ವಿಧ್ಯಾಭ್ಯಾಸ ಮತ್ತು ಕಾಲೇಜು

ವಿಧ್ಯಾಭ್ಯಾಸ ಮತ್ತು ಕಾಲೇಜು

ಬರಹ

ಇತ್ತೀಚೆಗೆ ಮಿತ್ರರೊಂದಿಗೆ ಇಂದಿನ ವಿಧ್ಯಾಭ್ಯಾಸ ಕ್ರಮದ ಬಗ್ಗೆ ಹರಟುತ್ತಿದ್ದೆವು. ಅದರಲ್ಲಿ ನಗರಗಳಲ್ಲಿನ ಕಾಲೇಜು/ಇಂಗಿನಿಯರಿಂಗ್ ಕಾಲೇಜುಗಳಲ್ಲಿ ಓದುತ್ತಿರುವ ವಿಧ್ಯಾರ್ಥಿಗಳ ಕೆಲವು ಭಾವನೆಗಳನ್ನು ಕೇಳಿ ಆಶ್ಚರ್ಯವಾಯಿತು. ಅದೆಂದರೆ ಒಂದೋ ಎರಡೋ ವಿಷಯಗಳಲ್ಲಿ ಫೇಲ್ ಆಗುವುದು ಪ್ರತಿಷ್ಠೆಯ ಲಕ್ಷಣವಂತೆ !! ಪರೀಕ್ಷೆಯದಿನ ಮಲಗಿದ್ದೆ ಎಂದು ಹೇಳುವುದೋ ಅಥವಾ ನೆನಪೇ ಆಗಲಿಲ್ಲ ಎಂದು ಹೇಳುವುದೋ ಮಾಡಿದರೆ ಅವನೇ/ಳೇನು ಅಷ್ಟೊಂದು ’ಗಾಂಧಿ’ ಯಲ್ಲ ಎಂಬ ಅಭಿಪ್ರಾಯವನ್ನು ಮಿತ್ರವೃಂದದಲ್ಲಿ ಹೇಳಿಕೊಳ್ಳುವುದು ಲಕ್ಷಣವಂತೆ!

ಇನ್ನು ಉದ್ಯೋಗಾರ್ಥಿಗಳಿಗಾಗಿ ಅರಸುವ ಕಂಪನಿಗಳು ಇನ್ನು ಮುಂದೆ ೬೦% ಅಥವಾ ೭೦% ಮಾರ್ಕುಗಳ ಮಾನದಂಡದ ಬದಲು ಕನಿಷ್ಠ ೨/೩ ವಿಷಯಗಳಲ್ಲಿ ಒಮ್ಮೆಯಾದರೂ ಅನುತ್ತೀರ್ಣನಾಗಿರತಕ್ಕದ್ದು ಎಂದು ಕೇಳಬಹುದೇನೋ :-)

ಆಹಾ ಏನು ವಿಧ್ಯಾಭ್ಯಾಸ, ಎಂತಹ ವಿದ್ಯಾರ್ಥಿಗಳು !