ ಪ್ರದೇಶಗಳನ್ನು ಮುಳುಗಿಸಬಹುದು’ ಎನ್ನಬಹುದು - ನನ್ನಂಥ ಸಾಮಾನ್ಯ ಜನ. ಇದೇ ಪ್ರಶ್ನೆಯನ್ನು ಬಿ.ಎಲ್.ಪಿ.ಸಿಂಹ ಅವರಿಗೆ ಹಾಕಿ ನೋಡಿ. ‘ಇಂಡೋನೇಶಿಯಾದಲ್ಲಿ ಪೆಟ್ರೋಲ್ ಮೇಲಿನ ಸಬ್ಸಿಡಿ ತೆಗೆದು ಹಾಕಿದರೆ, ಇಂಡಿಯಾದ ಸ್ಕೂಟರ್ಗಳನ್ನು ಅಲ್ಲಿ ಹೆಚ್ಚು ಮಾರಾಟ ಮಾಡಬಹುದು’ ಎಂದು ಬಿಡುತ್ತಾರೆ. ಇಂಡೋನೇಶಿಯಾದ ಪೆಟ್ರೋಲಿಗೂ, ಇಂಡಿಯಾದ ಸ್ಕೂಟರಿಗೂ ಎತ್ತಣಿಗೆತ್ತ ಸಂಬಂಧವಯ್ಯಾ ಎಂದು ಯೋಚಿಸುವ ಮೊದಲು, ‘ಈ ಬಿ.ಎಲ್.ಪಿ. ಸಿಂಹ ಯಾರು’? ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕು.
ವಿದೇಶಿ ಸವಾರರ ‘ಬಯಕೆ’ ಕೆರಳಿಸಿರುವ ಅಪ್ಪಟ ಸ್ವದೇಶಿ ಬೈಕು!
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ