"ವಿನೂತನ-ರಾಜರ್ಷಿ"

"ವಿನೂತನ-ರಾಜರ್ಷಿ"

ಸಂಸಾರವ ತ್ಯಜಿಸಿರುವ ತ್ಯಾಗಿ
'ಹರಿ-ಹರ' ನೆನ್ನೊವ ಶಿವಯೋಗಿ
ಸುತ್ತುವಾ ಹತ್ತೂರವ ಆ ಜೋಗಿ
ಸಿಕ್ಕದ್ದು ಶಿವನೆನ್ನೋ 'ತೀರಬೋಗಿ'          | ೧ |
 
'ಕೇಶ' ರಾಜನ ರಾಯನು ಇವನು
ರಂಗೇರುವ ವಸ್ತ್ರದ 'ಪೀಠೊಬಾ' ನು
'ಮಠ್-ಮಂದಿರ' ಗಳಲ್ಲಿ ಇರುವವನು
ಬಾಯಿಗೆ ಬಂದದ್ದು ಬೊಗಳುವನು            | ೨ |
 
ಮೆದ್ದುವನು ಮದ್ದಿರುವ ಆ 'ಗಾಂಜಿ'
ಜಗ್ಗುವನು 'ಶೆರೆ-ಶಿಂದಿ' ಯ ಹೂಜಿ
ಮಾಡುವನು ಮಸಲತಿನ 'ರಾಜಿ'
ಚುಚ್ಚುವನು ಹುಚ್ಚೇರುವ 'ಸೂಜಿ'             | ೩ |


 


ಕಾಯಕ ನೀಗದಂತ ಕಾರಭಾರಿ
ಬಿಡುವಿಲ್ಲದೆ ಬೇಡುವ ಭಿಕಾರಿ
ಇವನೊರ್ವ ಇಹಲೋಕ ಸಂಚಾರಿ
ಹಾಕುವರು ಜನ ಇವಗೆ 'ಛೀಮಾರಿ'          | ೪ |
 
ಸಂಸಾರ ಸಾಕಾಗಿ ಆದ ಸನ್ಯಾಸಿ
ಸಾಸಾರೆಂದು ಬ್ರಮಿಸಿದ ಬಿಕನಾಸಿ
ಬೆಂಬಿಡದ ಭೂತದಂತ ಬೇಬರ್ಶಿ
ತನ್ನತಾನೆಂದ "ವಿನೂತನ-ರಾಜರ್ಷಿ"       | ೫ | 
 
                       ರಚನೆ : ಸಂಜಯ ಉಮರಾಣಿ